ಟೀಂ ಇಂಡಿಯಾದ ಸುಟ್ಟಗಾಯಕ್ಕೆ ಉಪ್ಪು ಎರಚಿದ ಪಾಕ್ ಪ್ರಧಾನಿ!

ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರು ಟೀಂ ಇಂಡಿಯಾದ ಸುಟ್ಟಗಾಯಗಳಿಗೆ ಉಪ್ಪು ಎರಚುವ ರೀತಿ ಟ್ವೀಟ್ ಮಾಡಿದ್ದು ಭಾರತದ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Written by - Channabasava A Kashinakunti | Last Updated : Nov 10, 2022, 09:45 PM IST
  • 'ಭಾನುವಾರ 152/0 ವಿರುದ್ಧ 170/0'
  • ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಹೀನಾಯ ಸೋಲು
  • ಎರಡರಲ್ಲೂ ಭಾರತ 10 ವಿಕೆಟ್‌ಗಳ ಸೋಲು!
ಟೀಂ ಇಂಡಿಯಾದ ಸುಟ್ಟಗಾಯಕ್ಕೆ ಉಪ್ಪು ಎರಚಿದ ಪಾಕ್ ಪ್ರಧಾನಿ! title=

Shehbaz Sharif Tweet On Team India Defeat : ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಇದು ಭಾರತೀಯ ಕ್ರಿಕೆಟ್ ಪ್ರೇಮಿಗಳು ತುಂಬಾ ಹತಾಶರನ್ನಾಗಿಸಿದೆ. ಈ ಸೋಲಿಗೆ ವಿಶ್ವದೆಲ್ಲೆಡೆಯಿಂದ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರು ಟೀಂ ಇಂಡಿಯಾದ ಸುಟ್ಟಗಾಯಗಳಿಗೆ ಉಪ್ಪು ಎರಚುವ ರೀತಿ ಟ್ವೀಟ್ ಮಾಡಿದ್ದು ಭಾರತದ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

'ಭಾನುವಾರ 152/0 ವಿರುದ್ಧ 170/0'

ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಮಾಡಿರುವ ಟ್ವೀಟ್ ನಲ್ಲಿ, ಈ ಭಾನುವಾರ 152/0 ವಿರುದ್ಧ 170/0 ಪಂದ್ಯ ನಡೆಯಲಿದೆ ಎಂದು ಬರೆದಿದ್ದಾರೆ. ಶಹಬಾಜ್ ಷರೀಫ್ ಟ್ವೀಟ್‌ನಲ್ಲಿ ಇದನ್ನು ಹೊರತುಪಡಿಸಿ ಬೇರೇನನ್ನೂ ಉಲ್ಲೇಖಿಸದಿರಬಹುದು, ಆದರೆ ವಾಸ್ತವದಲ್ಲಿ ಶಹಬಾಜ್ ಷರೀಫ್ ಅವರ ಈ ಟ್ವೀಟ್ ಟೀಂ ಇಂಡಿಯಾವನ್ನು ಲೇವಡಿ ಮಾಡಿದೆ. ಏಕೆಂದರೆ ಇದು ಪಾಕಿಸ್ತಾನ ಮತ್ತು ಇಂಗ್ಲೆಂಡ್‌ನ ಸ್ಕೋರ್‌ಕಾರ್ಡ್ ಆಗಿದ್ದು, ಇದರಲ್ಲಿ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಲಾಗಿದೆ.

ಇದನ್ನೂ ಓದಿ : T20 WC : ಹಾರ್ದಿಕ್ ಪಾಂಡ್ಯಗಾಗಿ ವಿಕೆಟ್ ತ್ಯಾಗ ಮಾಡಿದ ರಿಷಬ್ ಪಂತ್!

ಎರಡರಲ್ಲೂ ಭಾರತ 10 ವಿಕೆಟ್‌ಗಳ ಸೋಲು!

ಕಳೆದ ಟಿ20 ವಿಶ್ವಕಪ್‌ನ ಗುಂಪು ಪಂದ್ಯದಲ್ಲಿ ಭಾರತವು ತನ್ನ ಮೊದಲ ಪಂದ್ಯದಲ್ಲಿ ಹತ್ತು ವಿಕೆಟ್‌ಗಳಿಂದ ಪಾಕಿಸ್ತಾನದ ವಿರುದ್ಧ ಸೋಲನುಭವಿಸಿದಾಗ ಮೊದಲ ಸ್ಕೋರ್‌ಕಾರ್ಡ್ ಪಾಕಿಸ್ತಾನದ 152/0 ಆಗಿದೆ. ಆ ವೇಳೆಯೂ ಭಾರತದ ಬೌಲರ್‌ಗಳಿಗೆ ಪಾಕಿಸ್ತಾನದ ಒಂದೇ ಒಂದು ವಿಕೆಟ್‌ ಬೀಳಿಸಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ಸ್ಕೋರ್‌ಕಾರ್ಡ್ 170/0 ಇಂದಿನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಹತ್ತು ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಇದರಲ್ಲೂ ಭಾರತಕ್ಕೆ ಇಂಗ್ಲೆಂಡ್ ನ ಯಾವುದೇ ವಿಕೆಟ್ ತೆಗೆಯಲು ಭಾರತಕ್ಕೆ ಸಾಧ್ಯವಾಗಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ಆಕ್ರೋಶ

ಈ ಬಗ್ಗೆ ಪಾಕಿಸ್ತಾನದ ಪ್ರಧಾನಿ ಲೇವಡಿ ಮಾಡಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಪಾಕಿಸ್ತಾನ ವಿರುದ್ಧದ ವಿಶ್ವಕಪ್‌ನಲ್ಲಿ ಭಾರತದ ಅತ್ಯುತ್ತಮ ದಾಖಲೆಗಳನ್ನು ಉಲ್ಲೇಖಿಸುತ್ತಿದ್ದಾರೆ. ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ರೀತಿ ಟ್ವೀಟ್ ಮಾಡಿದ್ದಕ್ಕಾಗಿ ಶಹಬಾಜ್ ಷರೀಫ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. 

ದೇಶದಲ್ಲಿ ಇತರ ಸಮಸ್ಯೆಗಳಿವೆ, ಅವುಗಳ ಮೇಲೆ ನಿಮ್ಮ ಗಮನವು ಇಲ್ಲ ಎಂದು ಒಬ್ಬ ಕಾಮೆಂಟ್ ಮಾಡಿದ್ದಾರೆ. ಈ ಎರಡೂ ಸಂದರ್ಭಗಳಲ್ಲಿ ಭಾರತ ಹತ್ತು ವಿಕೆಟ್‌ಗಳಿಂದ ಹೀನಾಯ ಸೋಲನುಭವಿಸಿರುವುದು ಸತ್ಯ.

ಇದನ್ನೂ ಓದಿ : T20 World Cupನಲ್ಲಿ ಸೋಲು ಕಂಡ ಟೀಂ ಇಂಡಿಯಾ: ಫೈನಲ್ ಪ್ರವೇಶಿಸಿದ ಇಂಗ್ಲೆಂಡ್

ಕೊನೆಯಾಗಿದೆ ಟೀಂ ಇಂಡಿಯಾ ಪಯಣ

ಪ್ರಸ್ತುತ 2022 ರ ಟಿ 20 ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರಯಾಣವು ಮುಕ್ತಾಯಗೊಂಡಿದೆ. ಅಡಿಲೇಡ್‌ನಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹತ್ತು ವಿಕೆಟ್‌ಗಳ ಸೋಲು ಎದುರಿಸಬೇಕಾಯಿತು. ಭಾರತವು ಇಂಗ್ಲೆಂಡ್‌ಗೆ ಗೆಲ್ಲಲು 169 ರನ್‌ಗಳ ಗುರಿಯನ್ನು ನೀಡಿತ್ತು, ಅದನ್ನು ಸುಲಭವಾಗಿ ಸಾಧಿಸಿತು. ಈಗ ಇಂಗ್ಲೆಂಡ್ ತಂಡ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News