ಟೀಂ ಇಂಡಿಯಾಗೆ ಮತ್ತೆ ವಿರಾಟ್ ನಾಯಕತ್ವ! ಹೊರಬಿತ್ತು ಬಿಗ್ ಅಪ್ಡೇಟ್

Team India Next ODI Captain: ರೋಹಿತ್ ಶರ್ಮಾ ಅವರಿಂದ ODI ನಾಯಕತ್ವವನ್ನು ಕಸಿದುಕೊಳ್ಳಲು 3 ಅಪಾಯಕಾರಿ ಆಟಗಾರರು ಈಗಾಗಲೇ ಕಾಲಿಗೆ ಟೊಂಕ ಕಟ್ಟಿ ನಿಂತಿದ್ದಾರೆ

Written by - Bhavishya Shetty | Last Updated : Jul 19, 2023, 10:20 AM IST
    • ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಲಕ್ಷಣಗಳಿವೆ
    • 'ಹಿಟ್‌ಮ್ಯಾನ್' ಏಕದಿನ ನಾಯಕತ್ವವನ್ನು ಕಳೆದುಕೊಳ್ಳುವುದು ಸರ್ವಖಚಿತ.
    • ಭಾರತ ಗೆಲ್ಲುವಂತೆ ಮಾಡಲು ರೋಹಿತ್ ಶರ್ಮಾ ಮೇಲೆ ಸಾಕಷ್ಟು ಒತ್ತಡವಿದೆ.
ಟೀಂ ಇಂಡಿಯಾಗೆ ಮತ್ತೆ ವಿರಾಟ್ ನಾಯಕತ್ವ! ಹೊರಬಿತ್ತು ಬಿಗ್ ಅಪ್ಡೇಟ್  title=
Team India Captain

Team India Next ODI Captain: ರೋಹಿತ್ ಶರ್ಮಾ ಅವರನ್ನು ಡಿಸೆಂಬರ್ 2021ರಲ್ಲಿ ಭಾರತದ ODI ನಾಯಕನನ್ನಾಗಿ ಮಾಡಲಾಯಿತು. BCCI ODI ನಾಯಕನ ಸ್ಥಾನದಿಂದ ವಿರಾಟ್ ಕೊಹ್ಲಿಯನ್ನು ತೆಗೆದುಹಾಕುವ ಮೂಲಕ ಅಂದು ಬಿರುಗಾಳಿಯನ್ನೇ ಸೃಷ್ಟಿಸಿತ್ತು ಎನ್ನಬಹುದು. ಆದರೆ ಇದೀಗ 2023ರ ಏಕದಿನ ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಲಕ್ಷಣಗಳಿವೆ.

ಇದನ್ನೂ ಓದಿ: ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ಈ ದಿಗ್ಗಜನೇ ಹೊಸ ಮುಖ್ಯ ಕೋಚ್!

ರೋಹಿತ್ ಶರ್ಮಾ ಅವರಿಂದ ODI ನಾಯಕತ್ವವನ್ನು ಕಸಿದುಕೊಳ್ಳಲು 3 ಅಪಾಯಕಾರಿ ಆಟಗಾರರು ಈಗಾಗಲೇ ಕಾಲಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಈ ವರ್ಷ 2023ರ ಏಕದಿನ ವಿಶ್ವಕಪ್ ಟ್ರೋಫಿಯನ್ನು ಭಾರತ ಗೆಲ್ಲುವಂತೆ ಮಾಡಲು ರೋಹಿತ್ ಶರ್ಮಾ ಮೇಲೆ ಸಾಕಷ್ಟು ಒತ್ತಡವಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ 2023 ರ ವಿಶ್ವಕಪ್ ಟ್ರೋಫಿ ಗೆಲ್ಲದಿದ್ದರೆ, 'ಹಿಟ್‌ಮ್ಯಾನ್' ಏಕದಿನ ನಾಯಕತ್ವವನ್ನು ಕಳೆದುಕೊಳ್ಳುವುದು ಸರ್ವಖಚಿತ.

1. ಹಾರ್ದಿಕ್ ಪಾಂಡ್ಯ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಏಕದಿನ ನಾಯಕನಾಗಲು ಅತಿ ದೊಡ್ಡ ಸ್ಪರ್ಧಿಯಾಗಿದ್ದಾರೆ. ನಾಯಕತ್ವದಿಂದ ಎಲ್ಲರನ್ನೂ ತಮ್ಮ ಅಭಿಮಾನಿಗಳನ್ನಾಗಿ ಮಾಡಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ಕಪಿಲ್ ದೇವ್ ಅವರ ಶೈಲಿಯ ಒಂದು ನೋಟವು ಕಂಡುಬರುತ್ತದೆ., ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಐಪಿಎಲ್ 2022 ಟ್ರೋಫಿಯನ್ನು ಗುಜರಾತ್ ಟೈಟಾನ್ಸ್‌ಗೆ ಗೆದ್ದಿತ್ತು.

2. ಸೂರ್ಯಕುಮಾರ್ ಯಾದವ್: ಮಿಸ್ಟರ್ 360 ಡಿಗ್ರಿ ಎಂದು ಕರೆಯಲ್ಪಡುವ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಭಾರತದ ಏಕದಿನ ನಾಯಕನಾಗಲು ದೊಡ್ಡ ಸ್ಪರ್ಧಿಯಾಗಿದ್ದಾರೆ. ಇದೀಗ ಏಕದಿನ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಸ್ಥಾನ ನಿಗದಿಯಾಗಿದ್ದು, ಇದೀಗ ನಾಯಕತ್ವದ ಕೊರತೆ ಮಾತ್ರ ಉಳಿದಿದೆ. ನಾಯಕತ್ವದ ಮೇಲೆ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದ ಅದೃಷ್ಟವನ್ನೇ ಬದಲಾಯಿಸಬಹುದು. 2023ರ ಏಕದಿನ ವಿಶ್ವಕಪ್ ನಂತರ ಟೀಂ ಇಂಡಿಯಾಗೆ ಸೂರ್ಯಕುಮಾರ್ ಯಾದವ್ ಅವರಂತಹ ನಿರ್ಭೀತ ಬ್ಯಾಟ್ಸ್‌ಮನ್ ಮತ್ತು ಬುದ್ಧಿವಂತ ನಾಯಕನ ಅಗತ್ಯವಿದೆ.

ಇದನ್ನೂ ಓದಿ: ಇನ್ನೊಂದೇ ಹೆಜ್ಜೆ ಬಾಕಿ… ಕ್ರಿಕೆಟ್ ಇತಿಹಾಸದಲ್ಲೇ ಕಷ್ಟ ಎನ್ನುವ ಈ ದಾಖಲೆ ಬರೆಯಲಿದ್ದಾರೆ ಕೊಹ್ಲಿ!

3. ವಿರಾಟ್ ಕೊಹ್ಲಿ: ಟೀಂ ಇಂಡಿಯಾದ ಡ್ಯಾಶಿಂಗ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಭಾರತದ ಏಕದಿನ ನಾಯಕನಾಗಲು ದೊಡ್ಡ ಸ್ಪರ್ಧಿಯಾಗಿದ್ದಾರೆ. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಕಳೆದ ವರ್ಷ 2021 ರ ಡಿಸೆಂಬರ್‌ನಲ್ಲಿ ವಿರಾಟ್ ಕೊಹ್ಲಿಯನ್ನು ODI ನಾಯಕತ್ವದಿಂದ ತೆಗೆದುಹಾಕಿತು. ಇದಾದ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನೂ ತೊರೆದಿದ್ದರು. ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ನಂತರ ಚೇತನ್ ಶರ್ಮಾ ಅವರು ಹೊರಬಿದ್ದ ಬಳಿಕ ಇದೀಗ ವಿರಾಟ್ ಕೊಹ್ಲಿಗೆ ಮತ್ತೊಮ್ಮೆ ನಾಯಕನಾಗುವ ಹಾದಿ ಸುಗಮವಾಗಿದೆ. 2023ರ ಏಕದಿನ ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿಯಂತಹ ಆಕ್ರಮಣಕಾರಿ ನಾಯಕನ ಅಗತ್ಯವಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News