ನಾಗಪುರ್: ಇಲ್ಲಿನ ವಿದರ್ಭ ಕ್ರಿಕೆಟ್ ಮೈದಾನದಲ್ಲಿ ನಡೆದ ಕರ್ನಾಟಕ ಮತ್ತು ಮುಂಬೈ ತಂಡಗಳ ನಡುವೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಬಲಿಷ್ಠ ಮುಂಬೈ ತಂಡದ ವಿರುದ್ದ ಇನ್ನಿಂಗ್ಸ್ ಮತ್ತು 20 ರನ್ನಗಳ ಭರ್ಜರಿ ಜಯವನ್ನು ಸಾಧಿಸಿದೆ. ಆ ಮೂಲಕ ಸೆಮಿಫೈನಲ್ ಗೆ ಪ್ರವೇಶ ಪಡೆದಿರುವ ಕರ್ನಾಟಕ ತಂಡವು ಈ ಬಾರಿ ಟ್ರೋಪಿ ಗೆಲ್ಲುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ ತಂಡದ ನಾಯಕ ವಿನಯಕುಮಾರ್ ಮುಂಬೈ ತಂಡದ 6 ವಿಕೆಟ್ ಗಳನ್ನು ಪಡೆಯುವುದರ ಮೂಲಕ ಮುಂಬೈ ತಂಡವನ್ನು 173ಕ್ಕೆ ನಿಯಂತ್ರಿಸಿದರು. ಇದಕ್ಕೆ ಪ್ರತಿಯಾಗಿ ಇನ್ನಿಂಗ್ಸ್ ಗೆ ಇಳಿದ ಕರ್ನಾಟಕವು ಶ್ರೇಯಸ್ ಗೋಪಾಲ್ ರ 150 ಹಾಗೂ ಗೌತಮ್ ರ 79 ರನ್ಗಳ ನೆರವಿನಿಂದ 570 ರನ್ ಗಳ ಬೃಹತ್ ಮೊತ್ತವನ್ನು ಗಳಿಸಿತು. ಆಗಲೇ ಮೊದಲ ಇನ್ನಿಂಗ್ಸ್ ನಲ್ಲಿ 397 ರನ್ ಗಳ ಹಿನ್ನಡೆ ಅನುಭವಿಸಿದ್ದ ಮುಂಬೈ ತಂಡ ತನ್ನ ಎರಡನೇಯ ಇನ್ನಿಂಗ್ಸ್ನಲ್ಲಿ ಕರ್ನಾಟಕದ ಬೌಲರ್ ಕೆ ಗೌತಂರ ಪರಿಣಾಮಕಾರಿ ಬೌಲಿಂಗ ದಾಳಿಯಿಂದಾಗಿ 377 ರನ್ ಗಳಿಗೆ ಆಲೌಟ್ ಆಯಿತು.ಇದರಿಂದ ಕರ್ನಾಟಕ ಇನ್ನಿಂಗ್ಸ್ ಮತ್ತು 20 ರನ್ ಗಳ ಅಂತರದೊಂದಿಗೆ ಕ್ವಾರ್ಟರ್ ಫೈನಲ್ ಪಂದ್ಯವನ್ನು ಗೆಲ್ಲುವುದರೊಂದಿಗೆ ಸೆಮಿಫೈನಲ್ ಗೆ ಹೆಜ್ಜೆ ಇಟ್ಟಿದೆ.