T20 World Cup 2022: ಸಂಜು ಸ್ಯಾಮ್ಸನ್ ಸ್ಥಾನದ ಬಗ್ಗೆ ಚರ್ಚೆಯೇ ನಡೆದಿಲ್ಲವೆಂದ ಬಿಸಿಸಿಐ ಅಧಿಕಾರಿ!

ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಈ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದಿದ್ದು, ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಕ್ಕಿಲ್ಲ.  

Written by - Puttaraj K Alur | Last Updated : Sep 14, 2022, 08:17 AM IST
  • ಟಿ-20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಆಸ್ಟ್ರೇಲಿಯಾ & ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಲಿದೆ
  • ಸೆಪ್ಟೆಂಬರ್ 20ರಿಂದ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಟಿ-20 ಸರಣಿ ನಡೆಯಲಿದೆ.
  • ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ಆರಂಭವಾಗಲಿದೆ
T20 World Cup 2022: ಸಂಜು ಸ್ಯಾಮ್ಸನ್ ಸ್ಥಾನದ ಬಗ್ಗೆ ಚರ್ಚೆಯೇ ನಡೆದಿಲ್ಲವೆಂದ ಬಿಸಿಸಿಐ ಅಧಿಕಾರಿ! title=
ಸಂಜು ಸ್ಯಾಮ್ಸನ್ಗೆ ಸಿಗದ ಸ್ಥಾನ

ನವದೆಹಲಿ: ಯುಎಇನಲ್ಲಿ ನಡೆದ ಆ ಏಷ್ಯಾಕಪ್‍್ನಲ್ಲಿ ಭಾರತ ತಂಡದ ಪ್ರದರ್ಶನ ಕಳಪೆಯಾಗಿತ್ತು. ಇದೀಗ 15 ವರ್ಷಗಳ ನಂತರ ಟಿ-20 ವಿಶ್ವಕಪ್ ಗೆಲ್ಲುವ ತಮ್ಮ ಕನಸನ್ನು ರೋಹಿತ್ ಶರ್ಮಾ ನಾಯಕತ್ವದ ತಂಡವು ನನಸಾಗಿಸುತ್ತದೆ ಎಂದು ಭಾರತೀಯ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಈ ಜಾಗತಿಕ ಕ್ರಿಕೆಟ್ ಟೂರ್ನಿಗೆ ಈಗಾಗಲೇ ತಂಡವನ್ನು ಪ್ರಕಟಿಸಲಾಗಿದೆ. ಆದರೆ, ಕೆಲವು ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ಕೈಬಿಟ್ಟಿರುವುದಕ್ಕೆ ಕೋಪಗೊಂಡಿದ್ದಾರೆ. ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್‍ಗೆ ಅವಕಾಶ ನೀಡದ ಕಾರಣ ಅವರ ಅಭಿಮಾನಿಗಳು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.

ಪಂತ್ ಮತ್ತು ಕಾರ್ತಿಕ್‍ಗೆ ಅವಕಾಶ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟಿ-20 ವಿಶ್ವಕಪ್‌ಗೆ 15 ಮಂದಿಯ ತಂಡವನ್ನು ಪ್ರಕಟಿಸಿದೆ. ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಕ್ಕಿಲ್ಲ. ಆಯ್ಕೆಗಾರರ ​​ಸಭೆಯಲ್ಲೂ ಸ್ಯಾಮ್ಸನ್ ಹೆಸರನ್ನು ಚರ್ಚಿಸಿಲ್ಲವೆಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆಗಸ್ಟ್‌ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಸ್ಯಾಮ್ಸನ್‌ಗೆ ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ: T20 World Cup: ಈ ಇಬ್ಬರು ಆಟಗಾರರ T20 ವೃತ್ತಿಜೀವನಕ್ಕೆ ಕಂಟಕವಾದ ಆಯ್ಕೆಗಾರರು!

‘ಸ್ಯಾಮ್ಸನ್ ಹೆಸರನ್ನೇ ಚರ್ಚಿಸಲಾಗಿಲ್ಲ’

ಸೆಪ್ಟೆಂಬರ್ 20ರಿಂದ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ವಿಶ್ವಕಪ್, 6 ಟಿ-20 ಪಂದ್ಯಗಳಿಗೆ ಸೋಮವಾರ ಬಿಸಿಸಿಐ ತಂಡವನ್ನು ಪ್ರಕಟಿಸಿತ್ತು. ಆಯ್ಕೆ ಸಮಿತಿ ಸಭೆಗೂ ಮೊದಲು ರಿಷಭ್ ಪಂತ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು 15 ಸದಸ್ಯರ ತಂಡದಲ್ಲಿ ಸೇರಿಸಬಹುದೆಂಬ ಚರ್ಚೆ ನಡೆದಿತ್ತು. ಆದರೆ ಬಿಸಿಸಿಐನ ಅಧಿಕೃತ ಸಭೆಯಲ್ಲಿ ಅವರ ಹೆಸರನ್ನೇ ಚರ್ಚಿಸಲಾಗಿಲ್ಲವಂತೆ. ‘ಜಿಂಬಾಬ್ವೆ ಪ್ರವಾಸದ ನಂತರ ಆಯ್ಕೆದಾರರು ಸ್ಥಿರತೆ ಕಾಯ್ದುಕೊಳ್ಳಲು ಬಯಸುತ್ತಿರುವ ಕಾರಣ ಸಂಜು ಸ್ಯಾಮ್ಸನ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದಾರೆ’ ಎಂದು ಮಂಡಳಿಯ ಮೂಲಗಳು ಪಿಟಿಐಗೆ ತಿಳಿಸಿವೆ. ಇದರ ಹೊರತಾಗಿ ಪಂತ್ ಸ್ಥಾನದ  ಕುರಿತು ಯಾವುದೇ ಚರ್ಚೆ ನಡೆದಿಲ್ಲ. ತಂಡದ ಅಗ್ರ ಕ್ರಮಾಂಕದಲ್ಲಿರುವ ಏಕೈಕ ಎಡಗೈ ಬ್ಯಾಟ್ಸ್‌ಮನ್ ಅವರೊಬ್ಬರೇ. ಉತ್ತಮ ಪ್ರದರ್ಶನ ತೋರಿದರೆ ತಂಡಕ್ಕೆ ಅವರು ಸುಲಭವಾಗಿ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ’ ಅಂತಾ ಹೇಳಲಾಗಿದೆ.   

ಆಸ್ಟ್ರೇಲಿಯಾ & ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ  

ಭಾರತ ತಂಡ ಟಿ-20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಬೇಕಿದೆ. ಸೆಪ್ಟೆಂಬರ್ 20ರಿಂದ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಇದಾದ ಬಳಿಕ ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ಆರಂಭವಾಗಲಿದೆ. ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಟೀಂ ಇಂಡಿಯಾ T20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಇದನ್ನೂ ಓದಿ: T20 World Cup: “ಆರಂಭಿಕ ಆಟಗಾರನಾಗಿ ಪಂತ್ ಕಣಕ್ಕಿಳಿಯಲಿ” ಧೋನಿ ಹೆಸರು ಹೇಳಿ ರೋಹಿತ್ ಗೆ ಸಲಹೆ ನೀಡಿದ್ರು ಸ್ಟಾರ್ ಆಟಗಾರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News