ನವದೆಹಲಿ: ಕ್ರಿಸ್ ಗ್ರೀವ್ಸ್ ಅವರ 45 ರನ್ ಹಾಗೂ ಎರಡು ವಿಕೆಟ್ ಗಳ ನೆರವಿನಿಂದ ಸ್ಕಾಟ್ಲೆಂಡ್ ತಂಡವು ಬಾಂಗ್ಲಾದೇಶದ ವಿರುದ್ಧ ಆರು ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಬಾಂಗ್ಲಾದೇಶ (Bangladesh) ವು ಸ್ಕಾಟ್ಲೆಂಡ್ ತಂಡವನ್ನು 9 ವಿಕೆಟ್ ಗಳ ನಷ್ಟಕ್ಕೆ 140 ರನ್ ಗಳಿಗೆ ನಿಯಂತ್ರಿಸಿತು.ಸ್ಕಾಟ್ಲೆಂಡ್ ಪರವಾಗಿ ಕ್ರಿಸ್ ಗ್ರಿವ್ಸ್ ಕೇವಲ 28 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳ ನೆರವಿನಿಂದ 45 ರನ್ ಗಳಿಸಿದರೆ, ಮುಂಸೆ ಕ್ರಮವಾಗಿ, 29 ಹಾಗೂ ಮಾರ್ಕ್ ವ್ಯಾಟ್, 22 ರನ್ ಗಳಿಸಿ ತಂಡಕ್ಕೆ ನೆರವಾದರು.
Scotland's star man ⭐️
An excellent performance with the bat as well as two vital wickets!#T20WorldCup pic.twitter.com/7dUR97g5YK
— ICC (@ICC) October 17, 2021
ಇದನ್ನೂ ಓದಿ: ಜಾತಿ ನಿಂದನೆ ಆರೋಪದ ಹಿನ್ನಲೆಯಲ್ಲಿ ಕ್ರಿಕೆಟರ್ ಯುವರಾಜ್ ಸಿಂಗ್ ಬಂಧನ
141 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶವು ಬ್ರ್ದಾಡ್ಲಿ ವೀಲ್ ಹಾಗೂ ಕ್ರಿಸ್ ಗ್ರಿವ್ಸ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿತು, ಇವರಿಬ್ಬರು ಆಟಗಾರರು ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಗಳನ್ನು ಕಬಳಿಸಿದರು. ಬಾಂಗ್ಲಾದೇಶದ ಪರವಾಗಿ ಮುಶ್ಫಿಕರ್ ರಹಿಮ್,38 ರನ್ ಗಳಿಸಿದ್ದೆ ತಂಡದ ಪರವಾಗಿ ಅಧಿಕ ಮೊತ್ತವಾಗಿತ್ತು. ಕೊನೆಗೆ ಬಾಂಗ್ಲಾದೇಶದ ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 134 ರನ್ ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು.
ಇದನ್ನೂ ಓದಿ: 2007 T20 World Cup Champion : ಕ್ರಿಕೆಟ್ ನಲ್ಲಿ ಭಾರತ ಇಂದು ಪಾಕ್ ವಿರುದ್ಧ ಗೆದ್ದು ಇತಿಹಾಸ ಸೃಷ್ಟಿಸಿದ ದಿನ!
ಸಂಕ್ಷಿಪ್ತ ಸ್ಕೋರ್ : ಸ್ಕಾಟ್ಲೆಂಡ್ 140/9 (ಕ್ರಿಸ್ ಗ್ರೀವ್ಸ್ 45, ಜಾರ್ಜ್ ಮುನ್ಸೆ 29, ಮಹೆದಿ ಹಸನ್ 3-19); ಬಾಂಗ್ಲಾದೇಶ 134/7 (ಮುಷ್ಫಿಕರ್ ರಹೀಮ್ 38, ಮಹ್ಮದುಲ್ಲಾ 23, ಬ್ರಾಡ್ಲಿ ವೀಲ್ 3-24).
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ