ಬಹುದಾಖಲೆ ನಿರ್ಮಿಸಿದ ‘ಇಂಡಿಯಾದ ಮಿ.360’: Surya Kumar Yadav ರೆಕಾರ್ಡ್ ಗಳಿಗೆ ಸಾಟಿಯೇ ಇಲ್ಲ

ಸೂರ್ಯಕುಮಾರ್ ಯಾದವ್ 2022 ರಲ್ಲಿ T20I ಗಳಲ್ಲಿ ತಮ್ಮ ಅದ್ಭುತ ಓಟವನ್ನು ಮುಂದುವರೆಸಿದ್ದು, 700 ಕ್ಕೂ ಹೆಚ್ಚು ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. 2022 ರಲ್ಲಿ T20I ಗಳಲ್ಲಿ ಅವರ ರನ್ ಗಳಿಕೆಯು ಭಾರತೀಯ ಬ್ಯಾಟರ್‌ನ ದಾಖಲೆಯಾಗಿದೆ.

Written by - Bhavishya Shetty | Last Updated : Sep 28, 2022, 11:34 PM IST
    • ಟಿ20 ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಅಬ್ಬರದ ಪ್ರದರ್ಶನ
    • ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ
    • 700 ಕ್ಕೂ ಹೆಚ್ಚು ರನ್‌ಗಳನ್ನು ಪೂರ್ಣಗೊಳಿಸಿದ ಯಾದವ್
ಬಹುದಾಖಲೆ ನಿರ್ಮಿಸಿದ ‘ಇಂಡಿಯಾದ ಮಿ.360’: Surya Kumar Yadav ರೆಕಾರ್ಡ್ ಗಳಿಗೆ ಸಾಟಿಯೇ ಇಲ್ಲ title=
Suryakumar Yadav

ಬುಧವಾರ ತಿರುವನಂತಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಅಬ್ಬರದ ಪ್ರದರ್ಶನ ತೋರಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಟಿ20ಗಳ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 

ಇದನ್ನೂ ಓದಿ: ದೇವರನಾಡಲ್ಲಿ ಟೀಂ ಇಂಡಿಯಾ ಹೊಸ ದಾಖಲೆ:15 ಬಾಲ್, 5 ವಿಕೆಟ್-ಹರಿಣಗಳ ಬೆಂಡೆತ್ತಿದ ಭಾರತದ ಆಟಗಾರರು

ಸೂರ್ಯಕುಮಾರ್ ಯಾದವ್ 2022 ರಲ್ಲಿ T20I ಗಳಲ್ಲಿ ತಮ್ಮ ಅದ್ಭುತ ಓಟವನ್ನು ಮುಂದುವರೆಸಿದ್ದು, 700 ಕ್ಕೂ ಹೆಚ್ಚು ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. 2022 ರಲ್ಲಿ T20I ಗಳಲ್ಲಿ ಅವರ ರನ್ ಗಳಿಕೆಯು ಭಾರತೀಯ ಬ್ಯಾಟರ್‌ನ ದಾಖಲೆಯಾಗಿದೆ. ಜೊತೆಗೆ ಸೂರ್ಯಕುಮಾರ್ 2018 ರಲ್ಲಿ ಶಿಖರ್ ಧವನ್ 689 ರನ್‌ಗಳ ಮೂಲಕ ನಿರ್ಮಿಸಿದ್ದ ದಾಖಲೆಯನ್ನು ಮೀರಿಸಿದ್ದಾರೆ.

ಯಾದವ್ 180 ಸ್ಟ್ರೈಕ್ ರೇಟ್‌ನಲ್ಲಿ ಮತ್ತು 40 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ಈ ರನ್ ಗಳಿಸಿದ್ದಾರೆ ಎಂಬುದು ಅವರ ದಾಖಲೆಯನ್ನು ಇನ್ನಷ್ಟು ಮೆರುಗುಗೊಳಿಸುತ್ತಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ T20I ನಲ್ಲಿ ಭಾರತವು ಏಳನೇ ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 17 ರನ್ ಗಳಿಸಿದ್ದು. ಈ ವೇಳೆ ನಂ.4 ರಲ್ಲಿ ಕ್ರೀಸ್ ಗೆ ಬಂದ ಯಾದವ್ ತನ್ನ ಮೊದಲ ಮೂರು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳನ್ನು ಹೊಡೆದು ಟೀಂ ಇಂಡಿಯಾಗೆ ಬಲ ತುಂಬಿದರು. 33 ಎಸೆತಗಳಲ್ಲಿ 50 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ ಇನ್ನೂ ಮೂರು ಓವರ್‌ಗಳು ಬಾಕಿ ಇರುವಂತೆಯೇ ಗುರಿಯನ್ನು ಮುಟ್ಟಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.

ಇನ್ನಿಂಗ್ಸ್‌ನ ಆರಂಭದಲ್ಲಿ ಎರಡು ಸಿಕ್ಸರ್‌ ಬಾರಿಸಿದ ಯಾದವ್ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌ರವರ ದಾಖಲೆಯನ್ನೂ ಮುರಿದಿದ್ದಾರೆ. T20I ಗಳಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ದಾಖಲಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ರಿಜ್ವಾನ್ 2021 ರಲ್ಲಿ 42 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ದಾಖಲೆಯನ್ನು  ಮಾಡಿದ್ದರು.

ಇದೀಗ ಸೂರ್ಯ ಕುಮಾರ್ 45 ಸಿಕ್ಸರ್ ಗಳನ್ನು ಬಾರಿಸಿದ್ದು, ಇದು ಎಲ್ಲಾ T20I ಗಳಲ್ಲಿ ದಾಖಲೆಯಾಗಿದೆ. ರಿಜ್ವಾನ್ 42 ಸಿಕ್ಸರ್‌ಗಳನ್ನು ಸಿಡಿಸಲು 26 ಇನ್ನಿಂಗ್ಸ್ ತೆಗೆದುಕೊಂಡರೆ, ಸೂರ್ಯಕುಮಾರ್ ಅದರ ಐದು ಪಟ್ಟು ಕಡಿಮೆ ಬ್ಯಾಟಿಂಗ್ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ: IND vs SA T20I: ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾಗೆ ಐತಿಹಾಸಿಕ ಗೆಲುವು: ದ.ಆಫ್ರಿಕಾಗೆ ಹೀನಾಯ ಸೋಲು

ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20ಐನಲ್ಲಿ ಅರ್ಧಶತಕ ಗಳಿಸಿದ ಬಳಿಕ ಯಾದವ್ 801 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಇತ್ತೀಚಿನ MRF ಟೈರ್ಸ್ ICC ಪುರುಷರ T20I ಆಟಗಾರರ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News