ಬೆಂಗಳೂರು: ಬೆಂಗಳೂರಿನಲ್ಲಿ ಗುರುವಾರ ನಡೆದ ಪ್ರೊ ಕಬಡ್ಡಿ ಲೀಗ್‌ನಲ್ಲಿ (ಪಿಕೆಎಲ್ 8) ಹರಿಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್ 42-28 ಅಂತರದಲ್ಲಿ ಜಯಗಳಿಸಿದೆ. ಆ ಮೂಲಕ ಈಗ ಸೀಸನ್ ನಲ್ಲಿ ಮೂರನೇ ಗೆಲುವು ದಾಖಲಿಸಿದೆ.
22 ಅಂಕಗಳನ್ನು (19 ರೇಡ್ ಪಾಯಿಂಟ್‌ಗಳು ಮತ್ತು ಮೂರು ಟ್ಯಾಕಲ್ ಪಾಯಿಂಟ್‌ಗಳು) ಗಳಿಸುವ ಮೂಲಕ ಪವನ್ ಕುಮಾರ್ ಸೆಹ್ರಾವತ್ ಬೆಂಗಳೂರು ಬುಲ್ಸ್ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದರು.ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ಆರು ಸ್ಥಾನಗಳ ಜಿಗಿತ ಕಂಡು ಪಿಕೆಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರೆ, ಹರಿಯಾಣ ಸ್ಟೀಲರ್ಸ್ ಒಂಬತ್ತನೇ ಸ್ಥಾನದಲ್ಲಿದೆ.
Super raids, raid points aur Pawan ke jhonkhe - Bengaluru ko jeet se koi kaise roke! 🛫@BengaluruBulls register their third win of the season, this time against @HaryanaSteelers! 🔥#SuperhitPanga #HSvBLR pic.twitter.com/arVx8iY1WP
— ProKabaddi (@ProKabaddi) December 30, 2021
ಇದನ್ನೂ ಓದಿ : ಕೇರಳದ ಅಥ್ಲೀಟ್ ಜಿತಿನ್ ಜೊತೆ ಸಪ್ತಪದಿ ತುಳಿದ ಕರ್ನಾಟಕದ ಹೆಮ್ಮೆಯ ಅಥ್ಲೀಟ್ ಪೂವಮ್ಮ
ಪವನ್ ತಮ್ಮ ರೈಡಿಂಗ್ ನಿಂದಲೇ ಪಂದ್ಯದುದ್ದಕ್ಕೂ ಗಮನಸೆಳೆದರು, ಪ್ರಾಥಮಿಕವಾಗಿ ಬಲಭಾಗದ ರೈಡರ್, ಪವನ್ ಎರಡೂ ಕಡೆಯಿಂದ ದಾಳಿ ಮಾಡಿ ಎದುರಾಳಿಗಳನ್ನು ಬಗ್ಗು ಬಡಿಯುವಲ್ಲಿ ಯಶಸ್ವಿಯಾದರು.ವಿಶೇಷವೆಂದರೆ ಅವರು ಕಳೆದ ಋತುವಿನಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಪವನ್ 39 ಅಂಕಗಳನ್ನು ಗಳಿಸಿದ್ದರು.
ಇದನ್ನೂ ಓದಿ : Vaccine for Children : ಜನವರಿ 3ರಿಂದ ರಾಜ್ಯದ ಮಕ್ಕಳಿಗೂ ಸಿಗಲಿದೆ ವ್ಯಾಕ್ಸಿನ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.