ಕಾಮನ್ವೆಲ್ತ್ ಗೇಮ್ಸ್ 2022: ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಕೆನಡಾದ ಮಿಚೆಲ್ ಲಿ ಅವರನ್ನು ಸೋಲಿಸಿದ ನಂತರ ಪಿವಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಇಂದು CWG 2022 ರ ಅಂತಿಮ ದಿನವಾಗಿದೆ.
ಇದನ್ನೂ ಓದಿ: CWG 2022 : ಜಾವೆಲಿನ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಭಾರತೀಯ ಮಹಿಳಾ ಆಟಗಾರ್ತಿ!
ಕಳೆದ ದಿನ ಕಾಮನ್‌ವೆಲ್ತ್ ಗೇಮ್ಸ್ 2022 ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಪಿವಿ ಸಿಂಧು ಸಿಂಗಾಪುರದ ಯೆಯೊ ಜಿಯಾ ಮಿನ್ ವಿರುದ್ಧ 2-0 ಮುನ್ನಡೆ ಸಾಧಿಸಿದ್ದರು. ಈ ಮೂಲಕ ಸಿಂಧು ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಇದೀಗ ಚಿನ್ನ ಪಡೆದುಕೊಂಡಿದ್ದು, ಭಾರತಕ್ಕೆ ಮತ್ತೆ ಬಂಗಾರದ ಸಿಂಧೂರವನ್ನಿಟ್ಟಿದ್ದಾರೆ.
ಇನ್ನು ಕಾಮನ್‍ವೆಲ್ತ್ ಗೇಮ್ಸ್‍ನ ಕೊನೆಯ ದಿನದಂದು ಭಾರತ ಐದು ಚಿನ್ನದ ಪದಕಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಕೂಡ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಪುರುಷರ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಕೂಡ ತಮ್ಮ ಫೈನಲ್‌ನಲ್ಲಿ ಆಡಲಿದ್ದಾರೆ. ಸಂಜೆಯ ನಂತರ ಪುರುಷರ ಹಾಕಿ ತಂಡವು ಚಿನ್ನದ ಪದಕಕ್ಕಾಗಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ: CWG 2022: ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಒಲಿದ ಮತ್ತೊಂದು ಚಿನ್ನ, ನಿಕಹತ್ ಜರೀನ್ ಅದ್ಭುತ ಸಾಧನೆ
ಟೇಬಲ್ ಟೆನಿಸ್‌ನಲ್ಲಿ ಅಚಂತ ಶರತ್ ಕಮಲ್ ಅವರು ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಆಡುವ ಮೂಲಕ ಅಂತಿಮ ವೈಭವವನ್ನು ಕಾಣಲಿದ್ದಾರೆ. ಭಾರತವು ಪ್ರಸ್ತುತ 56 ಪದಕಗಳನ್ನು (19 ಚಿನ್ನ, 15 ಬೆಳ್ಳಿ, 22 ಕಂಚು) ಹೊಂದಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.