IND vs BAN: ಟೀಂ ಇಂಡಿಯಾಗೆ ಈ ಅಪಾಯಕಾರಿ ಆಟಗಾರನ ದಿಢೀರ್ ಎಂಟ್ರಿ: ಭಯದಲ್ಲಿ ಬಾಂಗ್ಲಾ ತಂಡ!

India vs Bangladesh: ಈ ಆಟಗಾರ 12 ವರ್ಷಗಳ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಮೂಲಕ ಮೈದಾನದಲ್ಲಿ ವಿಧ್ವಂಸಕರಾಗಲು ಕಾಯುತ್ತಿದ್ದಾರೆ. ಎಡಗೈ ವೇಗದ ಬೌಲರ್ ಜಯದೇವ್ ಉನದ್ಕತ್ ಗುರುವಾರ ಚಿತ್ತಗಾಂಗ್ ತಲುಪಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಭಾನುವಾರದಂದು ಜಯದೇವ್ ಉನದ್ಕತ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಲಾಯಿತು,

Written by - Bhavishya Shetty | Last Updated : Dec 15, 2022, 05:10 PM IST
    • ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ
    • ಅಪಾಯಕಾರಿ ಆಟಗಾರನೊಬ್ಬ ಟೀಂ ಇಂಡಿಯಾ ಪ್ರವೇಶಿಸಿದ್ದಾನೆ
    • ಟೀಂ ಇಂಡಿಯಾ ಸೇರಿದ್ದರಿಂದ ಬಾಂಗ್ಲಾದೇಶ ತಂಡವೂ ತಲ್ಲಣಗೊಂಡಿದೆ
IND vs BAN: ಟೀಂ ಇಂಡಿಯಾಗೆ ಈ ಅಪಾಯಕಾರಿ ಆಟಗಾರನ ದಿಢೀರ್ ಎಂಟ್ರಿ: ಭಯದಲ್ಲಿ ಬಾಂಗ್ಲಾ ತಂಡ! title=
india bangladesh test

India vs Bangladesh: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ನಡುವೆ ಇದ್ದಕ್ಕಿದ್ದಂತೆ ಅಪಾಯಕಾರಿ ಆಟಗಾರನೊಬ್ಬ ಟೀಂ ಇಂಡಿಯಾ ಪ್ರವೇಶಿಸಿದ್ದಾನೆ. ಈ ಆಟಗಾರ ಏಕಾಏಕಿ ಟೀಂ ಇಂಡಿಯಾ ಸೇರಿದ್ದರಿಂದ ಬಾಂಗ್ಲಾದೇಶ ತಂಡವೂ ತಲ್ಲಣಗೊಂಡಿದೆ. ಟೀಮ್ ಇಂಡಿಯಾದ ಈ ಆಟಗಾರ ತುಂಬಾ ಅಪಾಯಕಾರಿ ಮತ್ತು ತನ್ನ ಮಾರಕ ಆಟದಿಂದ ಬಾಂಗ್ಲಾದೇಶ ತಂಡವನ್ನು ನಾಶಪಡಿಸಬಹುದು. ಯಾವಾಗ ಈ ಆಟಗಾರನು ಬೌಲಿಂಗ್ ಮಾಡಲು ಮೈದಾನಕ್ಕೆ ಬರುತ್ತಾನೆ, ಆಗ ದೊಡ್ಡ ಬ್ಯಾಟ್ಸ್‌ಮನ್‌ಗಳು ಸಹ ಬೆವರು ಹರಿಸಲು ಪ್ರಾರಂಭಿಸುತ್ತಾರೆ.

ಇದನ್ನೂ ಓದಿ: ಹೆಚ್ಚು ಮೊಟ್ಟೆ ಸೇವಿಸದರೆ ಆರೋಗ್ಯಕ್ಕೆ ತಪ್ಪಿದಲ್ಲ ಈ 4 ಅಪಾಯಗಳು!

ಈ ಆಟಗಾರ 12 ವರ್ಷಗಳ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಮೂಲಕ ಮೈದಾನದಲ್ಲಿ ವಿಧ್ವಂಸಕರಾಗಲು ಕಾಯುತ್ತಿದ್ದಾರೆ. ಎಡಗೈ ವೇಗದ ಬೌಲರ್ ಜಯದೇವ್ ಉನದ್ಕತ್ ಗುರುವಾರ ಚಿತ್ತಗಾಂಗ್ ತಲುಪಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಭಾನುವಾರದಂದು ಜಯದೇವ್ ಉನದ್ಕತ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಲಾಯಿತು, ಆದರೆ ವೀಸಾ ಸಮಸ್ಯೆಗಳಿಂದಾಗಿ, ಚಿತ್ತಗಾಂಗ್‌ನಲ್ಲಿ ಬುಧವಾರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಆರಂಭದ ನಂತರವೇ ಅವರು ತಲುಪಲು ಸಾಧ್ಯವಾಯಿತು.

ಭಯದಿಂದ ನಡುಗುತ್ತಿರುವ ಬಾಂಗ್ಲಾದೇಶ ತಂಡ!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ, 'ಜೈದೇವ್ ಉನದ್ಕತ್ ಭಾರತ ತಂಡಕ್ಕೆ ಮತ್ತೊಮ್ಮೆ ಸ್ವಾಗತ' ಎಂದು ಹೇಳಿದೆ. 31 ವರ್ಷದ ಉನಾದ್ಕತ್ ಅವರು ಎರಡನೇ ಬಾರಿಗೆ ಭಾರತೀಯ ಟೆಸ್ಟ್ ತಂಡಕ್ಕೆ ಸೇರಿಕೊಂಡಿದ್ದಾರೆ. 12 ವರ್ಷಗಳ ಹಿಂದೆ 2010–11ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಅವರ ಏಕೈಕ ಟೆಸ್ಟ್ ಆಗಿತ್ತು. ಅವರಿಗೆ ಚೊಚ್ಚಲ ಟೆಸ್ಟ್ ಪಂದ್ಯವಾಡುವ ಅವಕಾಶ ನೀಡಲಾಯಿತು. ಆ ಟೆಸ್ಟ್ ಪಂದ್ಯದಲ್ಲಿ ಜಯದೇವ್ ಉನದ್ಕತ್ ಒಂದೇ ಒಂದು ವಿಕೆಟ್ ಪಡೆಯದೆ 101 ರನ್ ನೀಡಿದ್ದರು. ಈ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 25 ರನ್‌ಗಳಿಂದ ಸೋತಿತ್ತು.

ಇದನ್ನೂ ಓದಿ: AAI ನಲ್ಲಿ 364 ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಸಂಪೂರ್ಣ ಮಾಹಿತಿ ಬಿಡುಗಡೆ!

ಕಳೆದ 12 ವರ್ಷಗಳಲ್ಲಿ ಜಯದೇವ್ ಉನದ್ಕತ್ ಸಾಕಷ್ಟು ಬದಲಾಗಿದ್ದರೂ ಈಗ ಅವರು ಅತ್ಯಂತ ಅಪಾಯಕಾರಿ ವೇಗದ ಬೌಲರ್ ಆಗಿದ್ದಾರೆ. ಜಯದೇವ್ ಉನದ್ಕತ್ 96 ಪ್ರಥಮ ದರ್ಜೆ ಪಂದ್ಯಗಳಲ್ಲಿ 23.04 ಸರಾಸರಿಯಲ್ಲಿ 353 ವಿಕೆಟ್ ಪಡೆದಿದ್ದಾರೆ. ಈ ಕಾರಣಕ್ಕಾಗಿಯೇ ಈ ಬೌಲರ್ ನ್ನು 12 ವರ್ಷಗಳ ನಂತರ ಟೀಂ ಇಂಡಿಯಾಕ್ಕೆ ವಾಪಸ್ ಕರೆಸಿಕೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಡಿಸೆಂಬರ್ 22 ರಂದು ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಯದೇವ್ ಉನದ್ಕತ್ ಆಡುವುದು ಬಹುತೇಕ ಖಚಿತವಾಗಿದೆ. ಈ ವೇಗದ ಬೌಲರ್ ತನ್ನ ಲಯದಲ್ಲಿ ಬಂದರೆ, ಬಾಂಗ್ಲಾದೇಶ ತಂಡವನ್ನು ವಿನಾಶದಿಂದ ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News