ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ಈ ದಿಗ್ಗಜನೇ ಹೊಸ ಮುಖ್ಯ ಕೋಚ್! ಅಧಿಕಾರ ನೀಡಲಿದೆ BCCI

Team India Coach: ರಾಹುಲ್ ದ್ರಾವಿಡ್ 2023ರ ವಿಶ್ವಕಪ್ ನಂತರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ತೊರೆಯಬಹುದು. ಬಳಿಕ ಹೊಸ ಕೋಚ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಾಣಿಸುತ್ತಿದೆ.

Written by - Bhavishya Shetty | Last Updated : Jul 19, 2023, 08:51 AM IST
    • ರಾಹುಲ್ ದ್ರಾವಿಡ್ ಅವರ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ
    • ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕೊನೆಗೊಳ್ಳಲಿದೆ
    • ಬಳಿಕ ಹೊಸ ಕೋಚ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಾಣಿಸುತ್ತಿದೆ
ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ಈ ದಿಗ್ಗಜನೇ ಹೊಸ ಮುಖ್ಯ ಕೋಚ್! ಅಧಿಕಾರ ನೀಡಲಿದೆ BCCI title=
Rahul Dravid

Team India Next Coach: 2023ರ ವಿಶ್ವಕಪ್ ನಂತರ ಭಾರತೀಯ ಕ್ರಿಕೆಟ್‌ ನಲ್ಲಿ ದೊಡ್ಡ ಬದಲಾವಣೆಯಾಗುವ ಸಂಭವವಿದೆ. ಈ ವರ್ಷದ ನವೆಂಬರ್‌ನಲ್ಲಿ 2023 ರ ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕೊನೆಗೊಳ್ಳಲಿದೆ. ಈ ಕಾರಣದಿಂದ ರಾಹುಲ್ ದ್ರಾವಿಡ್ 2023ರ ವಿಶ್ವಕಪ್ ನಂತರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ತೊರೆಯಬಹುದು. ಬಳಿಕ ಹೊಸ ಕೋಚ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಾಣಿಸುತ್ತಿದೆ.

ಇದನ್ನೂ ಓದಿ: ತ್ರಿಶತಕ ಬಾರಿಸಿದ ಈ ಸ್ಫೋಟಕ ಬ್ಯಾಟ್ಸ್’ಮನ್’ಗೆ ನಿವೃತ್ತಿ ನೀಡಲು ಒತ್ತಾಯಿಸುತ್ತಿದೆ ಆಯ್ಕೆ ಸಮಿತಿ!?

BCCI ಮೂಲಗಳು InsideSportಗೆ ನೀಡಿದ ಮಾಹಿತಿ ಪ್ರಕಾರ, “ಭಾರತವು ಈ ವರ್ಷ 2023ರ ವಿಶ್ವಕಪ್ ಗೆಲ್ಲಬಹುದು. ಆದರೆ ರಾಹುಲ್ ದ್ರಾವಿಡ್ ಅವರ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ತಮ್ಮ ಕುಟುಂಬವನ್ನು ನೋಡುವುದರ ಜೊತೆಗೆ, ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದೊಂದಿಗೆ ಆಗಾಗ್ಗೆ ದೀರ್ಘ ಪ್ರವಾಸಗಳಲ್ಲಿ ಪ್ರಯಾಣಿಸಬೇಕಾಗಿದೆ. ರಾಹುಲ್ ದ್ರಾವಿಡ್ ಅವರು ಸ್ಥಿರ ಜೀವನವನ್ನು ಇಷ್ಟಪಡುತ್ತಾರೆ ಮತ್ತು ಅದಕ್ಕಾಗಿಯೇ ಅವರು ಆರಂಭದಲ್ಲಿ ಈ ಹುದ್ದೆಯನ್ನು ತೆಗೆದುಕೊಳ್ಳಲು ಸಿದ್ಧರಿರಲಿಲ್ಲ” ಎಂದು ಹೇಳಿದೆ.

ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ಹೊಸ ಮುಖ್ಯ ಕೋಚ್!

ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, “2023ರ ವಿಶ್ವಕಪ್‌ಗೆ ಮೊದಲು ಅಥವಾ ನಂತರ ನಾವು ರಾಹುಲ್ ದ್ರಾವಿಡ್ ಅವರೊಂದಿಗೆ ಮಾತನಾಡುತ್ತೇವೆ. ಸದ್ಯ, ರಾಹುಲ್ ದ್ರಾವಿಡ್ ಅವರ ಕೋಚ್ ಗುತ್ತಿಗೆಯನ್ನು ವಿಸ್ತರಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನಾವೆಲ್ಲರೂ ಪ್ರಸ್ತುತ 2023 ರ ವಿಶ್ವಕಪ್ ಮೇಲೆ ಕೇಂದ್ರೀಕರಿಸಿದ್ದೇವೆ. ರಾಹುಲ್ ದ್ರಾವಿಡ್ ಮುಂದುವರಿಯಲು ಬಯಸುವುದಿಲ್ಲ ಎಂಬ ಯಾವುದೇ ಸೂಚನೆ ನಮಗೆ ಇನ್ನೂ ಬಂದಿಲ್ಲ” ಎಂದಿದ್ದಾರೆ.

ಟೀಂ ಇಂಡಿಯಾದ ಕೋಚ್ ಸ್ಥಾನಕ್ಕೆ ನಾಲ್ವರ ರೇಸ್!

1. ಆಶಿಶ್ ನೆಹ್ರಾ: ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಕ್ರಿಕೆಟ್‌ನ ಚಾಣಾಕ್ಷ ತಂತ್ರಜ್ಞ. ಆಶಿಶ್ ನೆಹ್ರಾ ಅವರ ಸ್ಮಾರ್ಟ್ ಮತ್ತು ಕೂಲ್ ಕ್ರಿಕೆಟ್ ಮೈಂಡ್ ಟೀಮ್ ಇಂಡಿಯಾವನ್ನು ವಿಶ್ವದ ಅತ್ಯುತ್ತಮ ತಂಡವನ್ನಾಗಿ ಮಾಡಬಹುದು. ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಗಿದ್ದಾರೆ. ಅವರ ಕೋಚಿಂಗ್‌ನಲ್ಲಿ ತಂಡಕ್ಕೆ ಐಪಿಎಲ್ ಸೀಸನ್ 2022 ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರೋಟೋಕಾಲ್ ಪ್ರಕಾರ, 2023 ರ ವಿಶ್ವಕಪ್ ನಂತರ, ಬಿಸಿಸಿಐ ಹೊಸ ಮುಖ್ಯ ಕೋಚ್‌ಗಾಗಿ ಅರ್ಜಿಗಳನ್ನು ಆಹ್ವಾನಿಸುತ್ತದೆ. ಈ ವಿಷಯದಲ್ಲಿ ಟೀಂ ಇಂಡಿಯಾದ ಮುಂದಿನ ಕೋಚ್ ಆಗಲು ಆಶಿಶ್ ನೆಹ್ರಾ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ.

2. ವೀರೇಂದ್ರ ಸೆಹ್ವಾಗ್: ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಕೂಡ ಟೀಮ್ ಇಂಡಿಯಾದ ಮುಂದಿನ ಕೋಚ್ ಆಗಲು ದೊಡ್ಡ ಸ್ಪರ್ಧಿಯಾಗಿದ್ದಾರೆ. ಅವರ ದಿನಗಳಲ್ಲಿ, ತನ್ನ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ವಿಶ್ವದಾದ್ಯಂತದ ಬೌಲರ್‌ ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದು ಸುಳ್ಳಲ್ಲ. ಸೆಹ್ವಾಗ್ ಈಗಾಗಲೇ ಟೀಂ ಇಂಡಿಯಾ ಕೋಚ್ ಆಗಲು ಅರ್ಜಿ ಸಲ್ಲಿಸಿದ್ದಾರೆ.

3. ಸ್ಟೀಫನ್ ಫ್ಲೆಮಿಂಗ್: ನ್ಯೂಜಿಲೆಂಡ್‌ನ ಅನುಭವಿ ಆಟಗಾರ ಸ್ಟೀಫನ್ ಫ್ಲೆಮಿಂಗ್ ಅವರು ಟೀಮ್ ಇಂಡಿಯಾದ ಮುಂದಿನ ಕೋಚ್ ಆಗುವ ದೊಡ್ಡ ಸ್ಪರ್ಧಿಯಾಗಿದ್ದಾರೆ. ಫ್ಲೆಮಿಂಗ್ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಕೋಚ್ ಆಗಿದ್ದಾರೆ. ಇವರ ತರಬೇತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಇವರು ಒಬ್ಬ ಚಾಣಾಕ್ಷ ತಂತ್ರಗಾರ ಮತ್ತು ಭಾರತೀಯ ಆಟಗಾರರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.

ಇದನ್ನೂ ಓದಿ: IND vs WI: ಅಂತಿಮ ಟೆಸ್ಟ್’ಗೆ ತಂಡ ಪ್ರಕಟ: ಈ ಸ್ಟಾರ್ ಆಫ್-ಸ್ಪಿನ್ನರ್’ಗೆ ಅವಕಾಶ ಕೊಟ್ಟ ಸಮಿತಿ

4. ಟಾಮ್ ಮೂಡಿ: ಆಸ್ಟ್ರೇಲಿಯಾದ ಹಿರಿಯ ಆಟಗಾರ ಟಾಮ್ ಮೂಡಿ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿದ್ದಾರೆ. ಟಾಮ್ ಮೂಡಿ ಅವರ ತರಬೇತಿಯಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ತಂಡ 1 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. 2017ರಲ್ಲಿ ಟೀಂ ಇಂಡಿಯಾ ಕೋಚ್ ಹುದ್ದೆಗೆ ಟಾಮ್ ಮೂಡಿ ಸಂದರ್ಶನ ನೀಡಿದ್ದರು. ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ಟಾಮ್ ಮೂಡಿ ರವಿಶಾಸ್ತ್ರಿ ಅವರಿಗೆ ಕಠಿಣ ಹೋರಾಟ ನೀಡಿದ್ದರು, ಆದರೆ ವಿರಾಟ್ ಕೊಹ್ಲಿ ಆಯ್ಕೆಯನ್ನು ನೋಡಿಕೊಂಡು ಶಾಸ್ತ್ರಿ ಅವರನ್ನು ಕೋಚ್ ಮಾಡಲಾಗಿದೆ. ಟಾಮ್ ಮೂಡಿ ಟೀಂ ಇಂಡಿಯಾದ ಕೋಚ್ ಆಗಲು ದೊಡ್ಡ ಸ್ಪರ್ಧಿಯಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News