ಸಚಿನ್ ಕೊಟ್ಟ ಬ್ಯಾಟ್’ನಿಂದಲೇ ಶತಕ ಸಿಡಿಸಿ ವಿಶ್ವದಾಖಲೆ ಬರೆದ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್’ಮನ್

Shahid Afridi and Sachin Tendulkar: ಕೀನ್ಯಾ ವಿರುದ್ಧ ನಡೆದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌’ಗೆ ಪಾದಾರ್ಪಣೆ ಮಾಡಿದ ಶಾಹಿದ್ ಅಫ್ರಿದಿ, 1996ರಲ್ಲಿ ಶ್ರೀಲಂಕಾ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಬಾರಿಸಿದ್ದರು.

Written by - Bhavishya Shetty | Last Updated : Aug 19, 2023, 10:17 AM IST
    • “ಆ ವಿಶ್ವದಾಖಲೆಗೆ ಬಳಸಿದ ಬ್ಯಾಟ್​​ ಈಗಲೂ ನನ್ನ ಬಳಿಯಿದೆ”
    • “ಅದನ್ನು ಸಚಿನ್ ತೆಂಡೂಲ್ಕರ್​ ನೀಡಿದ್ದು, ನನಗೆ ತುಂಬಾನೇ ಸ್ಪೆಷಲ್”
    • ಶ್ರೀಲಂಕಾ ವಿರುದ್ಧ ವಿಶ್ವದಾಖಲೆ ಬರೆದ ಪಾಕಿಸ್ತಾನದ ಬ್ಯಾಟರ್​ ಶಾಹೀದ್​ ಅಫ್ರಿದಿ ಹೇಳಿಕೆ
ಸಚಿನ್ ಕೊಟ್ಟ ಬ್ಯಾಟ್’ನಿಂದಲೇ ಶತಕ ಸಿಡಿಸಿ ವಿಶ್ವದಾಖಲೆ ಬರೆದ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್’ಮನ್ title=
Shahid Afridi and Sachin Tendulkar Bat

Shahid Afridi and Sachin Tendulkar: ವಿಶ್ವ ಕ್ರಿಕೆಟ್​ನ ಮೋಸ್ಟ್​ ಡೇಂಜರಸ್ ಬ್ಯಾಟ್ಸ್’ಮನ್’ಗಳಲ್ಲಿ ಒಬ್ಬರಾದ ಪಾಕಿಸ್ತಾನದ ಶಾಹೀದ್​ ಅಫ್ರಿದಿ ಕೇವಲ 37 ಎಸೆತದಲ್ಲಿ ಶತಕ ಬಾರಿಸಿದ ವಿಶ್ವದಾಖಲೆ ಹೊಂದಿದ್ದಾರೆ. ಈ ವಿಶ್ವದಾಖಲೆ ಬರೆಯಲು ಅವರು ಬಳಸಿದ್ದು, ತೆಂಡೂಲ್ಕರ್​ ನೀಡಿರುವ ಬ್ಯಾಟ್ ಎಂದು ತಿಳಿದುಬಂದಿದೆ.

ಇದನ್ನೂ ಓದಿ: “ಬಯಸಿಯೋ, ಬಯಸದೆಯೋ ನಿವೃತ್ತಿ ಘೋಷಿಸುತ್ತಿದ್ದೇನೆ”: 13 ವರ್ಷಗಳ ಕ್ರಿಕೆಟ್ ಜೀವನಕ್ಕೆ ಅಂತ್ಯ ಹಾಡಿದ ವಿಶ್ವದ ಶ್ರೇಷ್ಠ ನಾಯಕ

ಶ್ರೀಲಂಕಾ ವಿರುದ್ಧ ವಿಶ್ವದಾಖಲೆ ಬರೆದ ಪಾಕಿಸ್ತಾನದ ಬ್ಯಾಟರ್​ ಶಾಹೀದ್​ ಅಫ್ರಿದಿ ಈ ಬಗ್ಗೆ ಹೇಳಿದ್ದಾರೆ. “ಆ ವಿಶ್ವದಾಖಲೆಗೆ ಬಳಸಿದ ಬ್ಯಾಟ್​​ ಈಗಲೂ ನನ್ನ ಬಳಿಯಿದೆ. ಅದನ್ನು ಸಚಿನ್ ತೆಂಡೂಲ್ಕರ್​ ನೀಡಿದ್ದು, ನನಗೆ ತುಂಬಾನೇ ಸ್ಪೆಷಲ್”​​ ಎಂದು ಹೇಳಿಕೊಂಡಿದ್ದಾರೆ.

ಕೀನ್ಯಾ ವಿರುದ್ಧ ನಡೆದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌’ಗೆ ಪಾದಾರ್ಪಣೆ ಮಾಡಿದ ಶಾಹಿದ್ ಅಫ್ರಿದಿ, 1996ರಲ್ಲಿ ಶ್ರೀಲಂಕಾ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದು ಏಕದಿನ ಕ್ರಿಕೆಟ್‌’ನಲ್ಲಿ ಅತಿ ವೇಗದ ಶತಕ ಬಾರಿಸಿದ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿತು. ಅಂದು ಶಾಹಿದ್ ಅಫ್ರಿದಿ 37 ಎಸೆತಗಳಲ್ಲಿ 11 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಾಯದಿಂದ 102 ರನ್ ಗಳಿಸಿದ್ದರು. ಈ ದಾಖಲೆ ಸುಮಾರು 18 ವರ್ಷಗಳ ಕಾಲ ಹಾಗೇ ಇತ್ತು.

ಇದನ್ನೂ ಓದಿ: ವಿಶ್ವಕಪ್’ನಲ್ಲಿ ಭಾರತ ಗೆಲ್ಲಬೇಕೆಂದರೆ ಈ ಇಬ್ಬರು ಆಟಗಾರರು ಇರಲೇಬೇಕು!: ರವಿಶಾಸ್ತ್ರಿ ಮಹತ್ವದ ಸಲಹೆ

ಬಳಿಕ 2014ರಲ್ಲಿ ಕೋರಿ ಆ್ಯಂಡರ್ಸನ್ ವೆಸ್ಟ್ ಇಂಡೀಸ್ ವಿರುದ್ಧ 36 ಎಸೆತಗಳಲ್ಲಿ ಶತಕ ಸಿಡಿಸಿ ಈ ದಾಖಲೆಯನ್ನು ಪುಡಿಗಟ್ಟಿದ್ದರು. ಇವರ ದಾಖಲೆಯನ್ನೂ ಸಹ ಮುಂದಿನ ವರ್ಷ ಅಂದರೆ 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎಬಿ ಡಿವಿಲಿಯರ್ಸ್ 31 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಏಕದಿನದಲ್ಲಿ ಅತಿ ವೇಗದ ಶತಕ ಸಿಡಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News