MS Dhoniಗೆ ಗಂಭೀರ ಗಾಯ! CSK ಕೋಚ್ ನೀಡಿದ ಹೆಲ್ತ್ ಅಪ್ಡೇಟ್’ನಲ್ಲಿದೆ ಈ ಮಹತ್ವದ ಮಾಹಿತಿ

Chennai Super Kings coach Stephen Fleming: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವನ್ನಾಡುತ್ತಿದ್ದ ಸಂದರ್ಭದಲ್ಲಿ ಎಂ ಎಸ್ ಧೋನಿ ಅವರ ಮೊಣಕಾಲಿಗೆ ಗಾಯವಾಗಿತ್ತು. ಇದೀಗ ಧೋನಿ ಗಾಯದ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಮಾಹಿತಿ ನೀಡಿದ್ದಾರೆ.

Written by - Bhavishya Shetty | Last Updated : Apr 1, 2023, 07:04 PM IST
    • ತಂಡದ ನಾಯಕ ಎಂಎಸ್ ಧೋನಿ ಅವರ ಮೊಣಕಾಲಿನ ಗಾಯದ ಬಗ್ಗೆ ಪ್ರಮುಖ ಅಪ್ಡೇಟ್ ನೀಡಿದ್ದಾರೆ
    • ಐಪಿಎಲ್ 2023 ರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡಿತು
    • ದೀಪಕ್ ಚಹಾರ್ ಎಸೆತದ ಸಂದರ್ಭದಲ್ಲಿ ನಾಯಕ ಧೋನಿ ತಮ್ಮ ಬಲಭಾಗದಲ್ಲಿ ಡೈವ್ ಮಾಡಿದರು
MS Dhoniಗೆ ಗಂಭೀರ ಗಾಯ! CSK ಕೋಚ್ ನೀಡಿದ ಹೆಲ್ತ್ ಅಪ್ಡೇಟ್’ನಲ್ಲಿದೆ ಈ ಮಹತ್ವದ ಮಾಹಿತಿ title=
MS Dhoni

Chennai Super Kings coach Stephen Fleming: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು, ತಂಡದ ನಾಯಕ ಎಂಎಸ್ ಧೋನಿ ಅವರ ಮೊಣಕಾಲಿನ ಗಾಯದ ಬಗ್ಗೆ ಪ್ರಮುಖ ಅಪ್ಡೇಟ್ ನೀಡಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ 179 ರನ್ ಗುರಿಯನ್ನು ಬೆನ್ನಟ್ಟಿದ ಬಳಿಕ ಐಪಿಎಲ್ 2023 ರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್’ನ್ನು ಸೋಲಿಸಿತು. ಇನ್ನು ಚೇಸಿಂಗ್‌’ನ ಎರಡನೇ ಇನ್ನಿಂಗ್ಸ್‌’ನಲ್ಲಿ ಎಂಎಸ್ ಧೋನಿ ವಿಕೆಟ್ ಕೀಪಿಂಗ್ ಮಾಡುವಾಗ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು.

ಇದನ್ನೂ ಓದಿ: ತಡೆಯಲಾಗದ ತುರಿಕೆ… ಬೇಸತ್ತ ಈ ಕರಡಿ ಮಾಡಿದ್ದು ಇಂಥಾ ಪ್ಲ್ಯಾನ್! ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ

ದೀಪಕ್ ಚಹಾರ್ ಎಸೆತದ ಸಂದರ್ಭದಲ್ಲಿ ನಾಯಕ ಧೋನಿ ತಮ್ಮ ಬಲಭಾಗದಲ್ಲಿ ಡೈವ್ ಮಾಡಿದರು. ಈ ಸಮಯದಲ್ಲಿ ಧೋನಿ ನೋವಿನಿಂದ ಬಳಲಿದರು. ತಕ್ಷಣವೇ ಫಿಸಿಯೋ ವೈದ್ಯರು ಸ್ಥಳಕ್ಕೆ ಆಗಮಿಸಿ ಪರೀಕ್ಷೆ ನಡೆಸಿದರು. ಪಂದ್ಯದ ಬಳಿಕ ಧೋನಿ ಅವರು ಮುಂಬರುವ ಕೆಲ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂಬ ವದಂತಿಗಳಿವೆ. ಆದರೆ ಆ ವದಂತಿಗಳನ್ನು ಬದಿಗಿಟ್ಟ ಫ್ಲೆಮಿಂಗ್, ಧೋನಿಯ ಗಾಯದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.

"ಅವರು ಎಂದಿಗೂ ಆಟವಾಡುತ್ತಾರೆ. ಆದರೆ ಈ ವದಂತಿ ಎಲ್ಲಿಂದ ಬಂತು ಎಂದು ಖಚಿತವಾಗಿಲ್ಲ. ಅವರು ಪೂರ್ವ-ಋತುವಿನ ತಿಂಗಳು ಪೂರ್ತಿ ನೋಯುತ್ತಿರುವ ಮೊಣಕಾಲಿಗೆ ಚಿಕಿತ್ಸೆ ನೀಡುತ್ತಾ ಆಡುತ್ತಿದ್ದರು. ಆದರೆ ಇಂದು ಅದು ಕೇವಲ ಸೆಳೆತವಾಗಿತ್ತು. ಅದು ಮೊಣಕಾಲು ನೋವಲ್ಲ. 15 ವರ್ಷಗಳ ಹಿಂದೆ ತುಂಬಾ ವೇಗವುಳ್ಳವರಾಗಿದ್ದರು, ಆದರೆ ಅವರು ಇನ್ನೂ ತಂಡದ ಶ್ರೇಷ್ಠ ನಾಯಕರಾಗಿದ್ದಾರೆ. ಬ್ಯಾಟ್‌ನೊಂದಿಗೆ ಸಹ ಅವರು ಇನ್ನೂ ಒಂದು ಪಾತ್ರವನ್ನು ವಹಿಸಲಿದ್ದಾರೆ. ಅವರು ತಮ್ಮ ಮಿತಿಗಳನ್ನು ತಿಳಿದಿದ್ದಾರೆ. ಅವರೊಬ್ಬ ದಂತಕಥೆ’’ ಎಂದು ಪಂದ್ಯದ ಬಳಿಕ ಫ್ಲೆಮಿಂಗ್ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ 2023 ರ ಆರಂಭಿಕ ಪಂದ್ಯದಲ್ಲಿ ಎಂಎಸ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದು ವಿಕೆಟ್’ಗಳ ಸೋಲು ಕಂಡಿತು. ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟಾನ್ಸ್ ಚೇಸ್‌ನಲ್ಲಿ 179 ರನ್ ಗಳಿಸಿತು. ರುತುರಾಜ್ ಗಾಯಕ್ವಾಡ್ 92 ರನ್ ಸಿಡಿಸಿದ್ದರಿಂದ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ಗಳಿಸಲು ಯಶಸ್ವಿಯಾಯಿತು. ಕೊನೆಯ ಕೆಲವು ಓವರ್‌’ಗಳಲ್ಲಿ ನಾಯಕ ಎಂಎಸ್ ಧೋನಿ ಮೈದಾನಕ್ಕೆ ಕಾಲಿಟ್ಟು ಒಂದೆರಡು ಬೌಂಡರಿಗಳನ್ನು ಬಾರಿಸಿದರು.

ಇದನ್ನೂ ಓದಿ: ಸ್ಟಂಟ್ ಮಾಡಲು ಹೋದ ವಧುವಿನ ಮುಖಕ್ಕೆ ಹಿಡದ ಬೆಂಕಿ! ಮುಂದೆ... ಈ ವಿಡಿಯೋ ನೋಡಿ

ಚೇಸಿಂಗ್‌’ಗೆ ಬಂದ ಟೈಟಾನ್ಸ್ ತಂಡವನ್ನು ಶುಭಮನ್ ಗಿಲ್ ಅವರ ಅದ್ಭುತ ಅರ್ಧಶತಕದಿಂದ ಮುನ್ನಡೆಸಿದರು. ಕೆಲವು ವಿಕೆಟ್‌ಗಳು ಪತನಗೊಂಡರೂ ಅವರು ತಮ್ಮ ಹಿಡಿತದಲ್ಲಿ ಇದ್ದರು. ಒಂದೊಮ್ಮೆ ಗಿಲ್ ಕ್ಯಾಚ್ ಔಟ್ ಆದ ಬಳಿಕ ಸಿಎಸ್ ಕೆಗೆ ಗೆಲುವಿನ ಭರವಸೆ ಬಂತು. ಆದರೆ ರಶೀದ್ ಖಾನ್ ಮತ್ತು ರಾಹುಲ್ ತೆವಾಟಿಯಾ ಅಂತಿಮ ಓವರ್’ನಲ್ಲಿ ಭರ್ಜರಿ ಆಟವಾಡಿದ್ದು, ಗುಜರಾತ್ ಗೆಲುವು ಕಂಡಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News