ಕನ್ನಡಿಗನ ʼಕಬ್ಜʼಕ್ಕೆ ಬಾಲಿವುಡ್​ ಸೆಲೆಬ್ರಿಟಿಗಳು ಫಿದಾ..! ಏನಂದ್ರು ಗೊತ್ತಾ ಹಿಂದಿ ಮಂದಿ..?

ಆರ್​. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದ ಟ್ರೇಲರ್​ ಶನಿವಾರವಷ್ಟೇ, ಅಮಿತಾಭ್​ ಬಚ್ಚನ್​ ಅವರಿಂದ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಟ್ರೇಲರ್​ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿದ್ದು, ಅದರಲ್ಲೂ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Written by - Krishna N K | Last Updated : Mar 6, 2023, 06:31 PM IST
  • ಆರ್​. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದ ಟ್ರೇಲರ್ ರಿಲೀಸ್‌ ಆಗಿದೆ.
  • ಶನಿವಾರವಷ್ಟೇ, ಅಮಿತಾಭ್​ ಬಚ್ಚನ್​ ಅವರಿಂದ ಅಧಿಕೃತವಾಗಿ ಬಿಡುಗಡೆಯಾಗಿದೆ.
  • ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಉಪ್ಪಿ ಕಬ್ಜ ಟ್ರೇಲರ್‌ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡಿಗನ ʼಕಬ್ಜʼಕ್ಕೆ ಬಾಲಿವುಡ್​ ಸೆಲೆಬ್ರಿಟಿಗಳು ಫಿದಾ..! ಏನಂದ್ರು ಗೊತ್ತಾ ಹಿಂದಿ ಮಂದಿ..? title=

Kabzaa movie : ಆರ್​. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದ ಟ್ರೇಲರ್​ ಶನಿವಾರವಷ್ಟೇ, ಅಮಿತಾಭ್​ ಬಚ್ಚನ್​ ಅವರಿಂದ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಟ್ರೇಲರ್​ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿದ್ದು, ಅದರಲ್ಲೂ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬಾಲಿವುಡ್​ ನಟ-ನಟಿಯರು ಮತ್ತು ತಂತ್ರಜ್ನರಾದ ಅಜಯ್​ ದೇವಗನ್​, ರಾಕೇಶ್​ ರೋಶನ್​, ಮನೋಜ್​ ಬಾಜಪೇಯಿ, ಶ್ರೇಯಸ್​ ತಲ್ಪಾಡೆ, ಕಶ್ಮೀರಾ ಶಾ, ರೋನಿತ್ ರಾಯ್​, ಮಧುರ್​ ಭಂಡಾರ್ಕರ್​, ಮೀರಾ ಚೋಪ್ರಾ, ಕುನಾಲ್​ ಕೋಹ್ಲಿ ಸೇರಿದಂತೆ ಹಲವರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಿಪಡಿಸಿದ್ದಾರೆ. ಚಿತ್ರದ ಪಾತ್ರಗಳು, ಗ್ರಾಫಿಕ್ಸ್​, ಮೇಕಿಂಗ್​ ಎಲ್ಲವೂ ಅದ್ಭುತವಾಗಿದೆ ಎನ್ನುವುದರ ಜತೆಗೆ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Tiger Nageswara Rao : ಅಂತಿಮ ಹಂತ ತಲಪಿದ 'ಟೈಗರ್ ನಾಗೇಶ್ವರ ರಾವ್' ಶೂಟಿಂಗ್‌..! ಕುಖ್ಯಾತ ಕಳ್ಳನ ಕಥೆಯಲ್ಲಿ ʼರವಿತೇಜʼ

'ಕಬ್ಜಾ' ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಉಪೇಂದ್ರ, ಸುದೀಪ್​, ಶಿವರಾಜ್​ಕುಮಾರ್​, ಶ್ರೀಯಾ ಶರಣ್​, ಕಬೀರ್ ದುಹಾನ್​ ಸಿಂಗ್​, ಪ್ರಮೋದ್​ ಶೆಟ್ಟಿ, ನವಾಬ್​ ಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು ಶ್ರೀ ಸಿದ್ಧೇಶ್ವರ ಎಂಟರ್​ಪ್ರೈಸಸ್​ನಡಿ ಆರ್​. ಚಂದ್ರು ನಿರ್ಮಿಸುತ್ತಿದ್ದು, ಆನಂದ್​ ಮೋಷನ್​ ಪಿಕ್ಚರ್ಸ್​, ಇನ್ವೀನಿಯೋ ಆರಿಜಿನ್​, ರುಚಿರಾ ಎಂಟರ್ಟೈನ್​ಮೆಂಟ್ಸ್​ ಅಂಡ್​ ಸಿನಿಮಾಸ್​ ಸಂಸ್ಥೆಗಳು ನಿರ್ಮಾಣದಲ್ಲಿ ಕೈ ಜೋಡಿಸಿವೆ. ಚಿತ್ರವು ಮಾರ್ಚ್​ 17ರಂದು ಪುನೀತ್​ ರಾಜ್​ಕುಮಾರ್​ ಅವರ ಹುಟ್ಟುಹಬ್ಬದ ಅಂಗವಾಗಿ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News