Virat Kohli new look : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ವಾರದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗುವ ICC ಪುರುಷರ T20 ವಿಶ್ವಕಪ್ 2022 ರಲ್ಲಿ ಬ್ಯಾಟ್ ಬೀಸಲಿದ್ದಾರೆ. ಇದಕ್ಕೂ ಮುನ್ನ ಅವರ ಹೇರ್‌ಸ್ಟೈಲ್ ಸಖತ್ ವೈರಲ್ ಆಗಿದೆ. 2007 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ 15 ವರ್ಷಗಳ ಹಿಂದೆ ಮೊದಲ ಬಾರಿಗೆ ಗೆದ್ದ ಪ್ರಶಸ್ತಿಯನ್ನು ಮರಳಿ ಗೆಲ್ಲುವ ಗುರಿಯನ್ನು ಟೀಂ ಇಂಡಿಯಾ ಈ ಬಾರಿ ಹೊಂದಿದೆ. ದೊಡ್ಡ ಪಂದ್ಯಾವಳಿಗೆ ಮುಂಚಿತವಾಗಿ, ಕೊಹ್ಲಿ ತಮ್ಮ ಲುಕ್ ಬದಲಿಸಿದ್ದು, ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ.
ಇದನ್ನೂ ಓದಿ : Pro Kabaddi 9 : ರೋಚಕ ಪಂದ್ಯದಲ್ಲಿ ಯೋಧಸ್ ವಿರುದ್ಧ ಗೆದ್ದು ಬೀಗಿದ ದಬಾಂಗ್ ಡೆಲ್ಲಿ
ಭಾರತ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಮತ್ತೊಮ್ಮೆ ತಮ್ಮ ಹೊಸ ಹೇರ್ ಸ್ಟೈಲ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕೊಹ್ಲಿಯ ಹೊಸ ಲುಕ್‌ನ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳನ್ನು ಸ್ವತಃ ವಿರಾಟ್ ಕೊಹ್ಲಿ ಅವರೇ ತಮ್ಮ ಇನ್‌ಸ್ಟ್ರಾಗ್ರಾಮ್ ಪೋಸ್ಟ್ ಮತ್ತು ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. "ಥ್ಯಾಂಕ್ಯೂ ಫಾರ್ ದಿ ಹೇರ್‌ಕಟ್ @jordantabakman" ಎಂದು ಕೊಹ್ಲಿ ಬರೆದಿದ್ದಾರೆ.
ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಖ್ಯಾತ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್, 'ಫ್ಯಾಬ್' ಎಂದು ಕಾಮೆಂಟ್ ಮಾಡಿದ್ದಾರೆ. "ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
109 ಪಂದ್ಯಗಳಲ್ಲಿ 3712 ರನ್ ಗಳಿಸುವ ಮೂಲಕ ಒಟ್ಟಾರೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೊಹ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ 142 ಪಂದ್ಯಗಳಲ್ಲಿ 3737 ರನ್‌ಗಳೊಂದಿಗೆ ರೇಸ್‌ನಲ್ಲಿ ಅವರಿಗಿಂತ ಮೇಲಿದ್ದಾರೆ. ಇಬ್ಬರು ಬ್ಯಾಟರ್‌ಗಳ ನಡುವೆ ಕೇವಲ 25 ರನ್‌ಗಳ ವ್ಯತ್ಯಾಸದೊಂದಿಗೆ, ಮುಂಬರುವ ಟಿ20 ವಿಶ್ವಕಪ್ 2022 ರಲ್ಲಿ ಕೊಹ್ಲಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವನ್ನು ಹೊಂದಿದ್ದಾರೆ.
ಇದನ್ನೂ ಓದಿ : Team India: ವಿರಾಟ್-ರೋಹಿತ್‌ಗಿಂತ ಮುಂದಿದ್ದರೂ ಅವಕಾಶಕ್ಕಾಗಿ ಹಾತೊರೆಯುತ್ತಿರುವ ಈ ಆಟಗಾರ!
ICC T20 ವಿಶ್ವಕಪ್ 2022 ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದೆ ಮತ್ತು ಭಾರತವು ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ಆಡಲಿದೆ.
ICC ಪುರುಷರ T20 ವಿಶ್ವಕಪ್ 2022 ಗಾಗಿ ಟೀಮ್ ಇಂಡಿಯಾ ತಂಡ :
ರೋಹಿತ್ ಶರ್ಮಾ (c), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.