Robin Uthappa Announces Retirement: ಭಾರತೀಯ ಕ್ರಿಕೆಟ್ ತಂಡದ ಕನ್ನಡಿಗ ಆಟಗಾರ ರಾಬಿನ್ ಉತ್ತಪ್ಪ ಇದ್ದಕ್ಕಿದ್ದಂತೆ ಕ್ರಿಕೆಟ್ ನ ಎಲ್ಲಾ ಮಾದರಿಯ ಆಟಗಳಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ. 2007 ರಲ್ಲಿ ನಡೆದ ಟಿ20 ವಿಶ್ವ ಕಪ್ ಸಂದರ್ಭದಲ್ಲಿ ರಾಬಿನ್ ಉತ್ತಪ್ಪ ಟೀಂ ಇಂಡಿಯಾ ಭಾಗವಾಗಿದ್ದರು. ರಾಬಿನ್ ಉತ್ತಪ್ಪ ತನ್ನ ಸ್ಫೋಟಕ ಬ್ಯಾಟಿಂಗ್ ಶೈಲಿಗಾಗಿ ಹೆಸರುವಾಸಿಯಾಗಿದ್ದರು. ಐಪಿಎಲ್ ನಲ್ಲಿಯೂ ಕೂಡ ರಾಬಿನ್ ಓರ್ವ ಯಶಸ್ವಿ ಆಟಗಾರರಾಗಿದ್ದರು.
ಟ್ವೀಟ್ ಮಾಡುವ ಮೂಲಕ ವಿದಾಯ ಘೋಷಿಸಿದ ರಾಬಿನ್
ನಿವೃತ್ತಿಯ ಕುರಿತು ಟ್ವೀಟ್ ಮಾಡುವ ಮೂಲಕ ರಾಬಿನ್ ತನ್ನ ಅಭಿಮಾನಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಈ ಕುರಿತು ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ರಾಬಿನ್, 'ನನ್ನ ದೇಶ ಮತ್ತು ನನ್ನ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸಿರುವುದು ನನಗೆ ಅತ್ಯಂತ ಗೌರವ ತಂದಿದೆ, ಪ್ರತಿಯೊಂದು ಒಳ್ಳೆಯ ವಿಷಯಕ್ಕೆ ಒಂದು ಅಂತ್ಯ ಇರುತ್ತದೆ. ಮತ್ತು ನನ್ನ ಹೃದಯದಲ್ಲಿ ನನ್ನ ಕೃತಜ್ಞತೆಯೊಂದಿಗೆ, ನಾನು ಭಾರತೀಯ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ' ಎಂದಿದ್ದಾರೆ.
It has been my greatest honour to represent my country and my state, Karnataka. However, all good things must come to an end, and with a grateful heart, I have decided to retire from all forms of Indian cricket.
Thank you all ❤️ pic.twitter.com/GvWrIx2NRs
— Robin Aiyuda Uthappa (@robbieuthappa) September 14, 2022
ಇದನ್ನೂ ಓದಿ-ICC T20 Rankings : ಐಸಿಸಿ ಟಿ20 ರ‍್ಯಾಕಿಂಗ್ ಪಟ್ಟಿಯಲ್ಲಿ ಮಿಂಚಿದ ವಿರಾಟ್ ಕೊಹ್ಲಿ
2006ರಲ್ಲಿ ಭಾರತೀಯ ತಂಡಕ್ಕೆ ಪದಾರ್ಪಣೆ
ವರ್ಷ 2006ರಲ್ಲಿ ರಾಬಿನ್ ಉತ್ತಪ್ಪ ಭಾರತೀಯ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ರಾಬಿನ್ ಓರ್ವ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದರೂ ಕೂಡ ಟಾಪ್ ಆರ್ಡರ್ ನಲ್ಲಿ ಆಟವಾಡಿದ ಅನುಭವ ಹೊಂದಿದ್ದರು. 2007ರ ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ನಲ್ಲಿ ಅವರು ಭಾಗಿಯಾಗಿದ್ದರು. ಎಂ.ಎಸ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೊಟ್ಟಮೊದಲ ಬಾರಿಗೆ ಟಿ20 ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಗ, ವಿನ್ನಿಂಗ್ ಆಟಗಾರರ ಪಟ್ಟಿಯಲ್ಲಿ ಉತ್ತಪ್ಪ ಹೆಸರು ಶಾಮಿಲಾಗಿತ್ತು.
ಇದನ್ನೂ ಓದಿ-BCCI ಹುದ್ದೆಯಲ್ಲಿ ಸೌರವ್ ಗಂಗೂಲಿ, ಜಯ್ ಶಾ ಮುಂದುವರೆಯಲಿದ್ದಾರೆ: ಸುಪ್ರೀಂ ಮಹತ್ವದ ತೀರ್ಪು
ರಾಬಿನ್ ಉತ್ತಪ್ಪ ಟೀಂ ಇಂಡಿಯಾ ಪರ 46 ಏಕದಿನ ಹಾಗೂ 13 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ODI ಪಂದ್ಯಗಳಲ್ಲಿ 25.94 ರ ಸರಾಸರಿಯಲ್ಲಿ 934 ರನ್ ಗಳಿಸಿದ್ದಾರೆ, ಆದರೆ T20 ನಲ್ಲಿ ಅವರು 24.9 ರ ಸರಾಸರಿಯಲ್ಲಿ 249 ರನ್ ಗಳಿಸಿದ್ದರು. 2007 ರ T20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ನಡೆದ ಪಂದ್ಯ ಉತ್ತಪ್ಪ ಅವರ ವೃತ್ತಿಜೀವನದ ಉತ್ತಮ ಪಂದ್ಯವಾಗಿತ್ತು . ಗ್ರೂಪ್ ಸ್ಟೇಜ್ ನ ಈ ಪಂದ್ಯದಲ್ಲಿ ಉತ್ತಪ್ಪ 39 ಎಸೆತಗಳಲ್ಲಿ 50 ರನ್ ಗಳಿಸಿದ್ದರು ಮತ್ತು ಪಂದ್ಯ ಟೈ ಆದ ನಂತರ ಬಾಲ್ ಔಟ್ ಆಗುವುದರೊಂದಿಗೆ ಪಂದ್ಯ ಅಂತ್ಯಗೊಂಡಿತು ಮತ್ತು ಉತ್ತಪ್ಪ ಅದರಲ್ಲಿಯೂ ಕೂಡಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.