ಕೊಹ್ಲಿ 100ನೇ ಟೆಸ್ಟ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದೇನು ಗೊತ್ತೇ?

ಮೊಹಾಲಿಯಲ್ಲಿ ನಡೆಯಲಿರುವ ಟೀಂ ಇಂಡಿಯಾದ ಮೊದಲ ಟೆಸ್ಟ್ ಪಂದ್ಯವು ತಮ್ಮ ವೃತ್ತಿಜೀವನದ 100 ನೇ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲಿರುವ ವಿರಾಟ್ ಕೊಹ್ಲಿಗೆ ಇದೊಂದು ಸ್ಮರಣಿಯ ಕ್ಷಣವಾಗಲಿದೆ.

Written by - Zee Kannada News Desk | Last Updated : Mar 2, 2022, 11:47 PM IST
  • ಮೊಹಾಲಿಯಲ್ಲಿ ನಡೆಯಲಿರುವ ಟೀಂ ಇಂಡಿಯಾದ ಮೊದಲ ಟೆಸ್ಟ್ ಪಂದ್ಯವು ತಮ್ಮ ವೃತ್ತಿಜೀವನದ 100 ನೇ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲಿರುವ ವಿರಾಟ್ ಕೊಹ್ಲಿಗೆ ಇದೊಂದು ಸ್ಮರಣಿಯ ಕ್ಷಣವಾಗಲಿದೆ.
ಕೊಹ್ಲಿ 100ನೇ ಟೆಸ್ಟ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದೇನು ಗೊತ್ತೇ?   title=

ನವದೆಹಲಿ: ಮೊಹಾಲಿಯಲ್ಲಿ ನಡೆಯಲಿರುವ ಟೀಂ ಇಂಡಿಯಾದ ಮೊದಲ ಟೆಸ್ಟ್ ಪಂದ್ಯವು ತಮ್ಮ ವೃತ್ತಿಜೀವನದ 100 ನೇ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲಿರುವ ವಿರಾಟ್ ಕೊಹ್ಲಿಗೆ ಇದೊಂದು ಸ್ಮರಣಿಯ ಕ್ಷಣವಾಗಲಿದೆ.

ಈಗ ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ಈ ಸಾಧನೆಗಾಗಿ ಕೊಹ್ಲಿಯನ್ನು ಶ್ಲಾಘಿಸಿಸುತ್ತಾ ಶುಕ್ರವಾರದಂದು ಮೊಹಾಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಜರಾಗಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಪುಂಡಾಟಿಕೆ ಖಂಡನೀಯ: ಪುಂಡರನ್ನು ಸದೆಬಡಿಯುತ್ತೇವೆ ಎಂದ ಸಿಎಂ ಬೊಮ್ಮಾಯಿ

ಮೊದಲಿಗೆ, ಅಲ್ಲಿಗೆ ಹೋಗಲು ನೀವು ಉತ್ತಮ ಆಟಗಾರನಾಗಿರಬೇಕು.ಭಾರತೀಯ ಕ್ರಿಕೆಟ್‌ನಲ್ಲಿ ಕೆಲವೇ ಜನರು 100 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.ಇದು ಅದ್ಭುತ ಹೆಗ್ಗುರುತು.ವಿರಾಟ್ ಒಬ್ಬ ಶ್ರೇಷ್ಠ ಆಟಗಾರ ಮತ್ತು ಅದರ ಪ್ರತಿ ಹಂತಕ್ಕೂ ಕೂಡ ಅವರು ಅರ್ಹರಾಗಿದ್ದಾರೆ.ಅವರ ತಂತ್ರ, ಅವರ ಸಕಾರಾತ್ಮಕತೆ, ಅವರ ಕಾಲ್ಚಳಕ, ಅವರ ಸಮತೋಲನ...ಎಲ್ಲಕ್ಕಿಂತ ಹೆಚ್ಚಾಗಿ, ವಿರಾಟ್ (Virat Kohli) ಅವರು ಇಂಗ್ಲೆಂಡ್‌ನಲ್ಲಿ 2014 ರ ನಂತರ ಅವರು ಹೋರಾಡುತ್ತಿರುವಾಗ ತಮ್ಮ ಆಟವನ್ನು ಬದಲಾಯಿಸಿದ ರೀತಿಯನ್ನು ನಾನು ಇಷ್ಟಪಡುತ್ತೇನೆ.ನಾನು ಆ ಟೆಸ್ಟ್ ಸರಣಿಯನ್ನು ನೋಡಿದ್ದೇನೆ.ಏಕೆಂದರೆ ನಾನು ಅಲ್ಲಿ ಕಾಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ದಾಳಿ ಮಾಡಿರುವುದು ಕರ್ನಾಟಕದ ಮೇಲಿನ ದಾಳಿಗೆ ಸಮ-ಎಚ್ ಡಿ.ಕುಮಾರಸ್ವಾಮಿ

7 ವರ್ಷಗಳಲ್ಲಿ ಮೊದಲ ಬಾರಿಗೆ, ಕೊಹ್ಲಿ ಭಾರತ ತಂಡದ ಪರವಾಗಿ ಸಾಮಾನ್ಯ ಆಟಗಾರನಾಗಿ ಆಡುತ್ತಿದ್ದಾರೆ.ಆದರೆ ಇದರ ಹೊರತಾಗಿಯೂ ಕೊಹ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಗಂಗೂಲಿ (Sourav Ganguly) ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಕೆಲವು ಹೊಂದಾಣಿಕೆಗಳು ಬೇಕಾಗುತ್ತವೆ.ಆದರೆ ಇದು ತುಂಬಾ ಕಷ್ಟ ಎಂದು ನಾನು ಭಾವಿಸುವುದಿಲ್ಲ, ಅವರು ಹಿಂತಿರುಗಿ ಬಂದು ಶತಕವನ್ನು ಹೊಡೆಯುತ್ತಾರೆ.ಈ ಎಲ್ಲಾ ಮಾತುಗಳ ಬಗ್ಗೆ ನನಗೆ ತಿಳಿದಿದೆ,ಅವರು ಎರಡು ವರ್ಷಗಳಿಂದ ಶತಕವನ್ನು ಗಳಿಸಿಲ್ಲ, ಆದರೆ ಅವರು ಒಳ್ಳೆಯ ಆಟಗಾರ.ಈ ಹಂತವನ್ನು ಅವರು ದಾಟುತ್ತಾರೆ" ಎಂದು ಗಂಗೂಲಿ ಹೇಳಿದರು.

ಅವರಿಗೆ ಶತಕವನ್ನು ಗಳಿಸುವುದು ಹೇಗೆ ಎನ್ನುವುದು ತಿಳಿದಿದೆ, ಇಲ್ಲದಿದ್ದರೆ ಅವರು 70 ಶತಕಗಳನ್ನು ಗಳಿಸುತ್ತಿರಲಿಲ್ಲ, ಅವರು ಮತ್ತೆ ಅವರು ಸ್ಕೋರ್ ಗಳಿಸುತ್ತಾರೆ ಎನ್ನುವುದು ತಿಳಿದಿದೆ, ಅವರು ಅಗಾಧ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News