T20 World Cup 2021: ಐಪಿಎಲ್ 2021 ರ ರೋಚಕತೆಗೆ ಈಗಾಗಲೇ ತೆರೆ ಬಿದ್ದಿದೆ. ಐಸಿಸಿ ಇದೀಗ ಟಿ 20 ವಿಶ್ವಕಪ್ (ICC T20 World Cup 2021) ರೂಪದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಅನನ್ಯ ಉಡುಗೊರೆಯನ್ನು ನೀಡಲಿದ್ದು, ಇಂದಿನಿಂದ ಅದರ ಶುಭಾರಂಭವಾಗಲಿದೆ. ಪಂದ್ಯಾವಳಿಯ ಮೊದಲ ಅರ್ಹತಾ ಪಂದ್ಯವು ಅಲ್ ಎಮಿರೇಟ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಒಮನ್ ಮತ್ತು ಪಪುವಾ ನ್ಯೂಗಿನಿಯಾ ಈ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ನವೆಂಬರ್ 14 ರಂದು ದುಬೈನಲ್ಲಿ ನಡೆಯಲಿರುವ ಅಂತಿಮ ಪಂದ್ಯದ ಮೂಲಕ ಈ ಪಂದ್ಯಾವಳಿಯ ವಿಜೇತರನ್ನು ನಿರ್ಧರಿಸಲಾಗುವುದು. ಈ ಬಾರಿ ಪಂದ್ಯಾವಳಿಯು ಸೂಪರ್ 12 ಮಾದರಿಯಲ್ಲಿ ನಡೆಯಲಿದ್ದು, ಇದಕ್ಕಾಗಿ ಎಂಟು ತಂಡಗಳು ನೇರವಾಗಿ ಅರ್ಹತೆ ಪಡೆದಿವೆ, ಉಳಿದ ನಾಲ್ಕು ತಂಡಗಳನ್ನು ಅರ್ಹತಾ ಸುತ್ತಿನ ಮೂಲಕ ಎಂಟ್ರಿ ಪಡೆಯಲಿವೆ. ಹಾಗಾದರೆ ಬನ್ನಿ ಈ ಬಾರಿಯ ಟಿ 20 ವಿಶ್ವಕಪ್‌ನ ಮುಖ್ಯಾಂಶಗಳೇನು ತಿಳಿದುಕೊಳ್ಳೋಣ.
ಟೂರ್ನಿಯ ಫಾರ್ಮ್ಯಾಟ್ (T20 World Cup 2021 Format)
ಟಿ 20 ವಿಶ್ವಕಪ್‌ನ ಮೊದಲ ಸುತ್ತು ಅರ್ಹತಾ ಸುತ್ತಿನ ಪಂದ್ಯವಾಗಿದ್ದು, ಇದರಲ್ಲಿ ತಲಾ ನಾಲ್ಕು ತಂಡಗಳ ಒಟ್ಟು ಎರಡು ಗುಂಪುಗಳಿವೆ. ಇಲ್ಲಿ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ನೇರವಾಗಿ ಸೂಪರ್ 12 ಪ್ರವೇಶಿಸಲಿವೆ. ಇಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ A ಗುಂಪಿನಲ್ಲಿದ್ದರೆ, ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಆತಿಥೇಯ ಒಮಾನ್ B ಗುಂಪಿನಲ್ಲಿವೆ. ಸೂಪರ್ 12 ಆರು ತಂಡಗಳ ಎರಡು ಗುಂಪುಗಳನ್ನು ಹೊಂದಿರುತ್ತದೆ, ಅಲ್ಲಿ ರೌಂಡ್ ರಾಬಿನ್ ಆಧಾರದ ಮೇಲೆ ಪಂದ್ಯಗಳನ್ನು ಆಡಲಾಗುವುದು. ಇದರಲ್ಲಿ ಎರಡೂ ಗುಂಪುಗಳ ಅಗ್ರ ಎರಡು ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.
ಟೂರ್ನಿಯಲ್ಲಿ ಪಾಯಿಂಟ್ ಸಿಸ್ಟಂ ಹೇಗಿರಲಿದೆ? (T20 World Cup 2021 Point System)
ಟಿ 20 ವಿಶ್ವಕಪ್‌ನಲ್ಲಿ ವಿಜೇತ ತಂಡವು ಎರಡು ಅಂಕಗಳನ್ನು ಪಡೆಯುತ್ತದೆ. ಇದರ ಹೊರತಾಗಿ, ಟೈ, ಫಲಿತಾಂಶ ಮತ್ತು ರದ್ದತಿಯ ಸಂದರ್ಭದಲ್ಲಿ ಒಂದು ಪಾಯಿಂಟ್ ಮತ್ತು ಸೋತ ಅಥವಾ ವಿಥ್ ಡ್ರಾ ಸಂದರ್ಭಗಳಲ್ಲಿ ಶೂನ್ಯ ಅಂಕಗಳನ್ನು ನೀಡಲಾಗುವುದು.
ದೊಡ್ಡ ಪಂದ್ಯಗಳಿಗೆ ದಿನಗಳನ್ನು ಮೀಸಲಿರಿಸಲಾಗಿದೆ ಅಥವಾ ಇಲ್ಲ?
ಈ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನದ ಅವಕಾಶವಿದೆ. ಈ ಪಂದ್ಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಂದ್ಯಗಳಿಗೆ ದಿನವನ್ನು ಮೀಸಲಾಗಿರಿಸಿಲ್ಲ. ಇಲ್ಲಿ ನಿಗದಿತ ದಿನಾಂಕದಂದು ಕನಿಷ್ಠ 5 ಓವರ್‌ಗಳ ಪಂದ್ಯ ಸಾಧ್ಯವಾಗದಿದ್ದರೆ ಮಾತ್ರ ಮೀಸಲು ದಿನದಂದು ಪಂದ್ಯವನ್ನು ಆಡಲಾಗುವುದು. ನಿಗದಿತ ದಿನಾಂಕದಂದು ಪಂದ್ಯ ಆರಂಭವಾದರೆ ಮತ್ತು ಕೆಲವು ಕಾರಣಗಳಿಂದ ಓವರ್‌ಗಳ ಸಂಖ್ಯೆ ಕಡಿಮೆಯಾದರೆ ಮತ್ತು ಆ ದಿನ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾದರೆ, ಮೀಸಲು ದಿನದಂದು ಪಂದ್ಯವನ್ನು ಎಲ್ಲಿ ನಿಲ್ಲಿಸಲಾಗಿದೆಯೋ ಅಲ್ಲಿಂದಲೇ ಮತ್ತೆ ಮುಂದುವರೆಯಲಿದೆ.
ಭಾರತದ ಷೆಡ್ಯೂಲ್ ಈ ರೀತಿಯಾಗಿದೆ (T20 World Cup 2021 Schedule)
>> 24 ಅಕ್ಟೋಬರ್ - ಭಾರತ vs ಪಾಕಿಸ್ತಾನ
>> 31 ಅಕ್ಟೋಬರ್ - ಭಾರತ vs ನ್ಯೂಜಿಲ್ಯಾಂಡ್
>> ನವೆಂಬರ್ 3 - ಭಾರತ vs ಅಫ್ಘಾನಿಸ್ತಾನ
>> 5 ನವೆಂಬರ್ - ಭಾರತ vs ಕ್ವಾಲಿಫೈಯರ್ (ಅರ್ಹತಾ ಸುತ್ತಿನಲ್ಲಿ ಬಿ ಗುಂಪಿನ ವಿಜೇತ)
>> ನವೆಂಬರ್ 8 - ಭಾರತ vs ಕ್ವಾಲಿಫೈಯರ್ (ಅರ್ಹತಾ ಸುತ್ತಿನಲ್ಲಿ ಎ ಗುಂಪಿನ ರನ್ನರ್ ಅಪ್ ತಂಡ)
T20 World Cup History
ಟಿ 20 ವಿಶ್ವಕಪ್ 2007 ರಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತದ ಯುವ ತಂಡವನ್ನು ಮುನ್ನಡೆಸಿದ್ದರು ಮತ್ತು ಈ ಟೂರ್ನಿಯಲ್ಲಿ ಭಾರತ ಗೆಲುವಿನ ನಗೆಬೀರಿತ್ತು.
2009 ರಲ್ಲಿ ಪಾಕಿಸ್ತಾನ ಟಿ 20 ವಿಶ್ವಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು. ಪಾಕಿಸ್ತಾನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು ಮತ್ತು ಟಿ 20 ವಿಶ್ವಕಪ್ ಟ್ರೋಫಿಯನ್ನು ವಶಪಡಿಸಿಕೊಂಡಿತು. ಈ ವಿಶ್ವಕಪ್ ಟೂರ್ನಿ ಇಂಗ್ಲೆಂಡ್‌ನಲ್ಲಿ ನಡೆದಿತ್ತು.
2010 ರಲ್ಲಿ ಇಂಗ್ಲೆಂಡ್ ತಂಡ ಟಿ 20 ವಿಶ್ವಕಪ್ ಗೆದ್ದಿತ್ತು. ಇಂಗ್ಲೆಂಡ್ ಐಸಿಸಿ ಟ್ರೋಫಿಯನ್ನು ಗೆದ್ದಿರುವುದು ಇದೇ ಮೊದಲು. ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಏಳು ವಿಕೆಟ್ ಗಳಿಂದ ಸೋಲಿಸುವ ಮೂಲಕ ಇಂಗ್ಲೆಂಡ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಇದನ್ನೂ ಓದಿ-T20 World Cup 2021: ತಂಡಕ್ಕೆ ಎಂಟ್ರಿ ಪಡೆದ Shardul Thakur , ಈ ಆಟಗಾರ ಟೀಮಿಂದ ಹೊರಕ್ಕೆ
2012 ರಲ್ಲಿ ವೆಸ್ಟ್ ಇಂಡೀಸ್ T20 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಟಿ 20 ಫಾರ್ಮ್ಯಾಟ್ ನ ದಿಗ್ಗಜರನ್ನು ಹೊದಿದ್ದ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಶ್ರೀಲಂಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 36 ರನ್ ಗಳ ಜಯ ಸಾಧಿಸಿತ್ತು.
ಇದನ್ನೂ ಓದಿ-IND vs PAK ಪಂದ್ಯ: ರೋಹಿತ್ ಶರ್ಮಾಗೆ ಟಿಕೆಟ್ ಬೇಡಿಕೆಯಿಟ್ಟ ಅಭಿಮಾನಿ
2014 ರಲ್ಲಿ ಟಿ 20 ವಿಶ್ವಕಪ್ ಅನ್ನು ಬಾಂಗ್ಲಾದೇಶದಲ್ಲಿ ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ಭಾರತವನ್ನು ಆರು ವಿಕೆಟ್‌ಗಳಿಂದ ಸೋಲಿಸಿತ್ತು.
ಇದನ್ನೂ ಓದಿ-ICC T20 World Cup 2021ರಲ್ಲಿ ಹೇಗಿರಲಿದೆ ಗೊತ್ತಾ ಟೀಂ ಇಂಡಿಯಾ Jersey?
2016 ರಲ್ಲಿ, ವೆಸ್ಟ್ ಇಂಡೀಸ್ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ಎರಡನೇ ಬಾರಿಗೆ ಈ ಕಪ್ ಅನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿದೆ. ಒಂದು ತಂಡವು ಎರಡನೇ ಬಾರಿಗೆ ಟಿ 20 ವಿಶ್ವಕಪ್ ಟ್ರೋಫಿಯನ್ನು ಗೆದ್ದಿರುವುದು ಇದೇ ಮೊದಲು. ಇದಕ್ಕೂ ಮೊದಲು ಪ್ರತಿ ಬಾರಿ ಟಿ-20 ಪಂದ್ಯಾವಳಿಯಲ್ಲಿ ಹೊಸ ತಂಡಗಳೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದವು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ