Smart Electricity Metres: ಇನ್ಮುಂದೆ ನೀವು ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಹೌದು, ಆಶ್ಚರ್ಯವಾದರೂ ಇದು ನಿಜ. ಮೊಬೈಲ್ ರೀಚಾರ್ಜ್ ಮಾಡಿ ಉಪಯೋಗಿಸುವಂತೆ ವಿದ್ಯುತ್ ಬಿಲ್ಲನ್ನು ಸಹ ಮುಂಗಡ ಹಣ ಪಾವತಿಸಿ ಉಪಯೋಗಿಸುವ ಸೌಲಭ್ಯವನ್ನು ವಿದ್ಯುತ್ ಇಲಾಖೆಯು ಸಾರ್ವಜನಿಕರಿಗೆ ಒದಗಿಸಿದೆ.
ಪ್ರತಿದಿನ ಒಂದಲ್ಲ ಒಂದು ಮನೆಯಲ್ಲಿ ವಿದ್ಯುತ್ ಕುರಿತು ಗೊಂದಲ ಸೃಷ್ಟಿಯಾಗುತ್ತಿತ್ತು. ಮಧ್ಯಮ ವರ್ಗದ ಜನರು ಸರಾಸರಿ 500 ರಿಂದ 1000 ಯೂನಿಟ್ ವಿದ್ಯುತ್ ಉಪಯೋಗಿಸಿದ್ರೆ ತಿಂಗಳ ಕೊನೆಯಲ್ಲಿ ಅವರಿಗೆ 20,000 ದಿಂದ 25,000 ರೂ.ವರೆಗೆ ವಿದ್ಯುತ್ ಬಿಲ್ ಬರುತ್ತಿತ್ತು. ದೊಡ್ಡಮೊತ್ತದ ವಿದ್ಯತ್ ಬಿಲ್ ಕಂಡು ಜನಸಾಮಾನ್ಯರು ಹೌಹಾರುತ್ತಿದ್ದರು. ಇಂತಹ ಸಮಸ್ಯೆಗಳಿಂದ ಅನೇಕರು ಬೇಸತ್ತು ಹೋಗಿದ್ದರು. ಜನಸಾಮಾನ್ಯರ ಸಂಕಷ್ಟವನ್ನರಿತ ವಿದ್ಯುತ್ ಇಲಾಖೆಯು ಇದೀಗ ಮುಂಗಡ ರಿಚಾರ್ಜ್ ಮಾಡಿಕೊಂಡು ವಿದ್ಯುತ್ ಉಪಯೋಗಿಸುವ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್ ಕಾರ್ಯರೂಪಕ್ಕೆ ತಂದಿದೆ. ಇದರಿಂದ ಗ್ರಾಹಕರು ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿರಲ್ಲ.
ಇದನ್ನೂ ಓದಿ: ಹಳೆಯ ಪಿಂಚಣಿ ಯೋಜನೆ,ತೆರಿಗೆ ವಿನಾಯಿತಿ, 8ನೇ ವೇತನ ಆಯೋಗ ಜಾರಿ ಸೇರಿದಂತೆ ಬಜೆಟ್ ಮೇಲೆ ಜನ ಸಾಮಾನ್ಯರ ನಿರೀಕ್ಷೆಗಳು
ನಾವು ಎಷ್ಟು ವಿದ್ಯುತ್ ಬಳಸುತ್ತೇವೆಯೋ ಅಷ್ಟನ್ನು ಮಾತ್ರ ಮೊಬೈಲ್ನಲ್ಲಿ ರಿಚಾರ್ಜ್ ಮಾಡಿಕೊಂಡು ಉಪಯೋಗಿಸುವ ಸೌಲಭ್ಯವಿದೆ. ವಿದ್ಯುತ್ ಇಲಾಖೆಯು ಭಾರತದ ಪ್ರತಿಯೊಂದು ಮನೆಗಳಿಗೂ ಇಂತಹ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್ ಅಳವಡಿಕೆ ಮಾಡುವ ಭರವಸೆ ನೀಡಿದೆ. ಈ ಸ್ಮಾರ್ಟ್ ಎಲೆಕ್ಟ್ರಿಕ್ ಸಿಟಿ ಮೀಟರ್ಗಳಲ್ಲಿ 4G ಸಿಮ್ಗಳನ್ನು ಅಳವಡಿಸಲಾಗಿರುತ್ತದೆ. ಇದು ವಿದ್ಯುತ್ತಿನ ನಿಧಾನಗತಿ ಬಳಕೆ ಹಾಗೂ ಬಾಕಿ ಮೊತ್ತದ ಸಂಪೂರ್ಣ ವಿವರವನ್ನು ತಿಳಿಸುತ್ತದೆ. ಇದರ ಜೊತೆಗೆ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ನಿಮ್ಮ ಮೊಬೈಲ್ಗೆ ಅಪ್ಡೇಟ್ ಮಾಡಲಿದೆ. ಇದರಿಂದ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಮೀಟರ್ಗಳ ಸಮಸ್ಯೆಗಳು ಕೊನೆಗೊಳ್ಳುತ್ತವೆ.
ಮಿನಿಮಮ್ ಬಿಲ್ ಪಾವತಿಸುವಂತಿಲ್ಲ!
ನಿಮ್ಮ ಮನೆಗೆ ಈ ಸ್ಮಾರ್ಟ್ ಮೀಟರ್ ಅಳವಡಿಸಿಕೊಂಡರೆ ಸಾಕು ವಿದ್ಯುತ್ ಸಂಪೂರ್ಣ ಮುಗಿದ ಬಳಿಕ ನಿಮ್ಮ ಮೊಬೈಲ್ಗೆ ಸಂದೇಶ ಬರಲಿದೆ. ನಂತರ ಸ್ಮಾರ್ಟ್ಫೋನ್ ಸಿಮ್ ರಿಚಾರ್ಜ್ ಮಾಡುವಂತೆ ಸ್ಮಾರ್ಟ್ ಮೀಟರ್ಗಳನ್ನು ಸಹ ರಿಚಾರ್ಜ್ ಮಾಡಿಕೊಂಡು ವಿದ್ಯುತ್ ಬಳಸಬಹುದು. ಇದರಿಂದ ನೀವು ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವ ಅಗತ್ಯರಲ್ಲ. ಇದಲ್ಲದೆ ಈ ಹಿಂದೆ ವಿದ್ಯುತ್ ಬಳಸದಿರುವವರ ಕನಿಷ್ಠ ವಿದ್ಯುತ್ ಬಿಲ್ ಪಾವತಿ ಮಾಡಬೇಕಿತ್ತು. ಆದರೆ ಇನ್ಮುಂದೆ ಈ ರೀತಿಯ ಯಾವುದೇ ಸಮಸ್ಯೆಗಳಿರಲ್ಲ.
ಇದನ್ನೂ ಓದಿ: Nandini Milk Price Hike: ನಂದಿನಿ ಹಾಲಿನ ದರ ಹೆಚ್ಚಳ... ಪರಿಷ್ಕೃತ ಬೆಲೆ ಇಲ್ಲಿದೆ ನೋಡಿ
ಈ ಜನರಿಗೆ ಮಾತ್ರ ಉಚಿತ ವಿದ್ಯುತ್!
ಕೇಂದ್ರ ಸರ್ಕಾರವು ದೆಹಲಿಯ ಜನರಿಗೆ ಉಚಿತವಾಗಿ 300 ನಿಮಿಷಗಳ ವಿದ್ಯುತ್ ನೀಡಲು ಮುಂದಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಬಡವರು ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆಯಲು ವಿದ್ಯುತ್ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ಬೇಕಾದ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ನೀವು ಅರ್ಹರಿದ್ದರೆ ನಿಮಗೆ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.