Team Indiaಗೆ ಅಂದು ಬಲಾಬಲ..ಇಂದು ದೌರ್ಬಲ್ಯ: 2ನೇ ಪಂದ್ಯದಲ್ಲೂ ಹಾರ್ದಿಕ್ ಸೇನೆಗೆ ಪೆಟ್ಟು ನೀಡುತ್ತಾ ಈ ವಿಚಾರ?

IND vs NZ 2nd T20 Match: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕ ದಯನೀಯವಾಗಿ ವಿಫಲವಾಗಿದೆ. ಇಶಾನ್ ಕಿಶನ್ ಕೇವಲ ನಾಲ್ಕು ರನ್ ಗಳಿಸಿ ಔಟಾದರು. ಅದೇ ಸಮಯದಲ್ಲಿ ಶುಭಮನ್ ಗಿಲ್ 7 ರನ್ ಗಳಿಸಿದರು. ಮೂರನೇ ಸ್ಥಾನಕ್ಕೆ ಇಳಿದ ರಾಹುಲ್ ತ್ರಿಪಾಠಿ ಅವರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.

Written by - Bhavishya Shetty | Last Updated : Jan 29, 2023, 11:34 AM IST
    • ಇಡೀ ವಿಶ್ವದಲ್ಲೇ ಟೀಂ ಇಂಡಿಯಾದ ಬ್ಯಾಟಿಂಗ್ ಬಲಿಷ್ಠ ಎನಿಸಿದೆ
    • ಭಾರತ ತಂಡದ ಬ್ಯಾಟಿಂಗ್ ದೊಡ್ಡ ಶಕ್ತಿಯಾಗಿತ್ತು. ಆದರೆ ಈಗ ಅದುವೇ ದೌರ್ಬಲ್ಯವಾಗಿದೆ
    • ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕ ದಯನೀಯವಾಗಿ ವಿಫಲವಾಗಿದೆ
Team Indiaಗೆ ಅಂದು ಬಲಾಬಲ..ಇಂದು ದೌರ್ಬಲ್ಯ: 2ನೇ ಪಂದ್ಯದಲ್ಲೂ ಹಾರ್ದಿಕ್ ಸೇನೆಗೆ ಪೆಟ್ಟು ನೀಡುತ್ತಾ ಈ ವಿಚಾರ?
India Cricket

IND vs NZ 2nd T20 Match: ಭಾರತ ತಂಡವು ಒಂದಕ್ಕಿಂತ ಹೆಚ್ಚು ಬ್ಯಾಟ್ಸ್‌ಮನ್‌ಗಳನ್ನು ಜಗತ್ತಿಗೆ ನೀಡಿದೆ. ಇವರಲ್ಲಿ ಸುನಿಲ್ ಗವಾಸ್ಕರ್, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದ್ದಾರೆ. ಇಡೀ ವಿಶ್ವದಲ್ಲೇ ಟೀಂ ಇಂಡಿಯಾದ ಬ್ಯಾಟಿಂಗ್ ಬಲಿಷ್ಠ ಎನಿಸಿದೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಹೀನಾಯವಾಗಿ ಸೋಲು ಕಂಡಿದೆ.

ಇದನ್ನೂ ಓದಿ: Rashmika : ಸಿದ್ದಾರ್ಥ್​ ಜೊತೆ ರಶ್ಮಿಕಾ ಹಾರ್ಟ್ ಸಿಂಬಲ್​ ಪೋಸ್! ಶುರುವಾಯ್ತು ನ್ಯೂ ಗಾಸಿಪ್‌?

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕ ದಯನೀಯವಾಗಿ ವಿಫಲವಾಗಿದೆ. ಇಶಾನ್ ಕಿಶನ್ ಕೇವಲ ನಾಲ್ಕು ರನ್ ಗಳಿಸಿ ಔಟಾದರು. ಅದೇ ಸಮಯದಲ್ಲಿ ಶುಭಮನ್ ಗಿಲ್ 7 ರನ್ ಗಳಿಸಿದರು. ಮೂರನೇ ಸ್ಥಾನಕ್ಕೆ ಇಳಿದ ರಾಹುಲ್ ತ್ರಿಪಾಠಿ ಅವರಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಈ ಕಾರಣದಿಂದ ನಂತರ ಬಂದ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೆಚ್ಚಿ ಟೀಂ ಇಂಡಿಯಾದ ಬ್ಯಾಟಿಂಗ್ ಕಾರ್ಡ್ ನಂತೆ ಚದುರಿ 21 ರನ್ ಗಳಿಂದ ಭಾರತ ತಂಡ ಸೋಲನುಭವಿಸಬೇಕಾಯಿತು. ಭಾರತ ತಂಡದ ಬ್ಯಾಟಿಂಗ್ ದೊಡ್ಡ ಶಕ್ತಿಯಾಗಿತ್ತು. ಆದರೆ ಈಗ ಅದುವೇ ದೌರ್ಬಲ್ಯವಾಗಿದೆ.

ಇಶಾನ್ ಕಿಶನ್ ಕೆಲ ದಿನಗಳಿಂದ ಟಿ20 ಕ್ರಿಕೆಟ್ ನಲ್ಲಿ ಉತ್ತಮ ಆಟ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಪೃಥ್ವಿ ಶಾ ತಂಡದಲ್ಲಿ ಸ್ಥಾನ ಪಡೆಯಲು ಸಿದ್ಧರಾಗಿದ್ದಾರೆ. ಅದೇ ಹೊತ್ತಿಗೆ ಮೊದಲ ಟಿ20 ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 51 ರನ್ ನೀಡಿ ದುಬಾರಿ ಎನಿಸಿದ್ದು, ಅತ್ಯುತ್ತಮ ಫಾರ್ಮ್ ನಲ್ಲಿ ಓಡುತ್ತಿರುವ ಮುಖೇಶ್ ಕುಮಾರ್ ಹೊರಗೆ ಕುಳಿತಿದ್ದಾರೆ.

ಇದನ್ನೂ ಓದಿ: Skin Care : ಕಾಂತಿಯುತ ತ್ವಚೆಗಾಗಿ ಬಾದಾಮಿ ಜೊತೆ 2 ಹನಿ ಈ ಎಣ್ಣೆ ಬೆರೆಸಿ ಪ್ಯಾಕ್‌ ಹಾಕಿಕೊಳ್ಳಿ

ಸರಣಿಯನ್ನು ಸಮಬಲಗೊಳಿಸುವ ಅವಕಾಶ

ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 21 ರನ್‌ಗಳ ಸೋಲು ಕಂಡಿತ್ತು. ಮೊದಲ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅತ್ಯಂತ ಕಳಪೆ ಆಟ ಪ್ರದರ್ಶಿಸಿದರು. ಇದೀಗ ಎರಡನೇ ಟಿ20 ಪಂದ್ಯ ಲಕ್ನೋ ಮೈದಾನದಲ್ಲಿ ನಡೆಯಲಿದೆ. ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದ ಪ್ಲೇಯಿಂಗ್ XIನಲ್ಲಿ ದೊಡ್ಡ ಬದಲಾವಣೆ ಮಾಡಬಹುದು. ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಾನತೆ ಸಾಧಿಸಲು ಬಯಸುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News