sachin tendulkar-Joe Root: ಟೀಂ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. 24 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಅವರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಟೆಸ್ಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಅವುಗಳಲ್ಲಿ ಒಂದು. ಸಚಿನ್ ತಮ್ಮ ವೃತ್ತಿ ಜೀವನದಲ್ಲಿ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 15,921 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ 13,378 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಸದ್ಯದ ಕ್ರಿಕೆಟಿಗರ ಪೈಕಿ ಇಂಗ್ಲೆಂಡ್ ಹಿರಿಯ ಆಟಗಾರ ಜೋ ರೂಟ್ ಮಾತ್ರ ಸಚಿನ್ ದಾಖಲೆಗೆ ಹತ್ತಿರವಾಗಿದ್ದಾರೆ. ರೂಟ್ ಇದುವರೆಗೆ 143 ಟೆಸ್ಟ್ಗಳಲ್ಲಿ 11,942 ರನ್ ಗಳಿಸಿದ್ದಾರೆ. ಸಚಿನ್ ದಾಖಲೆಯನ್ನು ರೂಟ್ ಮುರಿಯುವ ಸಾಧ್ಯತೆಗಳು ತುಂಬಾ ಹೆಚ್ಚಿವೆ ಎಂದು ಭಾರತದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಸದ್ಯಕ್ಕೆ ರೂಟ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ ಎಂಬುದನ್ನೂ ಅವರು ಹೇಳಿದ್ದಾರೆ.
ಇದುವರೆಗೆ ಅವರು 143 ಟೆಸ್ಟ್ಗಳಲ್ಲಿ 11,942 ರನ್ ಗಳಿಸಿದ್ದಾರೆ. ಸಚಿನ್ 200 ಟೆಸ್ಟ್ ಆಡಿದ್ದಾರೆ. ಇನ್ನೂ ಐದಾರು ವರ್ಷಗಳಲ್ಲಿ ಅವರು ಕನಿಷ್ಠ 4500 ರನ್ ಗಳಿಸಿ... ಸಚಿನ್ ದಾಖಲೆ ಮುರಿಯಬಹುದು.
ಇದನ್ನೂ ಓದಿ-IND vs SL: ಮೊದಲ ಪಂದ್ಯದಲ್ಲೆ ಅನಾಹುತ..ರವಿ ಬಿಷ್ಣೈ ಮುಖಕ್ಕೆ ಅಪ್ಪಳಿಸಿದ ಬಾಲ್, ಗಳಗಳನೇ ಅತ್ತ ಆಟಗಾರ..!
ರೂಟ್ ಒಬ್ಬ ಅದ್ಭುತ ಆಟಗಾರನಾಗಿದ್ದರಿಂದ ಮಾತ್ರ ಇದು ಸಾಧ್ಯವಾಗಿದೆ. ಆದರೆ ಅವರು ಮುಂದಿನ ಆರು ವರ್ಷ ಫಿಟ್ ಆಗಿರಬೇಕು. ಏಕೆಂದರೆ ಆಗ ಅವರಿಗೆ 39 ವರ್ಷ. ಆ ವಯಸ್ಸಿನಲ್ಲಿ ಫಿಟ್ ಆಗಿ ಉಳಿಯುವುದು ಸುಲಭವಲ್ಲ. ಆದರೆ ಅಂಕಿಅಂಶಗಳನ್ನು ಗಮನಿಸಿದರೆ ಅದು ಸಾಧ್ಯವಾಗಲಿದೆ ಎಂದು ಕಾರ್ತಿಕ್ ಹೇಳಿದ್ದಾರೆ.
ಪ್ರಸ್ತುತ ಕೊಹ್ಲಿ (8,848) ಮತ್ತು ವಿಲಿಯಮ್ಸನ್ (8,743) ಸಚಿನ್ ದಾಖಲೆಯಿಂದ ದೂರ ಉಳಿದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಆಟಗಾರರು
ಸಚಿನ್ ತೆಂಡೂಲ್ಕರ್ ( ಭಾರತ) - 200 ಟೆಸ್ಟ್ಗಳಲ್ಲಿ 15,921 ರನ್
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 168 ಟೆಸ್ಟ್ಗಳಲ್ಲಿ 13,378 ರನ್
ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ) - 166 ಟೆಸ್ಟ್ಗಳಲ್ಲಿ 13,289 ರನ್ಗಳು
ರಾಹುಲ್ ದ್ರಾವಿಡ್ (ಭಾರತ) - 286 ಟೆಸ್ಟ್ಗಳಲ್ಲಿ 286 ರನ್ಗಳು
) – 161 ಟೆಸ್ಟ್ಗಳಲ್ಲಿ 12,472 ರನ್.
ಇದನ್ನೂ ಓದಿ-IND vs SL: ಬ್ಯೂ ಬಾಯ್ಸ್ ಅಬ್ಬರಕ್ಕೆ ಮಣಿದ ಶ್ರೀಲಂಕಾ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.