ಸೂರ್ಯನಿಗೆ ಸೂರ್ಯನೇ ಸಾಟಿ: ಮತ್ತೊಂದು ಶತಕ ಬಾರಿಸಿ ದಾಖಲೆ...! 

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ  ಬ್ಯಾಟಿಂಗ್ ಮೂಲಕ ಕೀವಿಸ್‌ ದಾಳಿಯನ್ನು ಪುಡಿಗಟ್ಟಿದ್ದ ಟೀಂ ಇಂಡಿಯಾದ ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ ಕೇವಲ 49 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ.  ಈ ಸೂರ್ಯ ಶತನಕದ ಜೊತೆ ಮತ್ತೊಂದು ದಾಖಲೆ ಮಾಡಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಎರಡು ಶತಕ ಸಿಡಿಸಿದ ಖ್ಯಾತಿಗೆ ಸೂರ್ಯಕುಮಾರ್ ಯಾದವ್ ಭಾಜನರಾಗಿದ್ದಾರೆ.  ಎರಡನೇ T20 ಅಂತಾರಾಷ್ಟ್ರೀಯ ಶತಕಕ್ಕಾಗಿ ಸೂರ್ಯ 49 ಎಸೆತಗಳನ್ನು ಎದುರಿಸಿದರು. ಇದರಲ್ಲಿ 11 ಬೌಂಡರಿ ಮತ್ತು 7 ಸಿಕ್ಸರ್‌ಗಳು ಸೇರಿವೆ.

Written by - Krishna N K | Last Updated : Nov 20, 2022, 06:26 PM IST
  • ಮತ್ತೊಂದು ಶತಕ ಬಾರಿಸಿ ದಾಖಲೆ ನಿರ್ಮಿಸಿದ ಸೂರ್ಯಕುಮಾರ್‌ ಯಾದವ್‌
  • ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಯಾದವ್‌ ಭರ್ಜರಿ ಬ್ಯಾಟಿಂಗ್
  • ಸೂರ್ಯ 49 ಎಸೆತಗಳನ್ನು ಎದುರಿಸಿದರು. ಇದರಲ್ಲಿ 11 ಬೌಂಡರಿ ಮತ್ತು 7 ಸಿಕ್ಸರ್‌ಗಳು ಸೇರಿವೆ.
ಸೂರ್ಯನಿಗೆ ಸೂರ್ಯನೇ ಸಾಟಿ: ಮತ್ತೊಂದು ಶತಕ ಬಾರಿಸಿ ದಾಖಲೆ...!  title=

ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ  ಬ್ಯಾಟಿಂಗ್ ಮೂಲಕ ಕೀವಿಸ್‌ ದಾಳಿಯನ್ನು ಪುಡಿಗಟ್ಟಿದ್ದ ಟೀಂ ಇಂಡಿಯಾದ ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ ಕೇವಲ 49 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ.  ಈ ಸೂರ್ಯ ಶತನಕದ ಜೊತೆ ಮತ್ತೊಂದು ದಾಖಲೆ ಮಾಡಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಎರಡು ಶತಕ ಸಿಡಿಸಿದ ಖ್ಯಾತಿಗೆ ಸೂರ್ಯಕುಮಾರ್ ಯಾದವ್ ಭಾಜನರಾಗಿದ್ದಾರೆ.  ಎರಡನೇ T20 ಅಂತಾರಾಷ್ಟ್ರೀಯ ಶತಕಕ್ಕಾಗಿ ಸೂರ್ಯ 49 ಎಸೆತಗಳನ್ನು ಎದುರಿಸಿದರು. ಇದರಲ್ಲಿ 11 ಬೌಂಡರಿ ಮತ್ತು 7 ಸಿಕ್ಸರ್‌ಗಳು ಸೇರಿವೆ.

ಇದಕ್ಕೂ ಮೊದಲು ರೋಹಿತ್ ಶರ್ಮಾ ಭಾರತದ ಪರ ವೇಗದ ಶತಕ ಅಂದರೆ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಸೆಂಚೂರಿ ಬಾರಿಸಿದ್ದಾರೆ. ನಂತರದ ಸ್ಥಾನದಲ್ಲಿ ಕೆಎಲ್ ರಾಹುಲ್ ಇದ್ದಾರೆ. ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧ 46 ಎಸೆತಗಳಲ್ಲಿ ಶತಕ ಸಿಡಿಸಿದ್ದರು.  ಸೂರ್ಯ ಕುಮಾರ್‌ ಶತಕದ ನೆರವಿನಿಂದ ಭಾರತ 20 ಓವರ್‌ಗಳಲ್ಲಿ  6 ವಿಕೆಟ್‌ ಕಳೆದುಕೊಂಡು 191 ರನ್‌ ಗಳಿಸಿತ್ತು. ದೊಡ್ಡ ಮೊತ್ತ ಚೇಸ್‌ ಮಾಡಿದ ನ್ಯೂಜಿಲೆಂಡ್ 18.5 ಓವರ್‌ಗಳಲ್ಲಿ 126 ಸರ್ವಪತನವಾಯಿತು. ಇನ್ನೂ ಶತಕ ಸಿಡಿಸಿದ ಸೂರ್ಯ ಕುಮಾರ್‌ ಯಾದವ್‌ ಅರ್ಹವಾಗಿವೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.   

ಇದನ್ನೂ ಓದಿ: IND vs NZ : ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 65 ರನ್‌ಗಳ ಭರ್ಜರಿ ಜಯ!

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಪರ ಅತ್ಯಧಿಕ ರನ್ ಗಳಿಸಿದ ಆಟಗಾರರು 

ವಿರಾಟ್ ಕೊಹ್ಲಿ- 122 (61) vs ಅಫ್ಘಾನಿಸ್ತಾನ, ದುಬೈ 2022
ರೋಹಿತ್ ಶರ್ಮಾ 118(43) vs ಶ್ರೀಲಂಕಾ, ಇಂದೋರ್ 2017
ಸೂರ್ಯಕುಮಾರ್ ಯಾದವ್ 117(55) vs ಇಂಗ್ಲೆಂಡ್, ನಾಟಿಂಗ್ಹ್ಯಾಮ್ 2022
ಸೂರ್ಯಕುಮಾರ್ ಯಾದವ್ 111(51) ನ್ಯೂಜಿಲೆಂಡ್, ಮೌಂಟ್ ಮೌಂಗನುಯಿ 2022
ರೋಹಿತ್ ಶರ್ಮಾ 111(61) vs ವೆಸ್ಟ್ ಇಂಡೀಸ್, ಲಖನೌ 2018

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News