ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣ ಈಗ ಹಾರಾಟ ನಿಷೇಧ ವಲಯ

 ಮಂಗಳವಾರ ಮ್ಯಾಂಚೆಸ್ಟರ್‌ನಲ್ಲಿ ಭಾರತ-ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ಹಿನ್ನಲೆಯಲ್ಲಿ  ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣವನ್ನು ಹಾರಾಟ ನಿಷೇಧ ವಲಯ ಎಂದು ಘೋಷಿಸಲಾಗಿದೆ.

Last Updated : Jul 9, 2019, 04:19 PM IST
ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣ ಈಗ ಹಾರಾಟ ನಿಷೇಧ ವಲಯ   title=
file photo

ನವದೆಹಲಿ: ಮಂಗಳವಾರ ಮ್ಯಾಂಚೆಸ್ಟರ್‌ನಲ್ಲಿ ಭಾರತ-ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ಹಿನ್ನಲೆಯಲ್ಲಿ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣವನ್ನು ಹಾರಾಟ ನಿಷೇಧ ವಲಯ ಎಂದು ಘೋಷಿಸಲಾಗಿದೆ.

ಹೆಡಿಂಗ್ಲಿನಲ್ಲಿ ಶ್ರೀಲಂಕಾ ವಿರುದ್ಧದ ಲೀಗ್ ಪಂದ್ಯಾವಳಿಯಲ್ಲಿ ಖಾಸಗಿ ವಿಮಾನವು ಭಾರತ ವಿರೋಧಿ ಬ್ಯಾನರ್‌ಗಳನ್ನು ಪ್ರದರ್ಶಿಸಿತು.ಈ ಹಿನ್ನಲೆಯಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಬಿಸಿಸಿಐಗೆ ತಿಳಿಸಿದೆ.' ನಾವು ಸುರಕ್ಷತೆಯ ಉಲ್ಲಂಘನೆಯ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇವೆ ಮತ್ತು ನಮ್ಮ ಆಟಗಾರರ ಸುರಕ್ಷತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದೇವೆ. ಅದರಂತೆ, ಓಲ್ಡ್ ಟ್ರಾಫರ್ಡ್ ವಾಯು ಜಾಗವನ್ನು" ನೋ ಫ್ಲೈ ಜೋನ್ "ಆಗಿ ಪರಿವರ್ತಿಸಲಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಭಾರತ-ಶ್ರೀಲಂಕಾ ಪಂದ್ಯದ ಸಂದರ್ಭದಲ್ಲಿ ಯಾವುದೇ ಹೆಸರಿರದ ಖಾಸಗಿ ವಿಮಾನವು ಬ್ರಾಡ್ಫೋರ್ಡ್ ವಲಯದಿಂದ ಹೆಡಿಂಗ್ಲೆ ವಾಯುಪ್ರದೇಶದ ಮೇಲೆ ಭಾರತ ವಿರೋಧಿ ಬ್ಯಾನರ್‌ಗಳೊಂದಿಗೆ ಹಾರಿತು. ಅಲ್ಲದೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಮಯದಲ್ಲಿ ಮತ್ತೊಂದು ವಿಮಾನವು "ಜಸ್ಟೀಸ್ ಫಾರ್ ಬಲೂಚಿಸ್ತಾನ್" ಬ್ಯಾನರ್ನೊಂದಿಗೆ ಹಾರಿದ ನಂತರ ಐಸಿಸಿಯನ್ನು ಮುಜುಗರಕ್ಕೀಡು ಮಾಡಿತು.ಈ ಹಿನ್ನಲೆಯಲ್ಲಿ ಈಗ ಅದು ಈ ಕ್ರಮವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.

Trending News