Team India Coach : ಭಾರತಕ್ಕೆ ಸೋಲಿನ ಕಹಿಯೊಂದಿಗೆ ವಿಶ್ವ ಕಪ್ ಗೆ ತೆರೆ ಬಿದ್ದಿದೆ. ಇಡೀ ಪಂದ್ಯಾವಳಿಯಲ್ಲಿ ಉತಮ ಪ್ರದರ್ಶನ ನೀಡಿದ್ದರೂ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಈ ಸೋಲಿಗೆ ಬೇರೆ ಬೇರೆ ಕಾರಣಗಳು ಇರಬಹುದು. ಇದೀಗ ಸದ್ಯಕ್ಕೆ ಕೇಳಿ ಬರುತ್ತಿರುವ ಸುದ್ದಿ ಏನೆಂದರೆ ವಿಶ್ವಕಪ್ ಸೋಲಿನೊಂದಿಗೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎನ್ನುವುದು. ಒಂದು ವೇಳೆ ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಕೆಳಗಿಳಿದರೆ ಆ ಸ್ಥಾನ ತುಂಬುವವರು ಯಾರು ಎನ್ನುವ ಪ್ರಶ್ನೆ ಕೂಡಾ ಮೇಲೇಳುತ್ತದೆ.
ವಿಶ್ವಕಪ್ ಫೈನಲ್ ನಲ್ಲಿ ಭಾರತಕ್ಕೆ ಸೋಲು :
2023ರ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾ ಸೋತಿದೆ. ಸತತ 10 ಪಂದ್ಯಗಲ್ಲಿ ಗೆಲುವು ಕಂಡಿದ್ದ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ 6 ವಿಕೆಟ್‌ಗಳಿಂದ ಸೋಲನುಭಾವಿಸಿದೆ.
ಈ ಸೋಲಿನ ಬೆನ್ನಲ್ಲೇ ನಾನಾ ರೀತಿಯ ಚರ್ಚೆಗಳು ಕೂಡಾ ಆರಂಭವಾಗಿದೆ. ಕೆಲ ಆಟಗಾರರ ನಿವೃತ್ತಿಯ ಮಾತು ಕೂಡಾ ಇದೀಗ ಕೇಳಿ ಬರುತ್ತಿದೆ.
ಇದನ್ನೂ ಓದಿ : ಆಸಿಸ್ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ.. ಹೊಸಬರಿಗೆ ಚಾನ್ಸ್, ʻಸೂರ್ಯʼನಿಗೆ ನಾಯಕನ ಪಟ್ಟ!
ಕೋಚ್ ಅಧಿಕಾರಾವಧಿ ಅಂತ್ಯ ? :
ವಿಶ್ವಕಪ್ ನಲ್ಲಿ ಭಾರತದ ಸೋಲಿನ ನಂತರ ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಅಸಲಿಗೆ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಮತ್ತು ಸಹಾಯಕ ಸಿಬ್ಬಂದಿಯ ಅವಧಿ ವಿಶ್ವಕಪ್ ಬಳಿಕ ಅಂತ್ಯವಾಗಲಿದೆ. ಹೀಗಾಗಿ ಇನ್ನು ಮುಂದೆ ದ್ರಾವಿಡ್ ತರಬೇತುದಾರನ ಸ್ಥಾನದಲ್ಲಿ ಮುಂದುವರೆಯಬೇಕೋ ಬೇಡವೋ ಎನ್ನುವ ನಿರ್ಧಾರ ಬಿಸಿಸಿಐ ಮಾಡಬೇಕಿದೆ. ಬಿಸಿಸಿಐ ರಾಹುಲ್ ದ್ರಾವಿಡ್ ಅಧಿಕಾರಾವಧಿ ವಿಸ್ತರಿಸಿದರೆ ರಾಹುಲ್ ದ್ರಾವಿಡ್ ಕೋಚ್ ಆಗಿ ಮುಂದುವರಿಯಲಿದ್ದಾರೆ. ಇಲ್ಲಾ ಎಂದಾದರೆ ಆ ಸ್ಥಾನವನ್ನು ಬೇರೊಬ್ಬ ಆಟಗಾರ ತುಂಬಲಿದ್ದಾರೆ.
ಒಪ್ಪಂದದ ಅಂತ್ಯದ ಕುರಿತು ದ್ರಾವಿಡ್ ಹೇಳಿಕೆ :
ರಾಹುಲ್ ದ್ರಾವಿಡ್ ಬಳಿ ಈ ಬಗ್ಗೆ ಪ್ರಶ್ನೆ ಮಾಡಿದಾಗ ನಾನು ಮುಂದೆ ಏನಾಗುತ್ತದೆ ಎನ್ನುವುದರ ಬಗ್ಗೆ ಯೋಚಿಸಿಯೇ ಇಲ್ಲ. ನನ್ನ ಗಮನವೆಲ್ಲಾ ವಿಶ್ವಕಪ್ ಮೇಲೆ ಕೇಂದ್ರಿಕೃತವಾಗಿತ್ತು ಎಂದಿದ್ದಾರೆ. ಭವಿಷ್ಯದಲ್ಲಿ ಏನಾಗಬಹುದು ಎಂಬುದರ ಕುರಿತು ನಾನು ಆಲೋಚನೆ ಮಾಡಿಯೇ ಇಲ್ಲ ಎಂದಿದ್ದಾರೆ.
ಯಾರಿಗೆ ತರಬೇತುದಾರನ ಪಟ್ಟ ? :
ಇನ್ನು, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ20 ಸರಣಿಯು ನವೆಂಬರ್ 23 ರಿಂದ ಪ್ರಾರಂಭವಾಗಲಿದೆ. ಇದರ ನಂತರ, ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದ್ದು, ಇದರಲ್ಲಿ 3 ಟಿ20, ODI ಮತ್ತು 2 ಟೆಸ್ಟ್‌ಗಳನ್ನು ಆಡಲಿದೆ. ಆದರೆ ಈ ವೇಳೆ ರಾಹುಲ್ ದ್ರಾವಿಡ್ ತಂಡದೊಂದಿಗೆ ಇರುವುದಿಲ್ಲ ಎನ್ನಲಾಗಿದೆ. ಅವರ ಬದಲಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಇದನ್ನೂ ಓದಿ : Jasprit Bumrah: ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಆಸ್ತಿ ವಿವರ ತಿಳಿದರೆ ಶಾಕ್ ಆಗೋದು ಗ್ಯಾರಂಟಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.