Watch: ಕ್ರಿಕೆಟ್ ನಲ್ಲಿ ಯಾರೂ ಮಾಡಿಲ್ಲ ಇಂತಹ ಬೌಲಿಂಗ್: ಕುಲದೀಪ್ ಸ್ಟೈಲ್ ಗೆ ನ್ಯೂಜಿಲೆಂಡ್ ಆಟಗಾರ ಕ್ಲೀನ್ ಬೌಲ್ಡ್

Kuldeep Yadav Bowling Style: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಕುಲದೀಪ್ ಯಾದವ್ ಅದ್ಭುತ ಬೌಲಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಬೌಲಿಂಗ್‌ನಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಬಿಗಿಯಾದ ನಿಯಂತ್ರಣವನ್ನು ಇಟ್ಟುಕೊಂಡಿದ್ದರು. ಎದುರಾಳಿಗಳೀಗೆ ದೊಡ್ಡ ಹೊಡೆತಗಳನ್ನು ಬಹಿರಂಗವಾಗಿ ಮಾಡಲು ಅವಕಾಶ ನೀಡಲಿಲ್ಲ.

Written by - Bhavishya Shetty | Last Updated : Jan 30, 2023, 04:46 PM IST
    • ಬೌಲರ್‌ಗಳ ಬಲದಿಂದ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸಿತು
    • ಈ ಪಂದ್ಯದಲ್ಲಿ ಕುಲದೀಪ್ ಯಾದವ್ ಅದ್ಭುತ ಪ್ರದರ್ಶನ ನೀಡಿದ್ದಾರೆ
    • ಕುಲದೀಪ್ ಯಾದವ್ ಮಾಡಿರುವ ಬೌಲಿಂಗ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ
Watch: ಕ್ರಿಕೆಟ್ ನಲ್ಲಿ ಯಾರೂ ಮಾಡಿಲ್ಲ ಇಂತಹ ಬೌಲಿಂಗ್: ಕುಲದೀಪ್ ಸ್ಟೈಲ್ ಗೆ ನ್ಯೂಜಿಲೆಂಡ್ ಆಟಗಾರ ಕ್ಲೀನ್ ಬೌಲ್ಡ್ title=
Kuldeep Yadav

Kuldeep Yadav Bowling Style: ಲಕ್ನೋದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಕೊನೆಯ ಓವರ್‌ನಲ್ಲಿ ಗೆಲುವು ಸಾಧಿಸಿದೆ. ಬೌಲರ್‌ಗಳ ಬಲದಿಂದ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸಿತು. ಇನ್ನು ಈ ಪಂದ್ಯದಲ್ಲಿ ಕುಲದೀಪ್ ಯಾದವ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ತಮ್ಮ ಬೌಲಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಅವರು ಟೀಮ್ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದರು. ಇನ್ನು ಈ ಪಂದ್ಯದಲ್ಲಿ ಕುಲದೀಪ್ ಯಾದವ್ ಮಾಡಿರುವ ಬೌಲಿಂಗ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ರೋಚಕ ಪೆನಾಲ್ಟಿ ಶೂಟ್ ಔಟ್ ನಲ್ಲಿ ಜರ್ಮನಿಗೆ ಒಲಿದ ಹಾಕಿ ವಿಶ್ವಕಪ್

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಕುಲದೀಪ್ ಯಾದವ್ ಅದ್ಭುತ ಬೌಲಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಬೌಲಿಂಗ್‌ನಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಬಿಗಿಯಾದ ನಿಯಂತ್ರಣವನ್ನು ಇಟ್ಟುಕೊಂಡಿದ್ದರು. ಎದುರಾಳಿಗಳೀಗೆ ದೊಡ್ಡ ಹೊಡೆತಗಳನ್ನು ಬಹಿರಂಗವಾಗಿ ಮಾಡಲು ಅವಕಾಶ ನೀಡಲಿಲ್ಲ. ತಮ್ಮ ನಾಲ್ಕು ಓವರ್‌ಗಳಲ್ಲಿ 17 ರನ್ ನೀಡಿ 1 ವಿಕೆಟ್ ಪಡೆದರು. ಇನ್ನೊಂದೆಡೆ ಟೀಂ ಇಂಡಿಯಾ ಪಂದ್ಯ ಗೆಲ್ಲಲು ಪ್ರಮುಖವಾಗಿ ಇವರೇ ಕಾರಣ ಎನ್ನುವಂತಾಯಿತು.

 

ಕುಲದೀಪ್ ಯಾದವ್ ಪಂದ್ಯದ 10ನೇ ಓವರ್ ನಲ್ಲಿ ಬೌಲಿಂಗ್ ಮಾಡುತ್ತಿದ್ದರು. ಈ ಓವರ್‌ನ ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ ತಂಡದ ಅಪಾಯಕಾರಿ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಈ ಚೆಂಡು ಆಫ್ ಸ್ಟಂಪ್‌ನ ಹೊರಗೆ ತುಂಬಾ ದೂರದಲ್ಲಿತ್ತು. ಆದರೆ ಈ ಚೆಂಡು ತುಂಬಾ ದೊಡ್ಡ ತಿರುವು ಪಡೆದುಕೊಂಡು ಸ್ವತಃ ಮಿಚೆಲ್ ಕೂಡ ಆಶ್ಚರ್ಯಚಕಿತರಾದರು. ಔಟಾದ ಬಳಿಕ ಪಿಚ್‌ ಅನ್ನು ಬಹಳ ಹೊತ್ತು ನೋಡುತ್ತಿದ್ದರು. ಇಲ್ಲಿ ಕ್ರೀಡಾಂಗಣದಲ್ಲಿದ್ದ ಉಳಿದವರೂ ಚೆಂಡಿನ ತಿರುವಿನಲ್ಲಿ ಅಚ್ಚರಿ ಮೂಡಿಸಿದರು. ಬಿಸಿಸಿಐ ಈ ವಿಡಿಯೋವನ್ನು ಶೇರ್ ಮಾಡಿದೆ.

ಇದನ್ನೂ ಓದಿ: IND vs NZ: ಅವಕಾಶ ಸಿಕ್ಕ ತಕ್ಷಣ ಇತಿಹಾಸ ಸೃಷ್ಟಿಸಿದ ಚಹಲ್, ಈ ದಾಖಲೆ ಬರೆದ ಭಾರತದ ಮೊದಲ ಆಟಗಾರ.!

ಕುಲದೀಪ್ ಯಾದವ್ ಟಿ20 ಕ್ರಿಕೆಟ್‌ನ ಶ್ರೇಷ್ಠ ಆಟಗಾರ. ಅವರ ಎಸೆತಗಳನ್ನು ಆಡುವುದು ಅಷ್ಟು ಸುಲಭವಲ್ಲ. ಅವರು ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸುತ್ತಾರೆ. ಯಾವುದೇ ಬ್ಯಾಟಿಂಗ್ ದಾಳಿಯನ್ನು ನಾಶಪಡಿಸುವ ಸಾಮರ್ಥ್ಯ ಅವರಲ್ಲಿದೆ. ಟೀಂ ಇಂಡಿಯಾ ಪರ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದಿದ್ದಾರೆ. ಟೀಂ ಇಂಡಿಯಾ ಪರ 8 ಟೆಸ್ಟ್ ಪಂದ್ಯಗಳಲ್ಲಿ 34 ವಿಕೆಟ್, 78 ಏಕದಿನ ಪಂದ್ಯಗಳಲ್ಲಿ 130 ವಿಕೆಟ್ ಹಾಗೂ 27 ಟಿ20 ಪಂದ್ಯಗಳಲ್ಲಿ 46 ವಿಕೆಟ್ ಪಡೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News