ಆಯ್ಕೆಗಾರರು ಟೀಂ ಇಂಡಿಯಾದ ಈ ಆಟಗಾರನಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದ್ದಾರೆ ಎಂದೆನಿಸುತ್ತಿದೆ. ಆಯ್ಕೆದಾರರು ಈ ಆಟಗಾರನನ್ನು ಪ್ರತಿ ಸರಣಿಯಿಂದ ಪ್ರತೀ ಬಾರಿ ಹೊರಗಿಡುತ್ತಿದ್ದಾರೆ. ಆಯ್ಕೆಗಾರರಿಂದ ನಿರ್ಲಕ್ಷಿಸಲ್ಪಟ್ಟಿರುವ ಈ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾಗಿಂತ ಉತ್ತಮವಾಗಿ ಬ್ಯಾಟಿಂಗ್ ಮಾಡುವ ಪರಿಣತಿ ಹೊಂದಿದ್ದಾರೆ. ಆದರೆ ಆಯ್ಕೆ ಸಮಿತಿರು ನಿರಂತರವಾಗಿ ಈ ಆಟಗಾರನನ್ನು ನಿರ್ಲಕ್ಷಿಸುತ್ತಿದೆ. ಈ ಆಟಗಾರ ಬೇರೆ ಯಾರೂ ಅಲ್ಲ ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಪೃಥ್ವಿ ಶಾ.
ಇದನ್ನು ಓದಿ: White Hair Problem: ಈ ಮನೆಮದ್ದುಗಳಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು
ಪೃಥ್ವಿ ಶಾ ಅವರ ವೇಗದ ಬ್ಯಾಟಿಂಗ್ ಮೂಲಕ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಮತ್ತು ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರನ್ನು ಕಾಣಬಹುದು. ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಕೂಡ ಆರಂಭಿಕ ಓವರ್‌ಗಳಿಂದಲೇ ಎದುರಾಳಿಗೆ ಭಯ ಮೂಡಿಸಿದ್ದವರು. ಮೊದಲ ಓವರ್‌ನಿಂದಲೇ ರನ್ ಮಳೆ ಸುರಿಸಿದ್ದವರು. ಒಂದೊಮ್ಮೆ ಪೃಥ್ವಿ ಶಾಗೆ ಸೆಹ್ವಾಗ್, ಸಚಿನ್ ಮತ್ತು ಲಾರಾ ಅವರ ಗ್ಲಿಂಪ್ಸ್ ಇದೆ ಎಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದರು. 22ರ ಹರೆಯದ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಆಕ್ರಮಣಕಾರಿ ಬ್ಯಾಟ್ಸ್‌ಮನ್. ಪೃಥ್ವಿ ಶಾಗೆ ಕ್ರಿಕೆಟ್‌ನಲ್ಲಿ ಉತ್ತಮ ಅವಕಾಶ ಲಭಿಸಿದರೆ, ವಿಶ್ವದಲ್ಲಿ ಭಾರತ ತಂಡ ಅತ್ಯುತ್ತಮ ಆಟವನ್ನು ಎದುರುನೋಡಬಹುದು.
ಪೃಥ್ವಿ ಶಾ ಅವರಂತಹ ಬಲಿಷ್ಠ ಆರಂಭಿಕರನ್ನು ಆಯ್ಕೆಗಾರರು ನಿರಂತರವಾಗಿ ಕಡೆಗಣಿಸುತ್ತಿದ್ದಾರೆ. ಪೃಥ್ವಿ ಶಾ ಪ್ರಸ್ತುತ ವಿಶ್ವದ ಅತ್ಯಂತ ಅಪಾಯಕಾರಿ ಯುವ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಮುಂದಿನ ದಿನಗಳಲ್ಲಿ ಟೀಂ ಇಂಡಿಯಾಕ್ಕೆ ಹೊಸ ಆರಂಭಿಕ ಬ್ಯಾಟ್ಸ್‌ಮನ್‌ಗಳ ಅವಶ್ಯಕತೆ ಇದೆ. ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಈ ಜವಾಬ್ದಾರಿಯನ್ನು ನಿಭಾಯಿಸಬಲ್ಲರು. 22 ವರ್ಷದಈ ಬ್ಯಾಟ್ಸ್‌ಮನ್ ಟೀಂ ಇಂಡಿಯಾದ ಭವಿಷ್ಯ. ಅವರ ಬ್ಯಾಟಿಂಗ್ ಎಲ್ಲರ ಮನ ಗೆದ್ದಿದೆ ಎನ್ನಬಹುದು.
ಪೃಥ್ವಿ ಶಾ ಭಾರತಕ್ಕಾಗಿ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಆದರೆ ಈಗ ಅವರ ಸ್ಥಾನವನ್ನು ಮೂರು ಸ್ವರೂಪಗಳಿಂದಲೂ ಕಸಿದುಕೊಳ್ಳಲಾಗಿದೆ. ಪೃಥ್ವಿ ಶಾ ಭಾರತದ ಪರ 5 ಟೆಸ್ಟ್ ಪಂದ್ಯಗಳನ್ನಾಡಿದ್ದು ಅದರಲ್ಲಿ 339 ರನ್ ಗಳಿಸಿದ್ದಾರೆ. ಇನ್ನು 6 ಏಕದಿನ ಪಂದ್ಯಗಳಲ್ಲಿ 189 ರನ್ ಗಳಿಸಿದ್ದಾರೆ. 63 ಐಪಿಎಲ್ ಪಂದ್ಯಗಳಲ್ಲಿ 1588 ರನ್ ಗಳಿಸಿದ್ದಾರೆ. ಜೊತೆಗೆ ಟೆಸ್ಟ್‌ನಲ್ಲಿ ಒಂದು ಶತಕ ಸಿಡಿಸಿದ್ದಾರೆ.
ಇದನ್ನು ಓದಿ: ಆನೆ ಹೋಗುತ್ತಿರುತ್ತದೆ ಶ್ವಾನ ಬೊಗಳುತ್ತಿರುತ್ತವೆ : ಚಡ್ಡಿ ಟೀಕಾಕಾರರಿಗೆ ಸವದಿ ತಿರುಗೇಟು
ಪೃಥ್ವಿ ಶಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಈ ವರ್ಷ 7.5 ಕೋಟಿಗೆ ಖರೀದಿಸಿದೆ. ಪೃಥ್ವಿ ಶಾ ಸೆಹ್ವಾಗ್ ಅವರಂತೆ ಅದ್ಭುತ ಆಟಗಾರ. ಆದರೆ ಶಾ ಇನ್ನೂ ಚಿಕ್ಕವರು. ಅಂಡರ್-19 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ಪೃಥ್ವಿ ಶಾ 2018 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಈ ಆಟಗಾರ ಟೀಮ್ ಇಂಡಿಯಾ ಪರ ಕೆಲವು ಸಂದರ್ಭಗಳಲ್ಲಿ ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಆದರೆ ಸ್ಥಿರತೆಯ ಕೊರತೆಯಿಂದಾಗಿ, ಈ ಆಟಗಾರ ಪ್ರಸ್ತುತ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.