ನವದೆಹಲಿ:ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಸೂಪರ್ ಫೋರ್ ಪಂದ್ಯದಲ್ಲಿ ಪಾಕ್ ಹೀನಾಯವಾಗಿ ಸೋಲನ್ನು ಅನುಭವಿಸಿದ್ದಕ್ಕೆ ಭಾರತೀಯ ಟಿವಿ ವಾಹಿನಿಯ ಆಂಕರ್ ರೊಬ್ಬರು ಈ ಸೋಲನ್ನು ಸ್ವಚ್ಛ ಭಾರತ ಅಭಿಯಾನಕ್ಕೆ ಹೋಲಿಸಿದ್ದಾರೆ. ಇದಕ್ಕೆ ಪಾಕ್ ನ ಮಾಜಿ ಆಟಗಾರ ಶೋಯಬ್ ಅಖ್ತರ್ ಮಾತ್ರ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪಾಕ್ ನ ಸೋಲನ್ನು ಪ್ರಸ್ತಾಪಿಸುತ್ತಾ ಆಂಕರ್ "ಭಾರತದಲ್ಲಿ, ಸ್ವಚತಾ ಮಿಷನ್ ನ ಎರಡನೇ ಆವೃತ್ತಿ ಪ್ರಾರಂಭವಾಗಿದೆ. ಕೇವಲ 100 ಗಂಟೆಗಳ ಹಿಂದೆ ಪಾಕಿಸ್ತಾನವನ್ನು ಸೋಲಿಸಿದ ನಂತರ ಭಾರತ ತಂಡವು ಈ ಮಿಶನ್ ನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದೆ ಎಂದು ನನಗೆ ತೋರುತ್ತದೆ. ಆದ್ದರಿಂದ ಮತ್ತೊಮ್ಮೆ ನಿಮ್ಮ ಆಟಗಾರರು ಇದಕ್ಕೆ ಸಿದ್ಧರಿದ್ದೀರಾ? "ಎಂದು ಪತ್ರಕರ್ತೆ ಕೇಳಿದ್ದಾಳೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಖ್ತರ್ ತಮ್ಮ ಪ್ರಶ್ನೆ ಕ್ರೀಡೆಗೆ ಮಾತ್ರ ಸಿಮಿತವಾಗಿರಬೇಕೆಂದು ಕೇಳಿಕೊಂಡಿದ್ದಾರೆ. "ನೋಡಿ, ನಿನ್ನ ಹೆಸರೇನು ಎಂದು ನನಗೆ ಗೊತ್ತಿಲ್ಲ. ಆದರೆ ನಾನು ನಿಮ್ಮನ್ನು ಗೌರವಿಸುತ್ತೇನೆ. ಮತ್ತು ನೀವು ನನಗೆ ಪ್ರಶ್ನೆಗಳನ್ನು ಕೇಳಿದರೆ, ಆಗ ನಾನು ನಿಮಗೆ ಉತ್ತರಿಸುತ್ತೇನೆ. ನೀವು 'thrashing' ಮತ್ತು 'dhulaai' ಮತ್ತು 'swachhta' ಬಗ್ಗೆ ಮಾತನಾಡಿದರೆ, ನಾನು ಉತ್ತರಿಸುವುದಿಲ್ಲ. ಕ್ರಿಕೆಟ್ ಬಗ್ಗೆ ಪ್ರಶ್ನೆಗಳನ್ನು ಕೇಳಿ, ನಾನು ಕ್ರಿಕೆಟ್ ಬಗ್ಗೆ ಮಾತನಾಡುತ್ತೇನೆ. ಕ್ರಿಕೆಟ್ ಬಗ್ಗೆ ಮಾತನಾಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಕೇಳಿಕೊಂಡಿದ್ದಾರೆ.