Auckland Pitch Report: ಮೊದಲ ಏಕದಿನದಲ್ಲಿ ಟೀಂ ಇಂಡಿಯಾಗೆ ಸಿಕ್ತು ಈ ಪಿಚ್: ಇದರ ಹಿಂದಿದೆ ಅಚ್ಚರಿಯ ರಹಸ್ಯ!

IND vs NZ, 1st ODI-Pirch Report: ಆಕ್ಲೆಂಡ್ ಮೈದಾನದಲ್ಲಿ ಟೀಂ ಇಂಡಿಯಾದ ದಾಖಲೆ ಉತ್ತಮವಾಗಿಲ್ಲ. ಇದುವರೆಗೆ ಈ ಮೈದಾನದಲ್ಲಿ ಕೇವಲ 4 ಏಕದಿನ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಹೇಗೆ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

Written by - Bhavishya Shetty | Last Updated : Nov 24, 2022, 10:52 AM IST
    • ಆಕ್ಲೆಂಡ್‌ನ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ
    • ಆಕ್ಲೆಂಡ್‌ನ ಮೈದಾನದ ಪಿಚ್ ಹಿಂದಿದೆ ಅಚ್ಚರಿಯ ರಹಸ್ಯ
    • ಆಕ್ಲೆಂಡ್ ಮೈದಾನ ಪಿಚ್ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ
Auckland Pitch Report: ಮೊದಲ ಏಕದಿನದಲ್ಲಿ ಟೀಂ ಇಂಡಿಯಾಗೆ ಸಿಕ್ತು ಈ ಪಿಚ್: ಇದರ ಹಿಂದಿದೆ ಅಚ್ಚರಿಯ ರಹಸ್ಯ! title=
India New Zealand Cricket

IND vs NZ, 1st ODI: ಟೀಂ ಇಂಡಿಯಾ ನವೆಂಬರ್ 25ರ ಬಳಿಕ ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಪಂದ್ಯವನ್ನಾಡಲಿದೆ. ಆಕ್ಲೆಂಡ್‌ನ ಮೈದಾನದಲ್ಲಿ ಮೊದಲ ಏಕದಿನ ಪಂದ್ಯದಲ್ಲಿ  ನಡೆಯಲಿದ್ದು, ಭಾರತೀಯ ಕಾಲಮಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದೆ. ಇನ್ನು ಪಂದ್ಯ ಆರಂಭಕ್ಕೂ ಮುನ್ನವೇ ಆಕ್ಲೆಂಡ್ ಮೈದಾನ ಪಿಚ್ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ.

ಆಕ್ಲೆಂಡ್ ಮೈದಾನದಲ್ಲಿ ಟೀಂ ಇಂಡಿಯಾದ ದಾಖಲೆ ಉತ್ತಮವಾಗಿಲ್ಲ. ಇದುವರೆಗೆ ಈ ಮೈದಾನದಲ್ಲಿ ಕೇವಲ 4 ಏಕದಿನ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಹೇಗೆ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಆಕ್ಲೆಂಡ್‌ನಲ್ಲಿ ಭಾರತವು 1994, 1999, 2003 ವರ್ಷಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಕೇವಲ ಮೂರು ಏಕದಿನ ಪಂದ್ಯಗಳಲ್ಲಿ ಗೆಲುವು ಕಂಡಿದೆ. ಇನ್ನು ಆಕ್ಲೆಂಡ್‌ ಮೈದಾನದ ಪಿಚ್ ಬಗ್ಗೆ ನೋಡುವುದಾದರೆ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ.

ಇದನ್ನೂ ಓದಿ: India vs New Zealand, 1st ODI: ಭಾರತ-ನ್ಯೂಜಿಲ್ಯಾಂಡ್ ಏಕದಿನದ ಮೇಲೂ ವರುಣನ ವಕ್ರದೃಷ್ಟಿ! ಹವಾಮಾನ ವರದಿ ಇಲ್ಲಿದೆ

ಬಯಲಾಯ್ತು ಪಿಚ್ ಅಚ್ಚರಿಯ ರಹಸ್ಯ!

ಆಕ್ಲೆಂಡ್ ಪಿಚ್‌ ವೇಗದ ಬೌಲರ್‌ಗಳಿಗೆ ಸಾಕಷ್ಟು ಬೆಂಬಲವನ್ನು ನೀಡುತ್ತದೆ. ಅದರಲ್ಲೂ ವೇಗದ ಬೌಲರ್‌ಗಳು ಈ ಪಿಚ್‌ನಲ್ಲಿ ಉತ್ತಮ ಸ್ವಿಂಗ್ ಹಾಗೂ ಅತ್ಯುತ್ತಮ ಬೌನ್ಸ್ ಬಾಲ್ ಗಳನ್ನು ಹಾಕಬಹುದು. ಇನ್ನು ಆಕ್ಲೆಂಡ್ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಕೂಡ ಅಬ್ಬರಿಸಿದ್ದುಂಟು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಕ್ಕೂ ಈ ಪಿಚ್ ಉತ್ತಮ ಎಂದು ಪರಿಗಣಿಸಲಾಗಿದೆ. ಇದು ಸಣ್ಣ ಮೈದಾನವಾದ್ದರಿಂದ ಇಲ್ಲಿ ಸಿಕ್ಸ್, ಫೋರ್ ಗಳ ಮಳೆ ಸುರಿಯುವುದು ಖಚಿತ. ಇನ್ನು ಟೀಂ ಇಂಡಿಯಾದ ಮಿಸ್ಟರ್ 360 ಸೂರ್ಯ ಕುಮಾರ್ ಯಾದವ್ ಅವರ ಬ್ಯಾಟಿಂಗ್ ಈ ಮೈದಾನದಲ್ಲಿ ಹೇಗೆ ಅಬ್ಬರಿಸಲಿದೆ ಎಂದು ಕಾದುನೋಡಬೇಕಿದೆ.

ಆಕ್ಲೆಂಡ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡ 270 ರನ್ ಬಾರಿಸಿದರೂ ಸಾಕು. ಏಕೆಂದರೆ ಈ ಮೈದಾನದಲ್ಲಿ ಆ ಗುರಿಯನ್ನು ತಲುಪುವುದು ಸುಲಭದ ಮಾತಲ್ಲ. ಇಲ್ಲಿ ಟಾಸ್ ಗೆದ್ದ ಬಹುತೇಕ ತಂಡಗಳು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತವೆ.

ಇದನ್ನೂ ಓದಿ:  Team India : ಬಾಂಗ್ಲಾದೇಶ ಪ್ರವಾಸದಿಂದ ಕೂಡ ರವೀಂದ್ರ ಜಡೇಜಾ ಔಟ್!

2003 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತವು ಆಕ್ಲೆಂಡ್‌ನಲ್ಲಿ ಕೊನೆಯ ಏಕದಿನ ಪಂದ್ಯವನ್ನು ಗೆದ್ದಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ವಿಕೆಟ್‌ನಿಂದ ರೋಚಕ ಜಯ ಸಾಧಿಸಿತ್ತು. ಆಗ ಟೀಂ ಇಂಡಿಯಾದ ನಾಯಕ ಸೌರವ್ ಗಂಗೂಲಿ ಆಗಿದ್ದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News