ಟಿ-10 ಕ್ರಿಕೆಟ್ ಲೀಗ್: ಫೈನಲ್ ನಲ್ಲಿ ಫಾಕ್ತೋನ್ಸ್ ವಿರುದ್ದ ZEE5 ಪ್ರಾಯೋಜಿತ ನಾರ್ಥನ್ ವಾರಿಯರ್ಸ್

ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ನ ಭಾಗವಾಗಿರುವ ಜಾಗತಿಕ ಡಿಜಿಟಲ್ ಎಂಟರ್ಟೈನ್ಮೆಂಟ್ ವೇದಿಕೆಯಾಗಿರುವ ZEE5  ಇತ್ತೀಚೆಗೆ 190+ ದೇಶಗಳಲ್ಲಿ ಉದ್ಘಾಟನೆಗೊಂಡಿತು. ಇದು ಈಗ -10 ಕ್ರಿಕೆಟ್ ಲೀಗ್ ನ ಎರಡನೇ ಸೀಸನ್ನಲ್ಲಿ ನಾರ್ಥನ್ ವಾರಿಯರ್ಸ್ ತಂಡದ ಪ್ರಾಯೋಜಕತ್ವವನ್ನು ವಹಿಸಿದೆ. ಈ ಬಾರಿ T10 ಕ್ರಿಕೆಟ್ ಲೀಗ್ ನಲ್ಲಿ ಹೊಸದಾಗಿ ಪ್ರವೇಶಿಸಿದ ಮೂರು ತಂಡಗಳಲ್ಲಿ ಈ ತಂಡವು ಕೂಡ ಒಂದು.

Updated: Dec 3, 2018 , 07:15 AM IST
ಟಿ-10 ಕ್ರಿಕೆಟ್ ಲೀಗ್: ಫೈನಲ್ ನಲ್ಲಿ ಫಾಕ್ತೋನ್ಸ್ ವಿರುದ್ದ  ZEE5 ಪ್ರಾಯೋಜಿತ ನಾರ್ಥನ್ ವಾರಿಯರ್ಸ್
Photo courtesy: Twitter

ಶಾರ್ಜಾ: ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ನ ಭಾಗವಾಗಿರುವ ಜಾಗತಿಕ ಡಿಜಿಟಲ್ ಎಂಟರ್ಟೈನ್ಮೆಂಟ್ ವೇದಿಕೆಯಾಗಿರುವ ZEE5  ಇತ್ತೀಚೆಗೆ 190+ ದೇಶಗಳಲ್ಲಿ ಉದ್ಘಾಟನೆಗೊಂಡಿತು. ಇದು ಈಗ -10 ಕ್ರಿಕೆಟ್ ಲೀಗ್ ನ ಎರಡನೇ ಸೀಸನ್ನಲ್ಲಿ ನಾರ್ಥನ್ ವಾರಿಯರ್ಸ್ ತಂಡದ ಪ್ರಾಯೋಜಕತ್ವವನ್ನು ವಹಿಸಿದೆ. ಈ ಬಾರಿ T10 ಕ್ರಿಕೆಟ್ ಲೀಗ್ ನಲ್ಲಿ ಹೊಸದಾಗಿ ಪ್ರವೇಶಿಸಿದ ಮೂರು ತಂಡಗಳಲ್ಲಿ ಈ ತಂಡವು ಕೂಡ ಒಂದು.

ಶನಿವಾರದಂದು ಶಾರ್ಜಾದಲ್ಲಿ ಮರಾಠ ಅರೆಬಿಯನ್ಸ್ ಸ್ಕ್ವಾಡ್  ವಿರುದ್ದ ಟಾಸ್ ಗೆದ್ದು ಮೊದಲು ಬೌಲಿಂಗ್ ಆರಿಸಿಕೊಂಡಿತು.ಆದರೆ  ನಾರ್ಥನ್ ವಾರಿಯರ್ಸ್ ಬೌಲರ್ ಗಳಾದ ಹರ್ದುಸ್ ವಿಲ್ಜೋಎನ್ ಮೂರು ವಿಕೆಟ್  ಆಂಡ್ರ್ ರಸೆಲ್ ಹಾಗೂ ವಹಾಬ್ ರಿಯಾಜ್ ತಲಾ ಎರಡು ವಿಕೆಟ್ ಪಡೆಯುವ ಮೂಲಕ ಮೂಲಕ  ಮರಾಠ ಅರೆಬಿಯನ್ಸ್ ತಂಡವನ್ನು 10 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ  72 ರನ್ ಗಳಿಗೆ ನಿಯಂತ್ರಿಸಿದರು.

ಇದಾದ ನಂತರ 73 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ನಾರ್ಥನ್ ವಾರಿಯರ್ಸ್ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ  ಕೇವಲ ಐದು ಓವರ್ ಗಳಲ್ಲಿ ಲೆಂದಲ್ ಸೈಮನ್ಸ್  (31) ನಿಕೊಲಸ್ ಪೂರಣ್(43) ಅಜೇಯ ಆಟದಿಂದಾಗಿ ಗೆಲುವಿನ ದಡ ಸೇರಿದೆ.ಆ ಮೂಲಕ ಈಗ ಟಿ-10 ಪ್ರಶಸ್ತಿಗಾಗಿ ಫಾಕ್ತೋನ್ಸ್ ತಂಡದ ವಿರುದ್ದ ಡಿಸೆಂಬರ್ 2 ರಂದು  ನಾರ್ಥನ್ ವಾರಿಯರ್  ತಂಡವು  ಫೈನಲ್ ನಲ್ಲಿ ಸೆಣಸಲಿದೆ. ಈಗ ಇದರಲ್ಲಿ ಯಾರೂ ಗೆಲ್ಲುತ್ತಾರೆ ಎನ್ನುವುದನ್ನು ನಾವು ನೋಡಬೇಕಾಗಿದೆ.