ಟ್ವಿಟ್ಟರ್ ನಲ್ಲಿ ಹೊಸ ಮನೆಗಾಗಿ ಸಲಹೆ ಕೇಳಿದ ರಿಶಬ್ ಪಂತ್...!

ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಹೊಸ ಸ್ಥಳವನ್ನು ಹುಡುಕುತ್ತಿರುವಂತೆ ತೋರುತ್ತಿದೆ ಮತ್ತು ಅವರು ಗುರುವಾರ ತಮ್ಮ ಅಭಿಮಾನಿಗಳನ್ನು ಸಲಹೆಗಳನ್ನು ಟ್ವಿಟರ್‌ ನಲ್ಲಿ ಸಲಹೆ ಕೇಳಿದರು. 

Last Updated : Jan 28, 2021, 03:16 PM IST
  • ಸ್ಟ್ರೇಲಿಯಾದಿಂದ ವಾಪಸ್ ಆದಾಗಿನಿಂದ ಮನೆಯಲ್ಲಿ ಮನೆಗಾಗಿ ಹುಡುಕಾಟ ನಡೆಸಿದ್ದಾರೆ, ಗುರುಗಾವ್ ಆಯ್ಕೆಯೇ ಅಥವಾ ಇನ್ನ್ಯಾವುದಾದರೂ ಆಯ್ಕೆ ಇದ್ದಲ್ಲಿ ತಿಳಿಸಿ ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
  • ಇದಕ್ಕೆ ಅಭಿಮಾನಿಯೊಬ್ಬ ಟ್ವಿಟ್ಟರ್ ನಲ್ಲಿ ಈ ಪ್ರಶ್ನೆಯನ್ನು ವಿರಾಟ್ ಮತ್ತು ರೋಹಿತ್ ಗೂ ಕೂಡ ಕೇಳುವ ಗಟ್ಸ್ ಇಲ್ಲ ಎನ್ನುವುದನ್ನು ನಾನು ಖಚಿತವಾಗಿ ಹೇಳಬಲ್ಲೆ ಎಂದು ಟ್ವೀಟ್ ಮಾಡಿದ್ದಾರೆ.
ಟ್ವಿಟ್ಟರ್ ನಲ್ಲಿ ಹೊಸ ಮನೆಗಾಗಿ ಸಲಹೆ ಕೇಳಿದ ರಿಶಬ್ ಪಂತ್...!  title=
file photo

ನವದೆಹಲಿ: ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಹೊಸ ಸ್ಥಳವನ್ನು ಹುಡುಕುತ್ತಿರುವಂತೆ ತೋರುತ್ತಿದೆ ಮತ್ತು ಅವರು ಗುರುವಾರ ತಮ್ಮ ಅಭಿಮಾನಿಗಳನ್ನು ಸಲಹೆಗಳನ್ನು ಟ್ವಿಟರ್‌ ನಲ್ಲಿ ಸಲಹೆ ಕೇಳಿದರು. 

ಭಾರತದ ಸ್ಮರಣೀಯ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಪಂತ್, ಆಸ್ಟ್ರೇಲಿಯಾ ಪ್ರವಾಸದಿಂದ ಮನೆಗೆ ಮರಳಿದಾಗಿನಿಂದಲೂ, ಅವರ ಕುಟುಂಬವು ಹೊಸ ಮನೆ ಖರೀದಿಸಲು ಹುಡುಕಾಟ ನಡೆಸಿದೆ.ಈ ಹಿನ್ನಲೆಯಲ್ಲಿ ಅವರು ಇದಕ್ಕಾಗಿ ಟ್ವಿಟ್ಟರ್ ಗೆ ಮೊರೆ ಹೋದಾಗ ಅವರಿಗೆ ವಿಭಿನ್ನ ಬಗೆಯ ಉತ್ತರಗಳು ಬಂದವು.

ಇದನ್ನೂ ಓದಿ: ರಿಷಭ್ ಪಂತ್ ಊರ್ವಶಿ ರೌತೆಲಾ ನಂಬರ್ ಅನ್ನು ಬ್ಲಾಕ್ ಮಾಡಿದ್ದೇಕೆ? ಇಲ್ಲಿದೆ ಕಾರಣ

"ಆಸ್ಟ್ರೇಲಿಯಾದಿಂದ ವಾಪಸ್ ಆದಾಗಿನಿಂದ ಮನೆಯಲ್ಲಿ ಮನೆಗಾಗಿ ಹುಡುಕಾಟ ನಡೆಸಿದ್ದಾರೆ, ಗುರುಗಾವ್ ಆಯ್ಕೆಯೇ ಅಥವಾ ಇನ್ನ್ಯಾವುದಾದರೂ ಆಯ್ಕೆ ಇದ್ದಲ್ಲಿ ತಿಳಿಸಿ ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಇದಕ್ಕೆ ಅಭಿಮಾನಿಯೊಬ್ಬ ಟ್ವಿಟ್ಟರ್ ನಲ್ಲಿ ಈ ಪ್ರಶ್ನೆಯನ್ನು ವಿರಾಟ್ ಮತ್ತು ರೋಹಿತ್ ಗೂ ಕೂಡ ಕೇಳುವ ಗಟ್ಸ್ ಇಲ್ಲ ಎನ್ನುವುದನ್ನು ನಾನು ಖಚಿತವಾಗಿ ಹೇಳಬಲ್ಲೆ ಎಂದು ಟ್ವೀಟ್ ಮಾಡಿದ್ದಾರೆ.

ರಿಷಭ್ ಪಂತ್ (Rishabh Pant) ಅವರು ಇತ್ತೀಚೆಗೆ ಎಂ.ಎಸ್.ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಅವರೊಂದಿಗೆ ಗುರುತಿಸಿಕೊಂಡಿದ್ದರು.ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸಾಕ್ಷಿ ಪೋಸ್ಟ್ ಮಾಡಿದ್ದು, ಈ ಮೂವರು ಉತ್ತಮ ಸಮಯವನ್ನು ಹೊಂದಿರುವುದನ್ನು ಕಾಣಬಹುದು, ಭಾರತದ ಮಾಜಿ ನಾಯಕ ಹಸಿರು ಬಣ್ಣದ ಪಾರ್ಟಿ ಟೋಪಿ ಧರಿಸಿದ್ದಾರೆ.ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಪಂತ್ ಎರಡನೇ ಇನಿಂಗ್ಸ್ ನಲ್ಲಿ ಅಮೋಘ ಅರ್ಧ ಶತಕಗಳಿಸಿದ್ದರಿಂದಾಗಿ  ಭಾರತ ತಂಡವು ಐತಿಹಾಸಿಕ ಸ್ಮರಣಿಯ ಗೆಲುವನ್ನು ಸಾಧಿಸಿತು.

ಇದನ್ನೂ ಓದಿ:"ಅವನು ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಅತಿ ಹೆಚ್ಚು ಕ್ಯಾಚ್ ಡ್ರಾಪ್ ಮಾಡಿದ್ದಾನೆ"

ಇಂಗ್ಲೆಂಡ್ ವಿರುದ್ಧದ ಮುಂಬರುವ ಸ್ವದೇಶದಲ್ಲಿನ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ 18 ಜನರ ತಂಡದಲ್ಲಿ 23 ವರ್ಷದ ಎಡಗೈ ಬ್ಯಾಟ್ಸ್‌ಮನ್ ಸ್ಥಾನ ಪಡೆದಿದ್ದಾರೆ.ನಾಲ್ಕು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಫೆಬ್ರವರಿ 5 ರಿಂದ ಪ್ರಾರಂಭವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News