ಶುಭ್ಮನ್ ಅಲ್ಲ… ಟೆಸ್ಟ್’ನಲ್ಲಿ 7 ಶತಕ ಸಿಡಿಸಿದ ಈ ಆಟಗಾರನೇ ರೋಹಿತ್ ಜೊತೆ ಆರಂಭಿಕರಾಗಿ ಕಣಕ್ಕಿಳಿಯೋದು!

Rohit Sharma Opening Partner: ಎಲ್ಲಾ ಮೂರು ಮಾದರಿಗಳಲ್ಲಿ ಶತಕ ಸಿಡಿಸಿರುವ ಯುವ ಆಟಗಾರ ಶುಭ್ಮನ್ ಗಿಲ್ ಭಾರತದ ನೂತನ ನಂಬರ್-1 ಓಪನರ್ ಆಗಿ ಹೊರಹೊಮ್ಮಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಗಿಲ್ ಪ್ರಭಾವಶಾಲಿ ಪ್ರದರ್ಶನದಿಂದಾಗಿ ಇಲ್ಲೊಬ್ಬ ಅನುಭವಿ ಆಟಗಾರನ ನಿರೀಕ್ಷೆಗಳು ಮಸುಕಾಗಿವೆ.

Written by - Bhavishya Shetty | Last Updated : Jun 23, 2023, 01:58 PM IST
    • ಜುಲೈ 12 ರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಸರಣಿ ನಡೆಯಲಿದೆ.
    • ಎರಡು ಟೆಸ್ಟ್ ಪಂದ್ಯಗಳ ಬಳಿಕ ಜುಲೈ 27 ರಿಂದ ಏಕದಿನ ಸರಣಿ ಆರಂಭವಾಗಲಿದೆ.
    • ಈ ಸರಣಿಯಲ್ಲಿ ಟೀಂ ಇಂಡಿಯಾದ ಆರಂಭಿಕ ಜೋಡಿಯಲ್ಲಿ ಬದಲಾವಣೆ ಆಗಬಹುದು.
ಶುಭ್ಮನ್ ಅಲ್ಲ… ಟೆಸ್ಟ್’ನಲ್ಲಿ 7 ಶತಕ ಸಿಡಿಸಿದ ಈ ಆಟಗಾರನೇ ರೋಹಿತ್ ಜೊತೆ ಆರಂಭಿಕರಾಗಿ ಕಣಕ್ಕಿಳಿಯೋದು! title=
Rohit Sharma Opening Partner

India vs West Indies, Rohit Sharma Opening Partner: ಭಾರತ ತಂಡವು ಜುಲೈ 12 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ಸರಣಿಯನ್ನು ಪ್ರಾರಂಭಿಸಲಿದೆ. ಈ ಅವಧಿಯಲ್ಲಿ 2 ಟೆಸ್ಟ್ ಪಂದ್ಯಗಳು, 3 ಏಕದಿನ ಪಂದ್ಯಗಳು ಮತ್ತು 5 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಲಿವೆ. ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅವರ ಆರಂಭಿಕ ಪಾರ್ಟ್’ನರ್ ಶುಭ್ಮನ್ ಗಿಲ್ ಅಲ್ಲದೆ, ಬೇರೊಬ್ಬ ಆಟಗಾರನಾಗಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  Team India ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ವೀರೇಂದ್ರ ಸೆಹ್ವಾಗ್ ಆಯ್ಕೆ ಆಗಲ್ಲ! ಇದು ಕಾರಣ…

ಜುಲೈ 12 ರಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಸರಣಿ ನಡೆಯಲಿದೆ. ಎರಡು ಟೆಸ್ಟ್ ಪಂದ್ಯಗಳ ಬಳಿಕ ಜುಲೈ 27 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಆರಂಭಿಕ ಜೋಡಿಯಲ್ಲಿ ಬದಲಾವಣೆ ಆಗಬಹುದು. ಡ್ಯಾಶಿಂಗ್ ಓಪನರ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಆರಂಭಿಕ ಪಾಲುದಾರರನ್ನು ಸಹ ಬದಲಾಯಿಸಬಹುದು.

ಎಲ್ಲಾ ಮೂರು ಮಾದರಿಗಳಲ್ಲಿ ಶತಕ ಸಿಡಿಸಿರುವ ಯುವ ಆಟಗಾರ ಶುಭ್ಮನ್ ಗಿಲ್ ಭಾರತದ ನೂತನ ನಂಬರ್-1 ಓಪನರ್ ಆಗಿ ಹೊರಹೊಮ್ಮಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಗಿಲ್ ಪ್ರಭಾವಶಾಲಿ ಪ್ರದರ್ಶನದಿಂದಾಗಿ ಇಲ್ಲೊಬ್ಬ ಅನುಭವಿ ಆಟಗಾರನ ನಿರೀಕ್ಷೆಗಳು ಮಸುಕಾಗಿವೆ. ಇಲ್ಲಿ ಉಲ್ಲೇಖಿಸಿರುವ ಆಟಗಾರ ಬೇರೆ ಯಾರೂ ಅಲ್ಲ, ಅವರೇ ಶಿಖರ್ ಧವನ್. ODI ಸ್ಪೆಷಲಿಸ್ಟ್ ಶಿಖರ್ ಧವನ್ ಭಾರತ ತಂಡದಿಂದ ಹೊರಗಿದ್ದಾರೆ. ಆದರೆ BCCI ಕೇಂದ್ರ ಒಪ್ಪಂದದ ಭಾಗವಾಗಿದ್ದಾರೆ.

ಈ ಮಧ್ಯೆ ಶಿಖರ್ ಧವನ್ ಅವರು ಬೆಂಗಳೂರಿನ ಎನ್‌ ಸಿ ಎಯಲ್ಲಿ ವ್ಯಾಯಾಮ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಭಾರತ ತಂಡದ ಕೆಲ ಶಕ್ತಿಶಾಲಿ ಆಟಗಾರರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಶಿಖರ್ ಧವನ್‌ ಗೆ ಬ್ಯಾಕ್‌ಅಪ್ ಓಪನರ್ ಆಗಿ ಅವಕಾಶ ಸಿಗಬಹುದು.

ಇದನ್ನೂ ಓದಿ: IND vs WI: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ! ಈ ಆಟಗಾರನಿಗೆ ಕಡೆಗೂ ಅಸ್ತು ಅನ್ನಲಿದೆ ಸಮಿತಿ

ವಿಶ್ವಕಪ್ ವರೆಗಿನ ಆಯ್ಕೆಗಾರರ ​​ಯೋಜನೆಯಲ್ಲಿ ಶಿಖರ್ ಧವನ್ ಅವರನ್ನು ಸೇರಿಸಲಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಬಿಸಿಸಿಐ ಅಧಿಕಾರಿ ಹೇಳಿಕೆಯನ್ನು ಉಲ್ಲೇಖಿಸಿ ಇನ್ಸೈಡ್‌ ಸ್ಪೋರ್ಟ್ ವರದಿ ಮಾಡಿದ್ದು, “ಶಿಖರ್ ಧವನ್  ನಮ್ಮ ಯೋಜನೆಯಲ್ಲಿದ್ದಾರೆ. ಯುವ ಆಟಗಾರರಿಗೆ ಆದ್ಯತೆ ನೀಡಲಾಗುವುದು. ಶಿಖರ್ ಧವನ್ ಅವರನ್ನು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನೋಡಬೇಕೋ ಅಥವಾ ಏಷ್ಯಾಕಪ್‌ನಲ್ಲಿ ನೋಡಬೇಕೋ ಎಂಬುದು ಈಗ ಆಯ್ಕೆಗಾರರಿಗೆ ಬಿಟ್ಟದ್ದು” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News