Ziva Singh Dhoni Viral Video: ಭಾರತ ಬುಧವಾರ ಇತಿಹಾಸ ಸೃಷ್ಟಿಸಿದೆ. ಇಸ್ರೋ ವಿಜ್ಞಾನಿಗಳು ಸೇರಿದಂತೆ ಎಲ್ಲರ ಅಪಾರ ಪರಿಶ್ರಮದಿಂದಾಗಿ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಿದೆ. ಈ ಸಾಧನೆ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇನ್ನು ಟೀಂ ಇಂಡಿಯಾ ಐರ್ಲೆಂಡ್’ನಲ್ಲಿ ತನ್ನ ಸಂತಸವನ್ನು ಆಚರಿಸಿಕೊಂಡರೆ, ಇತ್ತ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾ ಸಿಂಗ್ ಧೋನಿ ಕೂಡ ಖುಷಿಯಿಂದ ಕುಣಿದಾಡಿದ್ದಾರೆ.
ಇದನ್ನೂ ಓದಿ: ಕೀಪರ್ ಕಂ ಬ್ಯಾಟ್ಸ್’ಮನ್ ಸ್ಥಾನಕ್ಕೆ 25ರ ಹರೆಯದ ದ್ವಿಶತಕ ವೀರ ಈ ಕ್ರಿಕೆಟಿಗ ಆಯ್ಕೆ!
ಜೀವಾ ಸಿಂಗ್ ಧೋನಿ
ಇಸ್ರೋದ ವಿಜ್ಞಾನಿಗಳ ಅಪಾರ ಪರಿಶ್ರಮದ ಫಲವಾಗಿ ಭಾರತವು ಬುಧವಾರ ಅಂದರೆ ಆಗಸ್ಟ್ 23 ರಂದು ಇತಿಹಾಸವನ್ನು ಸೃಷ್ಟಿಸಿದೆ. ಇಸ್ರೋ ಪ್ರಕಾರ, ಚಂದ್ರಯಾನ-3 ರ ಲ್ಯಾಂಡರ್ ಬುಧವಾರ ಸಂಜೆ 6.04 ಗಂಟೆಗೆ ನಿಯಂತ್ರಿತ ವೇಗದಲ್ಲಿ ಚಂದ್ರನ ಮೇಲ್ಮೈಯಲ್ಲಿ ಇಳಿದಿದೆ. ಇದರೊಂದಿಗೆ, ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಯುಎಸ್, ಯುಎಸ್’ಎಸ್’ಆರ್ ಮತ್ತು ಚೀನಾದ ನಂತರ ಭಾರತ ನಾಲ್ಕನೇ ದೇಶವಾಗಿದೆ.
ಧೋನಿ ಮಗಳ ಡ್ಯಾನ್ಸ್ ವಿಡಿಯೋ:
Ziva 🤣❤️ pic.twitter.com/y4LfWAFpHg
— 𝐒𝐡𝐫𝐞𝐲𝐚𝐬𝐌𝐒𝐃𝐢𝐚𝐧™ (@Itzshreyas07) August 23, 2023
ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಅನ್ನು ಇಳಿಸಿದ ಮೊದಲ ದೇಶ ಭಾರತ. ದೇಶದ ಕೋಟಿಗಟ್ಟಲೆ ಜನರು ಇದರ ನೇರ ಪ್ರಸಾರವನ್ನು ಟಿವಿ ಚಾನೆಲ್’ಗಳು, ಯೂಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಿಸಿದ್ದಾರೆ. ಎಂಎಸ್ ಧೋನಿ ಮಗಳು ಝಿವಾ ಕೂಡ ಈ ಕ್ಷಣವನ್ನು ಸಖತ್ ಎಂಜಾಯ್ ಮಾಡಿದ್ದು ಅದರ ವಿಡಿಯೋ ಈಗ ವೈರಲ್ ಆಗುತ್ತಿದೆ.
ಸಾಕ್ಷಿ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಜೀವಾ ಟಿವಿ ಮುಂದೆ ನಿಂತು ಚಂದ್ರಯಾನ-3 ಲ್ಯಾಂಡಿಂಗ್ ಯಶಸ್ಸನ್ನು ಸಂಭ್ರಮಿಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಕೀಪರ್ ಕಂ ಬ್ಯಾಟ್ಸ್’ಮನ್ ಸ್ಥಾನಕ್ಕೆ 25ರ ಹರೆಯದ ದ್ವಿಶತಕ ವೀರ ಈ ಕ್ರಿಕೆಟಿಗ ಆಯ್ಕೆ!
ಇನ್ನೊಂದೆಡೆ, ಜಸ್ಪ್ರೀತ್ ಬುಮ್ರಾ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡವು ಐರ್ಲೆಂಡ್’ನಿಂದ ಚಂದ್ರಯಾನ-3 ರ ನೇರ ಪ್ರಸಾರವನ್ನು ವೀಕ್ಷಿಸಿದೆ. ಆಟಗಾರರಲ್ಲದೆ, ಸಹಾಯಕ ಸಿಬ್ಬಂದಿ ಕೂಡ ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದೆ. ಚಂದ್ರಯಾನ-3 ಲ್ಯಾಂಡಿಂಗ್ ಸಮಯದಲ್ಲಿ ಇಡೀ ಭಾರತ ತಂಡ ಟಿವಿ ಮುಂದೆ ನಿಂತು ಚಪ್ಪಾಳೆ ತಟ್ಟುತ್ತಿರುವ ದೃಶ್ಯ ಕಂಡುಬಂತು. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ