ರಣಜಿ ಟ್ರೋಪಿ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಠಿಸಿದ ರಿಯಾನ್‌ ಪರಾಗ್‌ ! 2ನೇ ಅತೀ ವೇಗದ ಶತಕ ಸಾಧನೆ .

Riyan Parag Ranaji century : ಅಸ್ಸಾಂ ವಿರುದ್ದ ರಣಜಿ ಟ್ರೋಪಿ ಪಂದ್ಯದಲ್ಲಿ ಛತ್ತೀಸ್‌ಗಢ ತಂಡವು 10 ವಿಕೆಟ್‌ಗಳ ಭರ್ಜರಿ ಜಯಗಳಿಸದೆ.ಆದರೂ ಅಸಾಂ ತಂಡದ ನಾಯಕ ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ 56 ಬಾಲ್‌ಗಳಲ್ಲಿ ಆಕರ್ಷಕ ಶತಕ ಸಿಡಿಸಿದರು. ಇದು ರಣಜಿ ಟ್ರೋಪಿ ಇತಿಹಾಸದ 2ನೇ ಅತೀವೇಗದ ಶತಕದ ದಾಖಲೆಯಾಗಿದೆ.

Written by - Zee Kannada News Desk | Last Updated : Jan 9, 2024, 05:23 PM IST
  • ಅಸ್ಸಾಂಗೆ ತಂಡದ ವಿರುದ್ದ ಛತ್ತೀಸ್‌ಗಢ 10 ವಿಕೆಟ್‌ಗಳ ಜಯ
  • 56 ಬಾಲ್‌ಗಳಲ್ಲಿ ಆಕರ್ಷಕ ಶತಕ ಸಿಡಿಸಿದ ಅಸ್ಸಾಂ ತಂಡದ ನಾಯಕ ಪರಾಗ್
  • ಇದು ರಣಜಿ ಟ್ರೋಪಿ ಇತಿಹಾಸದಲ್ಲಿ 2ನೇ ಅತೀವೇಗದ ಶತಕವಾಗಿದೆ
ರಣಜಿ ಟ್ರೋಪಿ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಠಿಸಿದ ರಿಯಾನ್‌ ಪರಾಗ್‌ ! 2ನೇ ಅತೀ ವೇಗದ ಶತಕ ಸಾಧನೆ . title=

Riyan Parag Ranaji record :  ರಾಜಸ್ಥಾನ ರಾಯಲ್ಸ್‌ ತಂಡದ ಅಟಗಾರ ರಿಯಾನ್‌ ಪರಾಗ್‌  ಸಧ್ಯಾ ರಣಜಿ ಟ್ರೋಪಿ ಪಂದ್ಯಗಳಲ್ಲಿ ಫುಲ್‌ ಬ್ಯುಸಿ ಆಗಿದ್ಧಾರೆ. ಅಷ್ಟೇ ಅಲ್ಲದೇ ಅಸ್ಸಾಂ ತಂಡದ ನಾಯಕತ್ವ ವಹಿಸಿಕೊಂಡಿರುವ ರಿಯಾನ್‌ ಪರಾಗ್‌ ರಣಜಿ ಟ್ರೋಪಿ ಇತಿಹಾಸದಲ್ಲಿ ಹೊಸದೊಂದು ದಾಖಲೆಯನ್ನು ಸೃಷ್ಠಿಸಿದ್ದಾರೆ.

ಅಸ್ಸಾಂ ತಂಡದ ನಾಯಕನಾದ ಪರಾಗ್‌ ಛತ್ತೀಸ್‌ಗಢ ವಿರುದ್ದದ ಪಂದ್ಯದಲ್ಲಿ ಭರ್ಜರಿ ಶತಕವನ್ನ ಸಿಡಿಸಿದ್ದಾರೆ. ಈ ಮೂಲಕ ಪರಾಗ್‌ ರಣಜಿ ಇತಿಹಾಸದಲ್ಲಿ ಅತೀವೇಗವಾಗಿ ಶತಕ ಸಿಡಿಸಿದ ಎರಡನೇ ಆಟಗಾರರಾಗಿ ಮೂಡಿಬಂದಿದ್ಧಾರೆ.

ಇದನ್ನೂ ಓದಿ : ಟಾಪ್‌ 10 ICC ಟೆಸ್ಟ್‌ ರಾಂಕಿಂಗ್‌ನಲ್ಲಿ ಭಾರತದ ಒಬ್ಬನೇ ಆಟಗಾರ,"ವಿರಾಟ್‌ ಕೊಹ್ಲಿ" !

ಭಾರತದ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ 2016ರ ರಣಜಿ ಟ್ರೋಪಿಯಲ್ಲಿ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿ ರಣಜಿ ಇತಿಹಾಸದಲ್ಲಿ ಅತೀ ಕಡಿಮೆ ಬಾಲ್‌ಗಳಿಗೆ ಶತಕ ಸಿಡಿಸಿದ ಆಟಗಾರನಾಗಿ ಹೊರಹೊಮ್ಮಿದರು. ಅದೇ ಸಾಲಿನಲ್ಲಿ   ಪರಾಗ್‌ ರಣಜಿ ಎರಡನೇ ಅತೀ ವೇಗದ ಶತಕ ಸಿಡಸಿದ ಆಟಗಾರರಾಗಿದ್ದಾರೆ. 

ಸೋಮವಾರ ನಡೆದ ಛತ್ತೀಸ್‌ಗಢ ವಿರುದ್ದದ ನಾಲ್ಕನೇ ದಿನದ ಪಂದ್ಯದಲ್ಲಿ ಈ ದಾಖಲೆ ಮಾಡಿದ್ಧಾರೆ. ಬಿರುಸಿನ ಆಟಕ್ಕೆ ಮುಂದಾಗಿದ್ದ ರಿಯಾನ್‌ ಕೇವಲ 56 ಎಸತೆಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಈ ಮೂಲಕ ರಿಷಭ್‌ ಪಂತ್‌ ನಂತರದಲ್ಲಿ ಅತೀ ವೇಗದ ಶತಕ ಸಿಡಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. 

ಇದನ್ನೂ ಓದಿ : ಟೀಂ ಇಂಡಿಯಾಕೆ ಇನ್ನೊಂದು ಆಘಾತ! ಸೂರ್ಯಾಗೆ ಎದುರಾಯ್ತು ಹರ್ನಿಯಾ ಸಮಸ್ಯೆ .

ಅಸ್ಸಾಂ ನಾಯಕ ಪರಾಗ್‌ ಎದುರಿಸಿದ 87 ಬಾಲ್‌ಗಳಲ್ಲಿ 155 ರನ್‌ಗಳಿಸಿದರು. 178.16 ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಇವರು 11 ಬೌಂಡರಿಗಳನ್ನು ಹಾಗೂ ಆಕರ್ಷಕ 12 ಸಿಕ್ಸರ್‌ಗಳನ್ನು ದಾಖಲಿಸಿದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News