ʼಸಾನಿಯಾ ಮಿರ್ಜಾ ನನಗೆ ಪ್ರೇರಣೆ ʼ -ಆನಂದ್ ಮಹೀಂದ್ರ

Sania Mirza: ಟೆನಿಸ್ ಆಡುವ ಮೂಲಕ ವಿಶ್ವವನ್ನೇ ತನ್ನತ ತಿರುಗಿ  ನೋಡುವಂತೆ ಮಾಡಿದ  ಸಾನಿಯಾ ಮಿರ್ಜಾ   ಫೆಬ್ರವರಿಯಲ್ಲಿ ದುಬೈನಲ್ಲಿ ನಡೆಯುವ ಪಂದ್ಯಾವಳಿಯ ನಂತರ ಅಧಿಕೃತವಾಗಿ ನಿವೃತ್ತಿ ಹೊಂದಲಿದ್ದಾರೆ. 

Written by - Zee Kannada News Desk | Last Updated : Feb 6, 2023, 03:51 PM IST
  • ಸಾನಿಯಾ ಮಿರ್ಜಾ ಫೆಬ್ರವರಿಯಲ್ಲಿ ದುಬೈನಲ್ಲಿ ನಡೆಯುವ ಪಂದ್ಯಾವಳಿಯ ನಂತರ ಅಧಿಕೃತವಾಗಿ ನಿವೃತ್ತಿ
  • ಪತಿ ಶೋಯೆಬ್ ಮಲಿಕ್ ಅನೇಕರಿಗೆ ಸ್ಫೂರ್ತಿ ಸಾನಿಯಾ
  • ಸಾನಿಯಾ ಮಿರ್ಜಾ ನನಗೆ ಪ್ರೇರಣೆ -ಆನಂದ್ ಮಹೀಂದ್ರ
ʼಸಾನಿಯಾ ಮಿರ್ಜಾ ನನಗೆ ಪ್ರೇರಣೆ ʼ  -ಆನಂದ್ ಮಹೀಂದ್ರ

Sania Mirza:ʼಸಾನಿಯಾ ಮಿರ್ಜಾ ನನಗೆ ಪ್ರೇರಣೆʼ ಎಂದು   ಖ್ಯಾತ ಉದ್ಯಮಿ  ಆನಂದ್ ಮಹೀಂದ್ರರವರು ಟೆನ್ನಿಸ್‌ ತಾರೆ  ಸಾಧನೆ   ಕುರಿತು   ಆಟದ ವೃತ್ತಿಜೀವನವನ್ನು ಪ್ರಾರಂಭಿಸಿದ ರೀತಿಯಲ್ಲಿಯೇ  ಕೊನೆಗೊಳಿಸಿದ್ದಾರೆ. ಗೆಲುವಿನ  ಹಸಿವು ಸಾನಿಯಾಳನ್ನು  ವಿಶ್ವಕ್ಕೆ ಪರಿಚಯಿಸಿತು.  ಫೆಬ್ರವರಿಯಲ್ಲಿ ದುಬೈನಲ್ಲಿಪಂದ್ಯಾವಳಿಯ ನಂತರ ಅಧಿಕೃತವಾಗಿ ನಿವೃತ್ತಿ ಹೊಂದಲಿದ್ದಾರೆ. ಅವರ  ವೃತ್ತಿಜೀವನದ ಛಲ ನನ್ನನ್ನು  ಜೀವಂತವಾಗಿರಿಸಿಸುತ್ತದೆ"ಈ ಮೂಲಕ  ಆನಂದ್ ಮಹೀಂದ್ರ ಅವರು ಸಾನಿಯಾ ಮಿರ್ಜಾ ಅವರನ್ನು ತಮ್ಮ   ಪ್ರೇರಣೆ" ಎಂದು  ಬರೆದುಕೊಂಡಿದ್ದಾರೆ.  

ಇದನ್ನೂ ಓದಿ:IND vs AUS : ಸರಣಿಗೆ ಈ 2 ವಿಕೆಟ್‌ಕೀಪರ್‌ ಎಂಟ್ರಿ : Playing 11 ನಲ್ಲಿ ಚಾನ್ಸ್ ಕೊಡ್ತಾರಾ ರೋಹಿತ್!

ಇದಕ್ಕೆ ಪ್ರತಿಕ್ರಿಸಿದ ಸಾನಿಯಾ,  ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ  “ಮೂವತ್ತು ವರ್ಷಗಳ ಹಿಂದೆ ಹೈದರಾಬಾದ್‌ನ ನಾಸರ್ ಶಾಲೆಯ 6 ವರ್ಷದ ಬಾಲಕಿ, ತನ್ನ ಸಹಪಾಠಿಯೊಂದಿಗೆ ನಿಜಾಮ್ ಕ್ಲಬ್‌ನ ಟೆನಿಸ್ ಕೋರ್ಟ್‌ಗೆ ಹೆಜ್ಜೆ ಇಡುವಳು ಟೆನಿಸ್ ಕಲಿಯಲು ಅವಕಾಶ ಮಾಡಿಕೊಡಬೇಕೆಂದು ಹೋರಾಡಿದಳು. ಇಂದಿಗೂ ನೆನಪಿದೆ ನಮ್ಮ ಕನಸುಗಳ ಹೋರಾಟವು 6 ಗಂಟೆಗೆ ಪ್ರಾರಂಭವಾಯಿತು.

ʼʼಸ್ಪರ್ಧಾತ್ಮಕತೆಯು ನನ್ನ ರಕ್ತದಲ್ಲಿದೆ ಮತ್ತು ಪ್ರತಿ ಬಾರಿ ನಾನು ಕೋರ್ಟ್‌ಗೆ ಕಾಲಿಟ್ಟಾಗ ನಾನು ಗೆಲ್ಲಲು ಬಯಸುತ್ತೇನೆ, ಫೆಬ್ರವರಿಯಲ್ಲಿ ದುಬೈನಲ್ಲಿ ನಡೆಯುವ ಪಂದ್ಯಾವಳಿ ನನ್ನ ಕೊನೆಯ ಸೀಸನ್ ಆಗಿರುತ್ತದೆʼʼ  ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ:ಗಾಡ್ ಆಫ್ ಕ್ರಿಕೆಟ್ Sachin Tendulkar ಪತ್ನಿ ಅಂಜಲಿಗಿಂತ ತುಂಬಾ ಚಿಕ್ಕವರು: ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತಾ?

ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದ ನಂತರ, ಅವರ ಪತಿ ಶೋಯೆಬ್ ಮಲಿಕ್ , “ನೀವು ಕ್ರೀಡೆಯಲ್ಲಿರುವ ಎಲ್ಲಾ ಮಹಿಳೆಯರಿಗೆ ಹೆಚ್ಚು ಅಗತ್ಯವಿರುವ ಭರವಸೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಸಾಧಿಸಿದ್ದಕ್ಕಾಗಿ ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ, ಬಲವಾಗಿ ಮುಂದುವರಿಯಿರಿ. ನಂಬಲಾಗದ ವೃತ್ತಿಜೀವನಕ್ಕೆ ಅನೇಕ ಅಭಿನಂದನೆಗಳು ” ಪತಿ ಶೋಯೆಬ್ ಮಲಿಕ್ ಪ್ರತಿಕ್ರಿಯಿಸಿದ್ದಾರೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News