41ರ ವಯಸ್ಸಿನಲ್ಲಿ 2ನೇ ಮಗುವಿಗೆ ಜನ್ಮಕೊಟ್ಟ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಸ್ಟಾರ್ ಟೆನಿಸ್ ಆಟಗಾರ್ತಿ

Serena Williams: ಅಮೆರಿಕದ ಅನುಭವಿ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರ ಕೊನೆಯ ಪಂದ್ಯಾವಳಿ 2022 ಯುಎಸ್ ಓಪನ್ ಆಗಿದ್ದು, ಇದರಲ್ಲಿ ಅವರು ಮೂರನೇ ಸುತ್ತನ್ನು ತಲುಪುವಲ್ಲಿ ಯಶಸ್ವಿಯಾಗಿದ್ದರು.

Written by - Bhavishya Shetty | Last Updated : Aug 24, 2023, 11:46 AM IST
    • 23 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಲೆಜೆಂಡರಿ ಟೆನಿಸ್ ಆಟಗಾರ್ತಿ
    • ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ
    • ಸೆರೆನಾ ಇನ್‌’ಸ್ಟಾಗ್ರಾಮ್‌’ನಲ್ಲಿ ಅಭಿಮಾನಿಗಳಿಗೆ ಈ ಶುಭ ಸುದ್ದಿ ನೀಡಿದ್ದಾರೆ.
41ರ ವಯಸ್ಸಿನಲ್ಲಿ 2ನೇ ಮಗುವಿಗೆ ಜನ್ಮಕೊಟ್ಟ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಸ್ಟಾರ್ ಟೆನಿಸ್ ಆಟಗಾರ್ತಿ title=
serena william

Serena Williams: 23 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಲೆಜೆಂಡರಿ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಸೆರೆನಾ ಇನ್‌’ಸ್ಟಾಗ್ರಾಮ್‌’ನಲ್ಲಿ ಅಭಿಮಾನಿಗಳಿಗೆ ಈ ಶುಭ ಸುದ್ದಿ ನೀಡಿದ್ದಾರೆ.

23 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಕಳೆದ ವರ್ಷ ಸೆಪ್ಟೆಂಬರ್ 2ರಂದು ಕೊನೆಯ ಟೆನಿಸ್ ಪಂದ್ಯವನ್ನಾಡಿದ್ದಾರೆ.

ಇದನ್ನೂ ಓದಿ: ಕೀಪರ್ ಕಂ ಬ್ಯಾಟ್ಸ್’ಮನ್ ಸ್ಥಾನಕ್ಕೆ 25ರ ಹರೆಯದ ದ್ವಿಶತಕ ವೀರ ಈ ಕ್ರಿಕೆಟಿಗ ಆಯ್ಕೆ!

ಅಮೆರಿಕದ ಅನುಭವಿ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರ ಕೊನೆಯ ಪಂದ್ಯಾವಳಿ 2022 ಯುಎಸ್ ಓಪನ್ ಆಗಿದ್ದು, ಇದರಲ್ಲಿ ಅವರು ಮೂರನೇ ಸುತ್ತನ್ನು ತಲುಪುವಲ್ಲಿ ಯಶಸ್ವಿಯಾಗಿದ್ದರು.

41 ವರ್ಷದ ಸೆರೆನಾ ಮತ್ತು ಅವರ ಪತಿ ಅಲೆಕ್ಸಿಸ್ ಒಹಾನಿಯನ್ ಹೆಣ್ಣು ಮಗುವಿಗೆ ಪೋಷಕಾಗಿದ್ದು, 2017ರಲ್ಲಿ ಇಬ್ಬರೂ ಮದುವೆಯಾಗಿದ್ದರು. ಸೆರೆನಾ ಮತ್ತು ಅಲೆಕ್ಸಿಸ್ ಅವರಿಗೆ ಒಲಿಂಪಿಯಾ ಎಂಬ ಮಗಳಿದ್ದು, 2017 ರಲ್ಲಿ ಆಕೆಗೆ ಜನ್ಮ ನೀಡಿದ್ದರು.

ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡಿಂಗ್ ಆಗುತ್ತಿದ್ದಂತೆ ಖುಷಿಯಲ್ಲಿ ಡ್ಯಾನ್ಸ್ ಮಾಡಿದ ಧೋನಿ ಪುತ್ರಿ: ವಿಡಿಯೋ

ಪ್ರಸ್ತುತ ಯುಗದ ಶ್ರೇಷ್ಠ ಟೆನಿಸ್ ಆಟಗಾರ್ತಿಯರಲ್ಲಿ ಸೆರೆನಾ ವಿಲಿಯಮ್ಸ್ ಕೂಡ ಒಬ್ಬರೆಂದು ಪರಿಗಣಿಸಲಾಗಿದೆ. ಸೆರೆನಾ ಆಸ್ಟ್ರೇಲಿಯನ್ ಓಪನ್ ಮತ್ತು ವಿಂಬಲ್ಡನ್ ತಲಾ 7 ಬಾರಿ ಗೆದ್ದಿದ್ದಾರೆ. ಇದಲ್ಲದೇ 6 ಬಾರಿ ಯುಎಸ್ ಓಪನ್ ಚಾಂಪಿಯನ್ ಆಗಿದ್ದು, 3 ಬಾರಿ ಫ್ರೆಂಚ್ ಓಪನ್ ಗೆದ್ದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News