T20 World Cupನಲ್ಲಿ ಸೋಲು ಕಂಡ ಟೀಂ ಇಂಡಿಯಾ: ಫೈನಲ್ ಪ್ರವೇಶಿಸಿದ ಇಂಗ್ಲೆಂಡ್

T20 World Cup 2022: ಇನ್ನು ಗೆಲುವಿನ ಗುರಿ ಬೆನ್ನತ್ತಿದ್ದ ಜೋಸ್ ಬಟ್ಲರ್ ಪಡೆ ಸುಲಭವಾಗಿ ಗೆಲುವನ್ನು ಸಾಧಿಸಿತು. ಈ ಮೂಲಕ ಟೀಮ್ ಇಂಡಿಯಾದ ಫೈನಲ್ ಕನಸು ನುಚ್ಚು ನೂರಾಯಿತು. ಇಂಗ್ಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ 170ರನ್ ಕಲೆ ಹಾಕಿ ಫೈನಲ್ ಗೆ ಗ್ರ್ಯಾಂಡ್ ಎಂಟ್ರಿ ನೀಡಿದೆ.

Written by - Bhavishya Shetty | Last Updated : Nov 10, 2022, 04:33 PM IST
    • T20 ವಿಶ್ವಕಪ್ 2022 ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾಗೆ ಸೋಲು
    • ಭಾರತ ಆರು ವಿಕೆಟ್ ನಷ್ಟಕ್ಕೆ 168 ರನ್ ಕಲೆ ಹಾಕಿತ್ತು
    • ಫೈನಲ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಜೋಸ್ ಬಟ್ಲರ್ ಪಡೆ
T20 World Cupನಲ್ಲಿ ಸೋಲು ಕಂಡ ಟೀಂ ಇಂಡಿಯಾ: ಫೈನಲ್ ಪ್ರವೇಶಿಸಿದ ಇಂಗ್ಲೆಂಡ್ title=
India

T20 World Cup 2022: ಆಸ್ಟ್ರೇಲಿಯದಲ್ಲಿ ನಡೆದ ಪ್ರತಿಷ್ಠಿತ T20 ವಿಶ್ವಕಪ್ 2022 ಸೆಮಿ ಫೈನಲ್ ನಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ, ಭಾರತಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಈ ಸಂದರ್ಭದಲ್ಲಿ ಭಾರತ ಆರು ವಿಕೆಟ್ ನಷ್ಟಕ್ಕೆ 168 ರನ್ ಕಲೆ ಹಾಕಿತ್ತು.

ಇದನ್ನೂ ಓದಿ: T20 World Cupನಲ್ಲಿ ಟೀಂ ಇಂಡಿಯಾದ ರನ್ ರೇಟ್ ಹೇಗಿದೆ ಗೊತ್ತಾ? ಅತೀ ಹೆಚ್ಚು ರನ್ ಗಳಿಸಿದವರ್ಯಾರು?

ಇನ್ನು ಗೆಲುವಿನ ಗುರಿ ಬೆನ್ನತ್ತಿದ್ದ ಜೋಸ್ ಬಟ್ಲರ್ ಪಡೆ ಸುಲಭವಾಗಿ ಗೆಲುವನ್ನು ಸಾಧಿಸಿತು. ಈ ಮೂಲಕ ಟೀಮ್ ಇಂಡಿಯಾದ ಫೈನಲ್ ಕನಸು ನುಚ್ಚು ನೂರಾಯಿತು. ಇಂಗ್ಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ 170 ರನ್ ಕಲೆ ಹಾಕಿ ಫೈನಲ್ ಗೆ ಗ್ರ್ಯಾಂಡ್ ಎಂಟ್ರಿ ನೀಡಿದೆ.

ಭಾರತದ ಪರ ಬ್ಯಾಟಿಂಗ್ ಮಾಡಿದ್ದ ಕೆ.ಎಲ್ ರಾಹುಲ್ 5 ರನ್, ರೋಹಿತ್ ಶರ್ಮಾ 27 ರನ್, ವಿರಾಟ್ ಕೊಹ್ಲಿ 50 ರನ್, ಸೂರ್ಯಕುಮಾರ್ ಯಾದವ್ 14 ರನ್, ಹಾರ್ದಿಕ್ ಪಾಂಡ್ಯ 63 ರನ್, ರಿಷಬ್ ಪಂತ್ 6 ರನ್ ಮತ್ತು ಅಶ್ವಿನ್ ಶೂನ್ಯ ರನ್ ಕಲೆ ಹಾಕಿದ್ದಾರೆ. ಇಂಗ್ಲೆಂಡ್ ಪರ ಕ್ರಿಸ್ ಜೋರ್ಡನ್ ಮೂರು ವಿಕೆಟ್ ಕಬಳಿಸಿದರೆ, ಆದಿಲ್ ರಶೀದ್ ಮತ್ತು ಕ್ರಿಸ್ ವೋಕ್ಸ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.  

ಇದನ್ನೂ ಓದಿ: Virat Kohli: ಟಿ20ಯಲ್ಲಿ 4 ಸಾವಿರ ರನ್ ಗಳ ಮೈಲಿಗಲ್ಲು ತಲುಪಿದ ಮೊದಲ ಆಟಗಾರ ಕಿಂಗ್ ಕೊಹ್ಲಿ

ಈಗಾಗಲೇ ಮೊದಲ ಸೆಮಿಫೈನಲ್ ನಲ್ಲಿ ಗೆದ್ದಿರುವ ಪಾಕಿಸ್ತಾನ ತಂಡ ಫೈನಲ್ ನಲ್ಲಿ ಇಂಗ್ಲೆಂಡ್ ನ್ನು ಎದುರಿಸಲಿದೆ. ನವೆಂಬರ್ 13ರಂದು ನಡೆಯಲಿರುವ ಫೈನಲ್ ಫೈಟ್ ನಲ್ಲಿ ಯಾವ ತಂಡ ಚಾಂಪಿಯನ್ ಆಗಲಿದೆ ಎಂಬುದನ್ನು ಕಾದುನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News