ನವದೆಹಲಿ: T20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆಯ್ಕೆದಾರರು ತಮ್ಮ ನಿರ್ಧಾರಗಳಿಂದ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದ್ದಾರೆ. ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾ ನೆಲದಲ್ಲಿ T20 ವಿಶ್ವಕಪ್ ಆರಂಭವಾಗಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ. ಈ ವೇಳೆ ಇಬ್ಬರು ಆಟಗಾರರ T20 ವೃತ್ತಿಜೀವನವನ್ನು ಆಯ್ಕೆದಾರರು ಬಹುತೇಕ ಅಂತ್ಯಗೊಳಿಸಿದ್ದಾರೆ. ಇವರಿಬ್ಬರಿಗೂ ತಂಡದಲ್ಲಿ ಸ್ಥಾನವನ್ನು ನೀಡದಿರುವುದು ಅನೇಕರಲ್ಲಿ ಅಚ್ಚರಿ ತರಿಸಿದೆ.
1. ಶಿಖರ್ ಧವನ್
ದೊಡ್ಡ ಟೂರ್ನಿಗಳಲ್ಲಿ ಉತ್ತಮ ದಾಖಲೆ ಹೊಂದಿರುವ ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ಶಿಖರ್ ಧವನ್ ಒಬ್ಬರು. ಆದರೆ ಟಿ-20 ಮಾದರಿಯಲ್ಲಿ ಶಿಖರ್ ಧವನ್‌ಗೆ ಆಯ್ಕೆಗಾರರು ಹೆಚ್ಚಿನ ಅವಕಾಶ ನೀಡುತ್ತಿಲ್ಲ. ಕಳೆದ ವರ್ಷದಂತೆ ಶಿಖರ್ ಧವನ್ ಈ ವರ್ಷವೂ ಟಿ-20 ವಿಶ್ವಕಪ್‌ನ ತಂಡಕ್ಕೆ ಆಯ್ಕೆಯಾಗಿಲ್ಲ. ರೋಹಿತ್ ಶರ್ಮಾರ ಆರಂಭಿಕ ಪಾಲುದಾರರಾಗಿ ಕೆ.ಎಲ್.ರಾಹುಲ್‌ಗೆ ಅವಕಾಶ ನೀಡಲಾಗಿದೆ. 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ ವರ್ಚಸ್ವಿ ನಾಯಕ ಎಂ.ಎಸ್.ಧೋನಿ ಶಿಖರ್ ಧವನ್‍ಗೆ ಆರಂಭಿಕರಾಗಿ ಅವಕಾಶ ನೀಡಿದ್ದರು. ಅಂದಿನಿಂದ ಶಿಖರ್ ಧವನ್ ಅಗ್ರ ಕ್ರಮಾಂಕದಲ್ಲಿ ಸಾವಿರಾರು ರನ್ ಗಳಿಸಿದ್ದರು. ಧವನ್ ಎಲ್ಲಾ ಮಾದರಿಯಲ್ಲೂ ಉತ್ತಮ ರನ್ ಗಳಿಸಿದ್ದಾರೆ. ಎಲ್ಲ ರೀತಿಯ ಬೌಲಿಂಗ್ ದಾಳಿಯನ್ನು ಅವರು ಸಮರ್ಥವಾಗಿ ಎದುರಿಸಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ರೋಹಿತ್ ಶರ್ಮಾಗೆ ಕೆ.ಎಲ್.ರಾಹುಲ್ ಜೊತೆಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಯ್ಕೆಗಾರರು ಶಿಖರ್ ಧವನ್ ಅವರನ್ನು ದೂರ ಸರಿಸಲು ಪ್ರಾರಂಭಿಸಿದರು. ಧವನ್ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದ ಪ್ರಬಲ ಆಧಾರಸ್ತಂಭವಾಗಿದ್ದರು. ಧವನ್ ಟೀಂ ಇಂಡಿಯಾ ಪರ 34 ಟೆಸ್ಟ್ ಪಂದ್ಯಗಳಲ್ಲಿ 2315 ರನ್, 158 ODIಗಳಲ್ಲಿ 6647 ರನ್ ಮತ್ತು 68 T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1759 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಈ ಆಟಗಾರನಿಗೆ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಸಿಗದಿರುವುದಕ್ಕೆ ಶುರುವಾಗಿದೆ ಗಲಾಟೆ
2. ಪೃಥ್ವಿ ಶಾ
ಪೃಥ್ವಿ ಶಾ ಅವರನ್ನು ಆಯ್ಕೆದಾರರು ದೀರ್ಘಕಾಲದವರೆಗೆ ನಿರ್ಲಕ್ಷಿಸಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಪೃಥ್ವಿ ಶಾ ಟಿ-20 ವಿಶ್ವಕಪ್‌ನ ತಂಡಕ್ಕೆ ಆಯ್ಕೆಯಾಗಿಲ್ಲ. ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್‍ರಂತೆಯೇ ಬ್ಯಾಟಿಂಗ್ ಮಾಡುವ ಪೃಥ್ವಿಗೆ ಸರಿಯಾದ ಅವಕಾಶಗಳು ಸಿಕ್ಕಿಲ್ಲ. 22 ವರ್ಷದ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಆಕ್ರಮಣಕಾರಿ ಬ್ಯಾಟ್ಸ್‌ಮನ್. ಎಲ್ಲ ರೀತಿಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಪೃಥ್ವಿ ಶಾಗಿದೆ. ಎಲ್ಲಾ ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದರೂ ಈ ಆಟಗಾರನಿಗೆ ಸ್ಥಾನ ಸಿಗುತ್ತಿಲ್ಲ. ಪೃಥ್ವಿ ಶಾ ಭಾರತದ ಪರ 5 ಟೆಸ್ಟ್ ಪಂದ್ಯಗಳಲ್ಲಿ 339 ರನ್, 6 ಏಕದಿನ ಪಂದ್ಯಗಳಲ್ಲಿ 189 ರನ್ ಮತ್ತು 63 ಐಪಿಎಲ್ ಪಂದ್ಯಗಳಲ್ಲಿ 1588 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಅವರು 1 ಶತಕ ಸಿಡಿಸಿದ್ದಾರೆ.
ಟಿ-20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್.ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.
ಇದನ್ನೂ ಓದಿ: Virat Kohli : ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ, ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ವಿರಾಟ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.