IND vs PAK: ಇಂಡೋ-ಪಾಕ್ ರಣರೋಚಕ ಪಂದ್ಯ ವೀಕ್ಷಣೆಗೆ ಸ್ಟೇಡಿಯಂ ಫುಲ್: ಎಷ್ಟು ಜನ ಸೇರಿದ್ದರು ಗೊತ್ತೇ!

ಇದೀಗ ಕ್ರಿಕೆಟ್ ಪಂದ್ಯಗಳಲ್ಲಿ ಅತ್ಯಧಿಕ ಪ್ರೇಕ್ಷಕರ ಹಾಜರಾತಿಯನ್ನು ಈ ಸ್ಟೇಡಿಯಂ ದಾಖಲಿಸಿದೆ. 29 ಮೇ 2022 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1,04,859 ಜನ ಸೇರುವ ಮೂಲಕ ಮೊದಲ ದಾಖಲೆ ಮುದ್ರಣವಾಗಿತ್ತು. ಇದು ಐಪಿಎಲ್ 2022ರ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಫೈನಲ್ ಪಂದ್ಯವಾಗಿತ್ತು.

Written by - Bhavishya Shetty | Last Updated : Oct 23, 2022, 06:14 PM IST
    • ಮೆಲ್ಬರ್ನ್ ನ ಎಂಸಿಜಿ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯ
    • ರಣರೋಚಕ ಪಂದ್ಯಕ್ಕೆ ಮೆಲ್ಬರ್ನ್ ಕ್ರಿಕೆಟ್ ಅಂಗಣ ಸಾಕ್ಷಿಯಾಗಿತ್ತು
    • ಕ್ರಿಕೆಟ್ ಪಂದ್ಯಗಳಲ್ಲಿ ಅತ್ಯಧಿಕ ಪ್ರೇಕ್ಷಕರ ಹಾಜರಾತಿಯನ್ನು ಈ ಸ್ಟೇಡಿಯಂ ದಾಖಲಿಸಿದೆ
IND vs PAK: ಇಂಡೋ-ಪಾಕ್ ರಣರೋಚಕ ಪಂದ್ಯ ವೀಕ್ಷಣೆಗೆ ಸ್ಟೇಡಿಯಂ ಫುಲ್: ಎಷ್ಟು ಜನ ಸೇರಿದ್ದರು ಗೊತ್ತೇ! title=
Highest crowd attendance

ಇಂದು ಮೆಲ್ಬರ್ನ್ ನ ಎಂಸಿಜಿ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದೆ. ಈ ರಣರೋಚಕ ಪಂದ್ಯಕ್ಕೆ ಮೆಲ್ಬರ್ನ್ ಕ್ರಿಕೆಟ್ ಅಂಗಣ ಸಾಕ್ಷಿಯಾಗಿತ್ತು. ಇನ್ನು ಈ ಮೈದಾನದಲ್ಲಿ ಸುಮಾರು ಒಂದು ಲಕ್ಷ ಜನರು ಒಂದು ಬಾರಿಗೆ ಪಂದ್ಯ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: IND vs PAK T20 World Cup: ಸೇಡು ತೀರಿಸಿಕೊಂಡ ಭಾರತ: ಪಾಕ್ ಸದೆಬಡಿದು ಮೊದಲ ಗೆಲುವು ಸಾಧಿಸಿದ ರೋಹಿತ್ ಪಡೆ

ಇದೀಗ ಕ್ರಿಕೆಟ್ ಪಂದ್ಯಗಳಲ್ಲಿ ಅತ್ಯಧಿಕ ಪ್ರೇಕ್ಷಕರ ಹಾಜರಾತಿಯನ್ನು ಈ ಸ್ಟೇಡಿಯಂ ದಾಖಲಿಸಿದೆ. 29 ಮೇ 2022 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1,04,859 ಜನ ಸೇರುವ ಮೂಲಕ ಮೊದಲ ದಾಖಲೆ ಮುದ್ರಣವಾಗಿತ್ತು. ಇದು ಐಪಿಎಲ್ 2022ರ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಫೈನಲ್ ಪಂದ್ಯವಾಗಿತ್ತು.

 

 

ಇದೀಗ ಮತ್ತೊಂದು ದಾಖಲೆ ಮೆಲ್ಬರ್ನ್ ಸ್ಟೇಡಿಯಂನಲ್ಲಿ ದಾಖಲಾಗಿದೆ. ಇಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು 90,293 ಮಂದಿ ಆಗಮಿಸಿದ್ದರು. ಇದು ಎರಡನೇ ಅತೀ ಹೆಚ್ಚು ಜನಸ್ತೋಮ ಹೊಂದಿದ್ದ ಪಂದ್ಯ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Rohit Sharma: ಎಂಟು T20 ವಿಶ್ವಕಪ್ ನಲ್ಲಿ ಆಡಿದ ಟೀಂ ಇಂಡಿಯಾದ ಮೊದಲ ಸ್ಟಾರ್ ಆಟಗಾರ ಈತ!

ಇಂದಿನ ಪಂದ್ಯ ಒಟ್ಟಾರೆಯಾಗಿ ರೋಚಕವೆನಿಸುವಂತಿದ್ದು, ಟೀಂ ಇಂಡಿಯಾ ವಿಶ್ವಕಪ್ ನಲ್ಲಿ ಶುಭಾರಂಭ ಮಾಡಿದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರರು ಪಾಕ್ ಪಡೆಯ ವಿರುದ್ಧ ಸೇಡು ತೀರಿಸಿಕೊಂಡಿದೆ ಎನ್ನಬಹುದು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News