ಪಂದ್ಯದಲ್ಲಾದ ತಪ್ಪಿಗೆ ಈ ಆಟಗಾರನ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ Suryakumar Yadav!

Suryakumar Yadav apologized to Washington Sundar: ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 31 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿ ಟೀಂ ಇಂಡಿಯಾವನ್ನು ಗೆಲ್ಲುವಂತೆ ಮಾಡಿದ್ದಾರೆ. ಈ ಇನ್ನಿಂಗ್ಸ್‌ಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ನೀಡಲಾಯಿತು. ಪಂದ್ಯದ ನಂತರ ಸೂರ್ಯಕುಮಾರ್ ಯಾದವ್ ತಮ್ಮ ಸಹ ಆಟಗಾರ ವಾಷಿಂಗ್ಟನ್ ಸುಂದರ್ ಬಳಿ ಕ್ಷಮೆಯಾಚಿಸಿದರು.

Written by - Bhavishya Shetty | Last Updated : Jan 30, 2023, 08:21 PM IST
    • ಪಂದ್ಯದ ವೇಳೆ ಸೂರ್ಯಕುಮಾರ್ ಯಾದವ್ ದೊಡ್ಡ ತಪ್ಪು ಮಾಡಿದ್ದಾರೆ.
    • ಈ ತಪ್ಪಿಗೆ ಸಹ ಆಟಗಾರನ ಬಳಿ ಕ್ಷಮೆಯನ್ನೂ ಯಾಚಿಸಿದ್ದಾರೆ.
    • ಪಂದ್ಯದ ಮಧ್ಯದಲ್ಲಿ ಸೂರ್ಯಕುಮಾರ್ ಯಾದವ್ ಏನು ಮಾಡಿದ್ದಾರೆ ಗೊತ್ತಾ?
ಪಂದ್ಯದಲ್ಲಾದ ತಪ್ಪಿಗೆ ಈ ಆಟಗಾರನ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ Suryakumar Yadav!  title=
Suryakumar Yadav

Suryakumar Yadav apologized to Washington Sundar: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಿಧಾನಗತಿಯ ಇನ್ನಿಂಗ್ಸ್ ಆಡುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟಿದ್ದರು. ಈ ಪಂದ್ಯದ ವೇಳೆ ಸೂರ್ಯಕುಮಾರ್ ಯಾದವ್ ದೊಡ್ಡ ತಪ್ಪು ಮಾಡಿದ್ದಾರೆ. ಈ ತಪ್ಪಿಗೆ ಸಹ ಆಟಗಾರನ ಬಳಿ ಕ್ಷಮೆಯನ್ನೂ ಯಾಚಿಸಿದ್ದಾರೆ. ಪಂದ್ಯದ ಮಧ್ಯದಲ್ಲಿ ಸೂರ್ಯಕುಮಾರ್ ಯಾದವ್ ಏನು ಮಾಡಿದ್ದಾರೆ ಗೊತ್ತಾ?

ಇದನ್ನೂ ಓದಿ: Watch: ಕ್ರಿಕೆಟ್ ನಲ್ಲಿ ಯಾರೂ ಮಾಡಿಲ್ಲ ಇಂತಹ ಬೌಲಿಂಗ್: ಕುಲದೀಪ್ ಸ್ಟೈಲ್ ಗೆ ನ್ಯೂಜಿಲೆಂಡ್ ಆಟಗಾರ ಕ್ಲೀನ್ ಬೌಲ್ಡ್

ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 31 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿ ಟೀಂ ಇಂಡಿಯಾವನ್ನು ಗೆಲ್ಲುವಂತೆ ಮಾಡಿದ್ದಾರೆ. ಈ ಇನ್ನಿಂಗ್ಸ್‌ಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ನೀಡಲಾಯಿತು. ಪಂದ್ಯದ ನಂತರ ಸೂರ್ಯಕುಮಾರ್ ಯಾದವ್ ತಮ್ಮ ಸಹ ಆಟಗಾರ ವಾಷಿಂಗ್ಟನ್ ಸುಂದರ್ ಬಳಿ ಕ್ಷಮೆಯಾಚಿಸಿದರು. ವಾಸ್ತವವಾಗಿ, ಭಾರತೀಯ ಬ್ಯಾಟಿಂಗ್ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ಮಾಡಿದ ತಪ್ಪಿನಿಂದ ವಾಷಿಂಗ್ಟನ್ ಸುಂದರ್ ರನ್ ಔಟ್ ಆಗಿದ್ದರು, ಈ ಘಟನೆಯಿಂದಾಗಿ, ಪಂದ್ಯದ ನಂತರ ಅವರ ತಪ್ಪನ್ನು ಅವರೇ ಒಪ್ಪಿಕೊಂಡರು.

ಪಂದ್ಯದ ನಂತರ ಆ ಘಟನೆಯ ಬಗ್ಗೆ ಮಾತನಾಡಿದ ಸೂರ್ಯಕುಮಾರ್ ಯಾದವ್, 'ನಾನು ಬ್ಯಾಟಿಂಗ್ ಮಾಡಲು ಹೋದಾಗ ಪರಿಸ್ಥಿತಿ ಸುಲಭವಾಗಿರಲಿಲ್ಲ. ಪಿಚ್ ಬ್ಯಾಟಿಂಗ್ ಮಾಡಲು ಕಷ್ಟಕರವಾಗಿತ್ತು. ವಾಷಿಂಗ್ಟನ್ ಸುಂದರ್ ಔಟಾದ ನಂತರ, ಬ್ಯಾಟ್ಸ್‌ಮನ್‌ಗೆ ಪಿಚ್‌ನಲ್ಲಿ ಉಳಿಯುವುದು ಅನಿವಾರ್ಯವಾಗಿತ್ತು. ವಾಶಿ (ವಾಷಿಂಗ್ಟನ್ ಸುಂದರ್) ಔಟಾಗಿದ್ದು, ನನ್ನ ತಪ್ಪು” ಎಂದು ಹೇಳಿದರು.

ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ ಟೀಮ್ ಇಂಡಿಯಾದ ಈ ಸ್ಟಾರ್ ಆಟಗಾರ...!

ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದು ಭಾರತವನ್ನು ಕೊನೆಯ ಓವರ್‌ನಲ್ಲಿ ಗೆಲ್ಲಿಸುತ್ತೇನೆ ಎಂಬ ನಂಬಿಕೆ ನನ್ನಲ್ಲಿತ್ತು ಎಂದು ಬಿಸಿಸಿಐ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಸೂರ್ಯಕುಮಾರ್ ಹೇಳಿದ್ದಾರೆ. 'ಆಡುವುದು ಕಷ್ಟ. ಯಾರಾದರೂ ಕೊನೆಯವರೆಗೂ ಆಡುವುದು ಮುಖ್ಯ ಎಂಬ ಸ್ಪಷ್ಟ ಮನಸ್ಥಿತಿಯೊಂದಿಗೆ ನಾನು ಮೈದಾನದಲ್ಲಿದ್ದೆ. ಸಣ್ಣ ಪಾಲುದಾರಿಕೆಗಳನ್ನು ನಿರ್ಮಿಸುವುದು ಮತ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಅಷ್ಟೇ ಮುಖ್ಯವಾಗಿತ್ತು. ಅದು ಸಂಪೂರ್ಣವಾಗಿ ವಿಭಿನ್ನವಾದ ಪಿಚ್ ಎಂದು ನನಗೆ ತಿಳಿದಿತ್ತು. ಕೊನೆಯ ಓವರ್‌ವರೆಗೂ ಉಳಿದರೆ ಕೊನೆಯ ಓವರ್‌ನಲ್ಲೂ ಪಂದ್ಯ ಗೆಲ್ಲಬಹುದು ಎಂದು ನಂಬಿದ್ದೆ. ಹಾರ್ದಿಕ್ ಬಂದಾಗ, ಕೊನೆಯವರೆಗೂ ಪಂದ್ಯವನ್ನು ತೆಗೆದುಕೊಂಡ ಹೋಗಬೇಕು ಎಂದು ಮಾತನಾಡಿಕೊಂಡೆವು” ಎಂದು ಹೇಳಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News