Virat Kohli-Rohit Sharma: ಕಣ್ಣೀರಿಡುತ್ತಾ ಮೈದಾನದಲ್ಲಿ ಗೆಲುವು ಸಂಭ್ರಮಿಸಿದ ಕೊಹ್ಲಿ: ಎತ್ತಿ ಮುದ್ದಾಡಿದ ರೋಹಿತ್ ಶರ್ಮಾ

ಭಾನುವಾರದಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 90,293 ಅಭಿಮಾನಿಗಳು ಪಂದ್ಯ ವೀಕ್ಷಣೆ ಮಾಡಿದ್ದಾರೆ. ವಿರಾಟ್ ತನ್ನ ಇನ್ನಿಂಗ್ಸ್ ನಂತರ ಭಾವುಕರಾಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಟೀಂ ಇಂಡಿಯಾ ಪಾಕಿಸ್ತಾನ ವಿರುದ್ದ ರೋಚಕ ಪಂದ್ಯ ಗೆದ್ದಿದೆ. ಈ ಗೆಲುವಿಗೆ ವಿರಾಟ್ ಮತ್ತು ಪಾಂಡ್ಯ ಕೊಡುಗೆ ಬಹಳಷ್ಟಿದೆ.

Written by - Bhavishya Shetty | Last Updated : Oct 23, 2022, 07:08 PM IST
    • ಪುರುಷರ ಟಿ20 ವಿಶ್ವಕಪ್‌ನ ರೋಚಕ ಸೂಪರ್ 12 ಪಂದ್ಯ
    • ಪಾಕಿಸ್ತಾನದ ವಿರುದ್ಧ ಕೇವಲ 52 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದ ಕೊಹ್ಲಿ
    • ಅರ್ಧ ಶತಕ ಸಿಡಿಸುವ ಮೂಲಕ ಟಿ20 ಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ
Virat Kohli-Rohit Sharma: ಕಣ್ಣೀರಿಡುತ್ತಾ ಮೈದಾನದಲ್ಲಿ ಗೆಲುವು ಸಂಭ್ರಮಿಸಿದ ಕೊಹ್ಲಿ: ಎತ್ತಿ ಮುದ್ದಾಡಿದ ರೋಹಿತ್ ಶರ್ಮಾ title=
Virat Kohli

ಪುರುಷರ ಟಿ20 ವಿಶ್ವಕಪ್‌ನ ರೋಚಕ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಕೇವಲ 52 ಎಸೆತಗಳಲ್ಲಿ ಅಜೇಯ 82 ರನ್ ಗಳಿಸುವ ಮೂಲಕ ಭಾರತಕ್ಕೆ ನಾಲ್ಕು ವಿಕೆಟ್‌ಗಳ ಜಯ ಸಾಧಿಸಲು ವಿರಾಟ್ ಕೊಹ್ಲಿ ಅವರು ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಈ ಪಂದ್ಯದಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ಟಿ20 ಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: India vs Pakistan: ಇದು ಜೀವನದ ಶ್ರೇಷ್ಠ ಇನಿಂಗ್ಸ್ ಎಂದ ವಿರಾಟ್ ಕೊಹ್ಲಿ..!

ಭಾನುವಾರದಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 90,293 ಅಭಿಮಾನಿಗಳು ಪಂದ್ಯ ವೀಕ್ಷಣೆ ಮಾಡಿದ್ದಾರೆ. ವಿರಾಟ್ ತನ್ನ ಇನ್ನಿಂಗ್ಸ್ ನಂತರ ಭಾವುಕರಾಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಟೀಂ ಇಂಡಿಯಾ ಪಾಕಿಸ್ತಾನ ವಿರುದ್ದ ರೋಚಕ ಪಂದ್ಯ ಗೆದ್ದಿದೆ. ಈ ಗೆಲುವಿಗೆ ವಿರಾಟ್ ಮತ್ತು ಪಾಂಡ್ಯ ಕೊಡುಗೆ ಬಹಳಷ್ಟಿದೆ. ಇನ್ನು ಇನ್ನಿಂಗ್ಸ್ ಮುಗಿಯುತ್ತಿದ್ದಂತೆ ಗೆಲುವನ್ನು ಸಂಭ್ರಮಿಸಿದ ಕೊಹ್ಲಿ ಮೈದಾನದಲ್ಲಿಯೇ ಕಣ್ಣೀರು ಹಾಕಿದ್ದಾರೆ. ಈ ಸಂದರ್ಭದಲ್ಲಿ  ನಾಯಕ ರೋಹಿತ್ ಶರ್ಮಾ ಓಡಿ ಬಂದು ಕೊಹ್ಲಿಯನ್ನು ಎತ್ತಿ ಮುದ್ದಾಡಿದ್ದಾರೆ.

 

 

ವಿರಾಟ್ ಕೊಹ್ಲಿ ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. 3794 ರನ್ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ಬಲ-ಎಡ ವೇಗದ ಬೌಲಿಂಗ್ ಜೋಡಿ ಹಾರ್ದಿಕ್ ಪಾಂಡ್ಯ ಮತ್ತು ಅರ್ಶ್‌ದೀಪ್ ಸಿಂಗ್ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಾಕಿಸ್ತಾನವನ್ನು ತಮ್ಮ 20 ಓವರ್‌ಗಳಲ್ಲಿ 159/8 ಗೆ ನಿರ್ಬಂಧಿಸಲು ಸಹಾಯ ಮಾಡಿದರು. ಈ ಬಳಿಕ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ (40) 77 ಎಸೆತಗಳಲ್ಲಿ 113 ರನ್‌ಗಳ ಜೊತೆಯಾಟ ನಡೆಸಿದರು.

ಇದನ್ನೂ ಓದಿ: IND vs PAK: ಇಂಡೋ-ಪಾಕ್ ರಣರೋಚಕ ಪಂದ್ಯ ವೀಕ್ಷಣೆಗೆ ಸ್ಟೇಡಿಯಂ ಫುಲ್: ಎಷ್ಟು ಜನ ಸೇರಿದ್ದರು ಗೊತ್ತೇ!

ಸಂಕ್ಷಿಪ್ತ ಸ್ಕೋರ್‌ಗಳು:

ಪಾಕಿಸ್ತಾನ 20 ಓವರ್‌ಗಳಲ್ಲಿ 159/8 (ಶಾನ್ ಮಸೂದ್ ಔಟಾಗದೆ 52, ಇಫ್ತಿಕರ್ ಅಹ್ಮದ್ 51; ಹಾರ್ದಿಕ್ ಪಾಂಡ್ಯ 3/30, ಅರ್ಷದೀಪ್ ಸಿಂಗ್ 3/32)

ಭಾರತ 20 ಓವರ್‌ಗಳಲ್ಲಿ 160/6 (ವಿರಾಟ್ ಕೊಹ್ಲಿ ಔಟಾಗದೆ 82, ಹಾರ್ದಿಕ್ ಪಾಂಡ್ಯ 40; ಹ್ಯಾರಿಸ್ ರೌಫ್ 2/36, ಮೊಹಮ್ಮದ್ ನವಾಜ್ 2/42) ನಾಲ್ಕು ವಿಕೆಟ್‌ಗಳು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News