3 ಶತಕ, ಅತೀ ಹೆಚ್ಚು ರನ್, ವಿಶ್ವಕಪ್ ರೆಕಾರ್ಡ್: ದ.ಆಫ್ರಿಕಾ ಮಿಂಚಿನ ಆಟಕ್ಕೆ ಲಂಕಾಗೆ ಸೋಲು! ಈ ದಾಖಲೆಗಳು ಧೂಳಿಪಟ

South Africa vs Sri Lanka: ಶ್ರೀಲಂಕಾ ನಾಯಕ ದಸುನ್ ಶನಕ ಟಾಸ್ ಗೆದ್ದು ದಕ್ಷಿಣ ಆಫ್ರಿಕಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ದೆಹಲಿಯಲ್ಲಿ ಸಂಚಲನ ಮೂಡಿಸಿದ್ದು ಮಾತ್ರ ಸುಳ್ಳಲ್ಲ. ತಂಡ ನಿಗದಿತ 50 ಓವರ್‌’ಗಳಲ್ಲಿ 5 ವಿಕೆಟ್‌’ಗೆ 428 ರನ್‌’ಗಳ ಬೃಹತ್ ಸ್ಕೋರ್ ಮಾಡಿದ್ದು ವಿಶ್ವದಾಖಲೆಯಾಗಿದೆ.

Written by - Bhavishya Shetty | Last Updated : Oct 7, 2023, 10:47 PM IST
    • ಟೂರ್ನಿಯನ್ನು ದಕ್ಷಿಣ ಆಫ್ರಿಕಾ ಗೆಲುವಿನೊಂದಿಗೆ ಆರಂಭ ಮಾಡಿದೆ
    • ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿಶ್ವಕಪ್‌’ನಲ್ಲಿ ಗರಿಷ್ಠ ಸ್ಕೋರ್ ಮಾಡಿದೆ.
    • ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌’ಗಳು ಸ್ಫೋಟಕ ಆರಂಭವನ್ನು ಮಾಡಿದ್ದಾರೆ
3 ಶತಕ, ಅತೀ ಹೆಚ್ಚು ರನ್, ವಿಶ್ವಕಪ್ ರೆಕಾರ್ಡ್: ದ.ಆಫ್ರಿಕಾ ಮಿಂಚಿನ ಆಟಕ್ಕೆ ಲಂಕಾಗೆ ಸೋಲು! ಈ ದಾಖಲೆಗಳು ಧೂಳಿಪಟ  title=
south africa vs sri lanka

South Africa vs Sri Lanka, World Cup 2023: ವಿಶ್ವಕಪ್ 2023ರಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌’ಗಳು ಸ್ಫೋಟಕ ಆರಂಭವನ್ನು ಮಾಡಿದ್ದಾರೆ. ಪ್ರಸಕ್ತ ಐಸಿಸಿ ಟೂರ್ನಿಯ ಮೊದಲ ಪಂದ್ಯದಲ್ಲೇ ಈ ತಂಡ ಒಂದಲ್ಲ ಹಲವು ದೊಡ್ಡ ದಾಖಲೆಗಳನ್ನು ಮಾಡಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿಶ್ವಕಪ್‌’ನಲ್ಲಿ ಗರಿಷ್ಠ ಸ್ಕೋರ್ ಮಾಡಿದೆ.

ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್

ಶ್ರೀಲಂಕಾ ನಾಯಕ ದಸುನ್ ಶನಕ ಟಾಸ್ ಗೆದ್ದು ದಕ್ಷಿಣ ಆಫ್ರಿಕಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ದೆಹಲಿಯಲ್ಲಿ ಸಂಚಲನ ಮೂಡಿಸಿದ್ದು ಮಾತ್ರ ಸುಳ್ಳಲ್ಲ. ತಂಡ ನಿಗದಿತ 50 ಓವರ್‌’ಗಳಲ್ಲಿ 5 ವಿಕೆಟ್‌’ಗೆ 428 ರನ್‌’ಗಳ ಬೃಹತ್ ಸ್ಕೋರ್ ಮಾಡಿದ್ದು ವಿಶ್ವದಾಖಲೆಯಾಗಿದೆ. ವಿಶ್ವಕಪ್‌’ನಲ್ಲಿ ಯಾವುದೇ ತಂಡ ಇಷ್ಟು ದೊಡ್ಡ ಸ್ಕೋರ್ ಮಾಡಿಲ್ಲ. 2015ರಲ್ಲಿ ಪರ್ತ್‌’ನಲ್ಲಿ ಅಫ್ಘಾನಿಸ್ತಾನ ವಿರುದ್ಧ 6 ವಿಕೆಟ್‌’ಗೆ 417 ರನ್ ಸೇರಿಸಿದ್ದ ಈ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿತ್ತು. 2007ರಲ್ಲಿ ಪೋರ್ಟ್ ಆಫ್ ಸ್ಪೇನ್‌’ನಲ್ಲಿ ಬರ್ಮುಡಾ ವಿರುದ್ಧ 5 ವಿಕೆಟ್‌’ಗೆ 413 ರನ್ ಗಳಿಸಿದ್ದ ಭಾರತ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಆಸೀಸ್ ವಿರುದ್ಧದ ಪಂದ್ಯದಿಂದ ಈ ಸ್ಟಾರ್ ಆಟಗಾರನನ್ನೇ ಹೊರಗಿಟ್ಟ ರೋಹಿತ್!

3 ಶತಕಗಳು:

ಪಂದ್ಯದಲ್ಲಿ ಒಬ್ಬರಲ್ಲ ಮೂವರು ಬ್ಯಾಟ್ಸ್‌’ಮನ್‌’ಗಳು ತಂಡದ ಪರ ಶತಕ ಸಿಡಿಸಿದ್ದರು. ಕ್ವಿಂಟನ್ ಡಿ ಕಾಕ್ (100), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (108) ಮತ್ತು ಐಡೆನ್ ಮಾರ್ಕ್ರಾಮ್ (106) ಸೇರಿದ್ದಾರೆ. ಡಿ ಕಾಕ್ 84 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್‌’ಗಳನ್ನು ಸಿಡಿಸಿದ್ದರು. ಡುಸೆನ್ 110 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. 54 ಎಸೆತಗಳ ಬಿರುಸಿನ ಇನ್ನಿಂಗ್ಸ್‌ನಲ್ಲಿ ಮಾರ್ಕ್ರಾಮ್ 14 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.

ಮೂರನೇ ಬಾರಿಗೆ 400+ ಸ್ಕೋರ್”

ದಕ್ಷಿಣ ಆಫ್ರಿಕಾ ವಿಶ್ವಕಪ್‌’ನಲ್ಲಿ ಮೂರನೇ ಬಾರಿಗೆ 400 ಪ್ಲಸ್ ಗಳಿಸಿದೆ. ಈ ಸಾಧನೆ ಮಾಡಿದ ಮೊದಲ ತಂಡವಾಗಿದೆ. ಇದಕ್ಕೂ ಮೊದಲು 2015ರಲ್ಲಿ ಕ್ಯಾನ್‌ಬೆರಾದಲ್ಲಿ ಐರ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 4 ವಿಕೆಟ್‌’ಗೆ 411 ರನ್ ಗಳಿಸಿತ್ತು. ಇದಲ್ಲದೇ 2015ರಲ್ಲಿ ಸಿಡ್ನಿಯಲ್ಲಿ ನಡೆದ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 5 ವಿಕೆಟ್‌’ಗೆ 408 ರನ್ ಗಳಿಸಿತ್ತು.

ಲಂಕಾ ವಿರುದ್ಧ ಭರ್ಜರಿ ಜಯ:

ಇನ್ನು ಈ ಟೂರ್ನಿಯನ್ನು ದಕ್ಷಿಣ ಆಫ್ರಿಕಾ ಗೆಲುವಿನೊಂದಿಗೆ ಆರಂಭ ಮಾಡಿದೆ. ಟೆಂಬಾ ಬವುಮಾ ನಾಯಕತ್ವದ ತಂಡವು ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 102 ರನ್‌’ಗಳಿಂದ ಸೋಲಿಸಿದೆ. ದಕ್ಷಿಣ ಆಫ್ರಿಕಾ ತಂಡ ನಿಗದಿತ 50 ಓವರ್‌’ಗಳಲ್ಲಿ 5 ವಿಕೆಟ್‌’ಗೆ 428 ರನ್ ಗಳಿಸಿ ದಾಖಲೆಯ ಸ್ಕೋರ್ ಮಾಡಿತು. ಇದಾದ ಬಳಿಕ ಶ್ರೀಲಂಕಾ ತಂಡ 44.5 ಓವರ್‌ಗಳಲ್ಲಿ 326 ರನ್‌’ಗಳಿಗೆ ಆಲೌಟ್ ಆಯಿತು.

ಇದನ್ನೂ ಓದಿ: ಈ ಮರದ ಕಾಯಿಯನ್ನು ಕುಟ್ಟಿಪುಡಿ ಮಾಡಿ ತಲೆಗೆ ಹಚ್ಚಿದರೆ ಬಿಳಿಕೂದಲು ಕಪ್ಪಾಗುತ್ತೆ!

ಇನ್ನು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಪಂದ್ಯವು ಹೆಚ್ಚು ರನ್ ಕಲೆ ಹಾಕಿದ ಪಂದ್ಯವಾಗಿ ಹೊರಹೊಮ್ಮಿದೆ. ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 428 ರನ್‌’ಗಳ ಬೃಹತ್ ಸ್ಕೋರ್ ಮಾಡಿದರೆ, ಗುರಿ ಬೆನ್ನಟ್ಟಿದ ಶ್ರೀಲಂಕಾ 44.5 ಓವರ್‌’ಗಳಲ್ಲಿ 326 ರನ್ ಸೇರಿಸಿತು. ಈ ಮೂಲಕ ಪಂದ್ಯದಲ್ಲಿ ಒಟ್ಟು 754 ರನ್‌ಗಳು ದಾಖಲಾದವು. 54 ಎಸೆತಗಳಲ್ಲಿ 106 ರನ್‌’ಗಳ ಬಿರುಸಿನ ಇನ್ನಿಂಗ್ಸ್‌ ಆಡಿದ ಏಡೆನ್‌ ಮರ್ಕರಮ್‌ ಪಂದ್ಯ ಶ್ರೇಷ್ಠ ಎನಿಸಿಕೊಂಡರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News