Pradhan Mantri Ujjwala Yojana: ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳಿಗೆ ಸರ್ಕಾರ ಭರ್ಜರಿ ಸುದ್ದಿ ನೀಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಪ್ರತಿ ಎಲ್’ಪಿಜಿ ಸಿಲಿಂಡರ್’ಗೆ ರೂ 200 ಸಬ್ಸಿಡಿಯನ್ನು ಸರ್ಕಾರ ಶುಕ್ರವಾರ ಒಂದು ವರ್ಷಕ್ಕೆ ವಿಸ್ತರಿಸಿದೆ.
ಇದನ್ನೂ ಓದಿ: Emotional Video: ಮರೆಯಾದ ಮಮತೆಗೆ ಹಂಬಲ! ಅಮ್ಮನ ಸಮಾಧಿ ಮುಂದೆ ಕಂದನ ಸ್ವಗತ; ಕಟುಕನ ಮನವೂ ಕರಗುವ ವಿಡಿಯೋ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಈ ಉಪಕ್ರಮವು 9.6 ಕೋಟಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ. ಪಿಎಂಯುವೈ ಫಲಾನುಭವಿಗಳಿಗೆ ಪ್ರತಿ ಎಲ್’ಪಿಜಿ ಸಿಲಿಂಡರ್’ಗೆ 200 ರೂಪಾಯಿ ಸಬ್ಸಿಡಿ ನೀಡಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಈ ಸಬ್ಸಿಡಿಯನ್ನು ವರ್ಷಕ್ಕೆ 14.2 ಕೆಜಿಯ 12 ಎಲ್’ಪಿಜಿ ಸಿಲಿಂಡರ್‌ಗಳಿಗೆ ನೀಡಲಾಗುವುದು. ಮಾರ್ಚ್ 1, 2023 ಬಳಿಕ PMUY ಅಡಿಯಲ್ಲಿ 9.59 ಫಲಾನುಭವಿಗಳಿದ್ದರು. ಇದಕ್ಕೆ 2022-23ರಲ್ಲಿ 6,100 ಕೋಟಿ ಹಾಗೂ 2023-24ರಲ್ಲಿ 7,680 ಕೋಟಿ ವೆಚ್ಚವಾಗಲಿದೆ ಎಂದು ಸಚಿವರು ಹೇಳಿದರು.
ಇದರಲ್ಲಿ ಸಹಾಯಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ವಿಭಿನ್ನ ಅಂತರಾಷ್ಟ್ರೀಯ ಘಟನೆಗಳಿಂದಾಗಿ ಎಲ್’ಪಿಜಿಯ ಅಂತರಾಷ್ಟ್ರೀಯ ಬೆಲೆ ವೇಗವಾಗಿ. ಇಂತಹ ಪರಿಸ್ಥಿತಿಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳನ್ನು ಎಲ್’ಪಿಜಿಯ ದುಬಾರಿ ಬೆಲೆಯಿಂದ ರಕ್ಷಿಸುವುದು ಅಗತ್ಯವಾಗಿದೆ. ಪಿಎಂಯುವೈ ಅಡಿಯಲ್ಲಿ ಗ್ರಾಹಕರಿಗೆ ಸಬ್ಸಿಡಿ ರೂಪದಲ್ಲಿ ಬೆಂಬಲವು ಎಲ್’ಪಿಜಿಯ ನಿರಂತರ ಬಳಕೆಗೆ ಅವರನ್ನು ಪ್ರೋತ್ಸಾಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
PMUY ಗ್ರಾಹಕರ ಸರಾಸರಿ LPG ಬಳಕೆ 2019-20 ರಲ್ಲಿ 3.01 ರೀಫಿಲ್’ಗಳಿಂದ 2021-22 ರಲ್ಲಿ 3.68 ಕ್ಕೆ 20 ಶೇಕಡಾ ಹೆಚ್ಚಾಗಿದೆ. ಎಲ್ಲಾ PMUY ಫಲಾನುಭವಿಗಳು ಈ ಸಬ್ಸಿಡಿಯನ್ನು ಪಡೆಯುತ್ತಾರೆ.
ಇದನ್ನೂ ಓದಿ: Watch: ನೋಡನೋಡುತ್ತಿದ್ದಂತೆ ಚಂದ್ರನಲ್ಲೇ ಮರೆಯಾಯ್ತು ಶುಕ್ರ! ಹಿಂದೆಂದೂ ಸಂಭವಿಸಿದ ಮಹಾಸಂಯೋಗ: ವಿಡಿಯೋ ನೋಡಿ
ಮೇ 2016ರಲ್ಲಿ, ಸರ್ಕಾರವು ಬಡ ಕುಟುಂಬಗಳ ಮಹಿಳೆಯರಿಗೆ ಉಚಿತ ಎಲ್ಪಿಜಿ ಸಂಪರ್ಕಗಳನ್ನು ಒದಗಿಸಲು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.