ಭಾರತೀಯ ಅಭಿಮಾನಿಗಳ ಗಾಯದ ಮೇಲೆ ಉಪ್ಪು ಎರಚಿದ ಪಾಕಿಸ್ತಾನಿ ಲೆಜೆಂಡ್; ಟೀಂ ಇಂಡಿಯಾ ಸೋಲಿನ ನಂತರ ಹೇಳಿದ್ದೇನು?

India vs New Zealand: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 0-3 ಕ್ಲೀನ್ ಸ್ವೀಪ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನಿಂದಾಗಿ ಭಾರತ ತಂಡದ ಹೆಸರಿನಲ್ಲಿ ಹಲವು ಕೆಟ್ಟ ದಾಖಲೆಗಳು ದಾಖಲಾಗಿವೆ.

Written by - Puttaraj K Alur | Last Updated : Nov 4, 2024, 06:00 PM IST
  • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 0-3 ಕ್ಲೀನ್ ಸ್ವೀಪ್
  • ಟೀಂ ಇಂಡಿಯಾದ ಹೀನಾಯ ಸೋಲಿಗೆ ಮಾಜಿ ಕ್ರಿಕೆಟಿಗರಿಂದ ಟೀಕೆ
  • ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಉತ್ತಮ ಅವಕಾಶವಿದೆ ಎಂದ ವಾಸಿಂ ಅಕ್ರಂ
ಭಾರತೀಯ ಅಭಿಮಾನಿಗಳ ಗಾಯದ ಮೇಲೆ ಉಪ್ಪು ಎರಚಿದ ಪಾಕಿಸ್ತಾನಿ ಲೆಜೆಂಡ್; ಟೀಂ ಇಂಡಿಯಾ ಸೋಲಿನ ನಂತರ ಹೇಳಿದ್ದೇನು? title=
ವಾಸಿಂ ಅಕ್ರಂ ಹೇಳಿದ್ದೇನು?

Wasim akram on team india: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ಮುಕ್ತಾಯವಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾವನ್ನು ಬಗ್ಗುಬಡಿಯುವ ಮೂಲಕ ಕೀವಿಸ್‌ ಪಡೆ ಐತಿಹಾಸಿಕ ಸಾಧನೆ ಮಾಡಿದೆ. ಭಾರತದ ನೆಲದಲ್ಲಿ ನ್ಯೂಜಿಲೆಂಡ್ ಮೊದಲ ಬಾರಿಗೆ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದ್ದು, ಮಾತ್ರವಲ್ಲದೆ ಟೀಂ ಇಂಡಿಯಾವನ್ನು 3-0 ಕ್ಲೀನ್ ಸ್ವೀಪ್ ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. ಮತ್ತೊಂದೆಡೆ ಭಾರತ ತಂಡ 24 ವರ್ಷಗಳ ನಂತರ ತವರಿನಲ್ಲಿ ಇಂತಹ ಹೀನಾಯ ಸೋಲನ್ನು ಎದುರಿಸಬೇಕಾಯಿತು. ವಾಸ್ತವವಾಗಿ 2000ನೇ ಇಸವಿಯಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಈ ಸರಣಿಯ 24 ವರ್ಷಗಳ ನಂತರ ಇದೀಗ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡಿದೆ. 

ಸದ್ಯ ಭಾರತ ತಂಡದ ಸೋಲು ಕ್ರಿಕೆಟ್ ಲೋಕದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಇದು ಭಾರತ ತಂಡದ ಅತ್ಯಂತ ಕೆಟ್ಟ ಹಂತವೆಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಪಾಕಿಸ್ತಾನದ ಮಾಜಿ ನಾಯಕನಿಂದ ದೊಡ್ಡ ಹೇಳಿಕೆಯೊಂದು ಬಂದಿದೆ. ಇದು ಭಾರತೀಯ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ವಾಸ್ತವವಾಗಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸಿಂ ಅಕ್ರಂ ಮಾತನಾಡಿ, ʼಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷವಾಗಿ ಸ್ಪಿನ್ನಿಂಗ್ ಟ್ರ್ಯಾಕ್‌ಗಳಲ್ಲಿ ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಉತ್ತಮ ಅವಕಾಶವಿದೆʼ ಎಂದು ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಸರಣಿಯಲ್ಲಿ ಭಾರತ 0-3 ಅಂತರದ ಐತಿಹಾಸಿಕ ಸೋಲಿನ ನಂತರ ಮತ್ತು ಇಂಗ್ಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಸರಣಿಯಲ್ಲಿ ಪಾಕಿಸ್ತಾನ 2-1 ಅಂತರದಲ್ಲಿ ಜಯಗಳಿಸಿದ ನಂತರ ಅಕ್ರಮ್ ಈ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಈ ಖ್ಯಾತ ಕ್ರಿಕೆಟರ್‌ ಪ್ರೀತಿಯಲ್ಲಿ ಬಿದ್ದು ಸಿನಿ ಕರಿಯರ್‌ ಪಣಕ್ಕಿಟ್ಟಿದ್ರು ಮಾಧುರಿ ದೀಕ್ಷಿತ್.. ಆದರೂ ಸಿಗಲಿಲ್ಲ ಆತ !

ಪಾಕಿಸ್ತಾನಕ್ಕೆ ಉತ್ತಮ ಅವಕಾಶವಿದೆ

ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅವರೊಂದಿಗೆ ಮಾತನಾಡಿದ ಅಕ್ರಮ್, ಭಾರತದ ವಿರುದ್ಧ ಪಾಕಿಸ್ತಾನಕ್ಕೆ ದೊರೆಯುವ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ. ನಾನು ಭಾರತ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯನ್ನು ನೋಡಲು ಬಯಸುತ್ತೇನೆ ಎಂದು ವಾನ್ ಹೇಳಿದ್ದಾರೆ. ಇದೇ ವಿಚಾರವಾಗಿ ಅಕ್ರಂ ಮಾತನಾಡಿದ್ದು, ಇದೊಂದು ದೊಡ್ಡ ಸರಣಿಯಾಗಲಿದೆ, ಇದು ಎರಡು ಕ್ರಿಕೆಟ್ ಹುಚ್ಚು ದೇಶಗಳಿಗೆ ತುಂಬಾ ಒಳ್ಳೆಯದುʼ ಅಂತಾ ಅಭಿಪ್ರಾಯಪಟ್ಟಿದ್ದಾರೆ.  

ತಿರುವಿನ ಪಿಚ್‌ನಲ್ಲಿ ಪಾಕಿಸ್ತಾನ ಈಗ ಭಾರತವನ್ನು ಸೋಲಿಸಬಹುದು ಎಂದು ಮೈಕೆಲ್ ವಾನ್ ಹೇಳಿದ್ದಾರೆ. ಇದಾದ ನಂತರ ಅಕ್ರಂ ಅವರು ಸ್ಪಿನ್ನಿಂಗ್ ಟ್ರ್ಯಾಕ್‌ನಲ್ಲಿ ಭಾರತವನ್ನು ಟೆಸ್ಟ್‌ನಲ್ಲಿ ಸೋಲಿಸಲು ಪಾಕಿಸ್ತಾನಕ್ಕೆ ಈಗ ಉತ್ತಮ ಅವಕಾಶವಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಮೊದಲ ಟೆಸ್ಟ್ ಪಂದ್ಯವನ್ನು ಸೋತ ನಂತರ ಪಾಕಿಸ್ತಾನ, ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತ್ತು. ಭಾರತ ಮತ್ತು ಪಾಕಿಸ್ತಾನ ನಡುವೆ ಹಲವು ವರ್ಷಗಳಿಂದ ಟೆಸ್ಟ್ ಸರಣಿ ನಡೆದಿಲ್ಲ. ಉಭಯ ತಂಡಗಳ ನಡುವಿನ ಕೊನೆಯ ಟೆಸ್ಟ್ ಪಂದ್ಯ 2007-08ರಲ್ಲಿ ನಡೆದಿದ್ದು, ಇದರಲ್ಲಿ ಭಾರತ ತಂಡ 3-1 ಅಂತರದಲ್ಲಿ ಜಯ ಸಾಧಿಸಿತ್ತು.

ಇದನ್ನೂ ಓದಿ: ವಿರಾಟ್‌ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆ ಕೇಳಿದ್ರೆ ಶಾಕ್‌ ಆಗುವಿರಿ.. ಒಂದು ಕೆಜಿಗೆ ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News