T20 World Cup 2024: ಟಿ20 ವಿಶ್ವಕಪ್‌ನ ದ್ವಿತಿಯ ಸುತ್ತಿನ ಪಂದ್ಯಗಳು ಬುಧವಾರ, ಜೂನ್ 19 ರಂದು ಪ್ರಾರಂಭವಾಗಲಿದೆ. ಗುರುವಾರ ತನ್ನ ಮೊದಲ ಪಂದ್ಯವನ್ನು ಭಾರತ ತಂಡ ಅಫ್ಘಾನಿಸ್ತಾನ ತಂಡದ ವಿರುದ್ಧ ಆಡಲಿದ್ದು, ಈ ಪಂದ್ಯ ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡಿಯಲಿದೆ.
ಭಾರತ ಹಾಗೂ ಅಫ್ಘಾನಿಸ್ತಾನ ಎರಡೂ ತಂಡಕ್ಕೂ ಈ ಪಂದ್ಯ ಬಹಳ ಮುಖ್ಯವಾಗಿದೆ.
ಏಕೆಂದರೆ ಈ ಪಂದ್ಯದ ನಂತರ ಉಭಯ ತಂಡಗಳು ಬಾಂಗ್ಲಾದೇಶ ಹಾಗೂ ಆಸ್ಟೇಲಿಯಾ ತಂಡಗಳನ್ನು ಎದುರಿಸಲಿವೆ. ಇದರಿಂದಾಗಿ ಮೊದಲ ಪಂದ್ಯ ಗೆಲ್ಲುವುದು ಈ ಎರಡೂ ತಂಡಗಳಿಗೂ ಬಹಳ ಮುಖ್ಯವಾಗಿದೆ.
ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಭಾರತ ಹಾಗೂ ಅಪ್ಘಾನಿಸ್ತಾನ ವಿರುದ್ಧದ ಪಂದ್ಯ ಭಾರತದ ಕಾಲಮಾನದ ಪ್ರಕಾರ ರಾತಿ 8 ಗಂಟೆಗೆ ಶುರುವಾಗಲಿದೆ. ಇನ್ನೂ ಈ ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ನೆಟ್ವರ್ಕ್ನ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ಕಾಣಬಹುದು.
ಇದನ್ನೂ ಓದಿ: ICC ODI Ranking: ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ ಸ್ಮೃತಿ ಮಂಧಾನ..!
ಭಾರತ ಪ್ಲೇಯಿಂಗ್ XI :
ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಹಲ್, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್, ವಿರಾಟ್ ಕೊಹ್ಲಿ, ರಿಷಭ್ ಪಂತ್,
ಸಂಜು ಸ್ಯಾಮ್ಸನ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ.
ಅಫ್ಘಾನಿಸ್ತಾನ್ ಪ್ಲೇಯಿಂಗ್ XI :
ರಶೀದ್ ಖಾನ್, ನವೀನ್ ಉಲ್ ಹಕ್, ಮೊಹಮ್ಮದ್ ನಬಿ, ಕರೀಂ ಜನತ್, ಫಜಲ್ಹಕ್ ಫಾರೂಕಿ, ಗುಲ್ಬದಿನ್ ನೈಬ್, ರಹಮಾನುಲ್ಲಾ ಗುರ್ಬಾಝ್, ಅಜ್ಮತುಲ್ಲಾ ಒಮರ್ಜಾಯ್,
ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಫರೀದ್ ಅಹ್ಮದ್ ಮಲಿಕ್, ನಂಗ್ಯಾಲ್ ಖರೋಟಿ.