ಭಾರತದ ವೆಸ್ಟ್ ಇಂಡೀಸ್ ಕ್ರಿಕೆಟ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ವಿವರ ಇಲ್ಲಿದೆ

ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ 2019 ರ ಸೆಮಿಫೈನಲ್‌ನಲ್ಲಿ ಸೋಲಿನ ಕಹಿ ಅನುಭವ ಇನ್ನು ಹಸಿರಾಗಿರುವಾಗಲೇ ಭಾರತ ತಂಡ ಈಗ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಜ್ಜಾಗಿ ನಿಂತಿದೆ.

Last Updated : Jul 27, 2019, 04:45 PM IST
ಭಾರತದ ವೆಸ್ಟ್ ಇಂಡೀಸ್ ಕ್ರಿಕೆಟ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ವಿವರ ಇಲ್ಲಿದೆ  title=
PHOTO:BCCI

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ 2019 ರ ಸೆಮಿಫೈನಲ್‌ನಲ್ಲಿ ಸೋಲಿನ ಕಹಿ ಅನುಭವ ಇನ್ನು ಹಸಿರಾಗಿರುವಾಗಲೇ ಭಾರತ ತಂಡ ಈಗ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಜ್ಜಾಗಿ ನಿಂತಿದೆ.

ಆಗಸ್ಟ್ 3 ರಿಂದ ಮೂರು ಪಂದ್ಯಗಳ ಟಿ 20 ಐ ಸರಣಿಯೊಂದಿಗೆ ತಿಂಗಳ ಅವಧಿಯ ಪ್ರವಾಸವು ಪ್ರಾರಂಭವಾಗುತ್ತದೆ. ವಿರಾಟ್ ಕೊಹ್ಲಿ ನೇತೃತ್ವದ ತಂಡವು ಆಗಸ್ಟ್ 8 ರಿಂದ 30ರ ನಡುವೆ 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಎರಡು ಟೆಸ್ಟ್ ಪಂದ್ಯಗಳು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿಯ ಭಾಗವಾಗಲಿದೆ.

ಭಾರತದ ವೆಸ್ಟ್ ಇಂಡೀಸ್ ಪ್ರವಾಸದ ಸಂಪೂರ್ಣ ವಿವರ:

ಟಿ 20 ಐ ಸರಣಿ ವೇಳಾಪಟ್ಟಿ:

ಆಗಸ್ಟ್ 3 (ಶನಿವಾರ), ಫ್ಲೋರಿಡಾದ ಫೋರ್ಟ್ ಲಾಡರ್ ಹಿಲ್  1 ನೇ ಟಿ 20 ಐ, 8 ಗಂಟೆ ಸಾಯಂಕಾಲ, ಭಾರತೀಯ ಕಾಲಮಾನ  (ಸ್ಥಳೀಯ ಬೆಳಿಗ್ಗೆ 10:30)

ಆಗಸ್ಟ್ 4 (ಭಾನುವಾರ ): ಫ್ಲೋರಿಡಾದ ಫೋರ್ಟ್ ಲಾಡೆರ್ಹಿಲ್ನಲ್ಲಿ 2 ನೇ ಟಿ 20 ಐ, 8 ಗಂಟೆ ಸಾಯಂಕಾಲ, ಭಾರತೀಯ ಕಾಲಮಾನ  (ಸ್ಥಳೀಯ ಬೆಳಿಗ್ಗೆ 10:30)

ಆಗಸ್ಟ್ 6 (ಸೋಮವಾರ): ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ 3 ನೇ ಟಿ 20 ಐ, 8 ಗಂಟೆ ಸಾಯಂಕಾಲ, ಭಾರತೀಯ ಕಾಲಮಾನ  (ಸ್ಥಳೀಯ ಬೆಳಿಗ್ಗೆ 10:30)

3 ಟಿ- 20 ಪಂದ್ಯಗಳಿಗಾಗಿ ಭಾರತದ ತಂಡ:

ವಿರಾಟ್ ಕೊಹ್ಲಿ (ನಾಯಕ ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್ ), ಕ್ರುನಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವ್, ಖಲೀಲ್ ಅಹ್ಮದ್, ದೀಪಕ್ ಚಹರ್, ನವದೀಪ್ ಸೈನಿ

ಏಕದಿನ ಸರಣಿ ವೇಳಾಪಟ್ಟಿ:

ಆಗಸ್ಟ್ 8 (ಗುರುವಾರ): ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ 1 ನೇ ಏಕದಿನ ಪಂದ್ಯ, ಸಾಯಂಕಾಲ ಏಳು ಗಂಟೆಗೆ, ಭಾರತೀಯ ಕಾಲಮಾನ  (ಸ್ಥಳೀಯವಾಗಿ 09:30 ಬೆಳಗ್ಗೆ )

ಆಗಸ್ಟ್ 11 (ಭಾನುವಾರ): ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ 2 ನೇ ಏಕದಿನ ಪಂದ್ಯ, ಸಾಯಂಕಾಲ ಏಳು ಗಂಟೆಗೆ, ಭಾರತೀಯ ಕಾಲಮಾನ  (ಸ್ಥಳೀಯವಾಗಿ 09:30 ಬೆಳಗ್ಗೆ )

ಆಗಸ್ಟ್ 14 (ಬುಧವಾರ): ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ 3 ನೇ ಏಕದಿನ ಪಂದ್ಯ ಸಾಯಂಕಾಲ ಏಳು ಗಂಟೆಗೆ, ಭಾರತೀಯ ಕಾಲಮಾನ  (ಸ್ಥಳೀಯವಾಗಿ 09:30 ಬೆಳಗ್ಗೆ )

ಏಕದಿನ ಪಂದ್ಯಗಳಿಗೆ ಭಾರತದ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯುಜ್ವೇಂದ್ರ ಚಹಲ್, ಕೇದಾರ್ ಜಾದ್ , ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ನವದೀಪ್ ಸೈನಿ

ಟೆಸ್ಟ್ ಸರಣಿಯ ವೇಳಾಪಟ್ಟಿ:

ಆಗಸ್ಟ್ 22 (ಗುರುವಾರ) - ಆಗಸ್ಟ್ 26 (ಸೋಮ): 1 ನೇ ಟೆಸ್ಟ್, ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ಆಂಟಿಗುವಾ, ಸಾಯಂಕಾಲ ಏಳು ಗಂಟೆಗೆ, ಭಾರತೀಯ ಕಾಲಮಾನ  (ಸ್ಥಳೀಯವಾಗಿ 09:30 ಬೆಳಗ್ಗೆ )

ಆಗಸ್ಟ್ 30 (ಶುಕ್ರ) - ಸೆಪ್ಟೆಂಬರ್ 03, (ಮಂಗಳ): 2 ನೇ ಟೆಸ್ಟ್, ಸಬಿನಾ ಪಾರ್ಕ್, ಜಮೈಕಾ, ಸಾಯಂಕಾಲ 8 ಗಂಟೆಗೆ, ಭಾರತೀಯ ಕಾಲಮಾನ  (ಸ್ಥಳೀಯವಾಗಿ  ಬೆಳಗ್ಗೆ  09:30)

ಟೆಸ್ಟ್ ಪಂದ್ಯಗಳಿಗೆ ಭಾರತದ ತಂಡ:

ವಿರಾಟ್ ಕೊಹ್ಲಿ (ನಾಯಕ ), ಅಜಿಂಕ್ಯ ರಹಾನೆ (ಉಪನಾಯಕ ), ಮಾಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಸಿ ಪೂಜಾರ, ಹನುಮಾ ವಿಹಾರಿ, ರೋಹಿತ್ ಶರ್ಮಾ, ರಿಷಭ್ ಪಂತ್ (ವಿಕೆ)) ವೃದ್ಧಿಮಾನ್ ಸಹಾ (ವಿಕೆ), ಆರ್ ಅಶ್ವಿನ್, ರವೀಂದ್ರ ಜಡೇಜಾ ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್.

Trending News