Video: ಕ್ರೀಡಾಂಗಣದಲ್ಲಿಯೇ ವರದಿಗಾರ್ತಿ ಗಲ್ಲಕ್ಕೆ ಚುಂಬಿಸಿದ ಫುಟ್ಬಾಲ್​​​​ ಆಟಗಾರ!

ಉಕ್ರೇನ್ ಸ್ಟಾರ್ ಎಂದೇ ಖ್ಯಾತರಾದ ಒಲೆಕ್ಸಾಂಡರ್ ಜಿಂಚೆಂಕೊ ಅವರನ್ನು ಮಾತನಾಡಿಸುತ್ತಿದ್ದ ವರದಿಗಾರ್ತಿ ವ್ಲಾಡಾ ಸೆಡನ್ ಕೆನ್ನೆಗೆ ಚುಂಬಿಸಿದ ಘಟನೆ ಶುಕ್ರವಾರ ನಡೆದಿದೆ.

Updated: Jun 9, 2019 , 06:57 PM IST
Video: ಕ್ರೀಡಾಂಗಣದಲ್ಲಿಯೇ ವರದಿಗಾರ್ತಿ ಗಲ್ಲಕ್ಕೆ ಚುಂಬಿಸಿದ ಫುಟ್ಬಾಲ್​​​​ ಆಟಗಾರ!

ನವದೆಹಲಿ: ಫುಟ್ಬಾಲ್ ಕ್ರೀಡಾಂಗಣದಲ್ಲಿ ನೇರ ಪ್ರಸಾರದಲ್ಲಿ ವರದಿ ಮಾಡುತ್ತಿದ್ದ ವರದಿಗಾರ್ತಿಗೆ ಆಟಗಾರನೊಬ್ಬ ಮುತ್ತಿಟ್ಟ ವೀಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಉಕ್ರೇನ್​​​​ ಮತ್ತು ಸರ್ಬಿಯಾ ನಡುವೆ ಶುಕ್ರವಾರ ನಡುವಿನ ಫುಟ್ಬಾಲ್​​ ಪಂದ್ಯದಲ್ಲಿ ಉತ್ತಮ ಪ್ರದರ್ಶನದೊಂದಿಗೆ ಗೆಲುವು ಸಾಧಿಸಿದ ಉಕ್ರೇನ್ ತಂಡದ ಆಟಗಾರ, ಮ್ಯಾಂಚೆಸ್ಟರ್ ನಗರ ಮತ್ತು ಉಕ್ರೇನ್ ಸ್ಟಾರ್ ಎಂದೇ ಖ್ಯಾತರಾದ ಒಲೆಕ್ಸಾಂಡರ್ ಜಿಂಚೆಂಕೊ ಅವರನ್ನು ಮಾತನಾಡಿಸುತ್ತಿದ್ದ ವರದಿಗಾರ್ತಿ ವ್ಲಾಡಾ ಸೆಡನ್ ಕೆನ್ನೆಗೆ ಚುಂಬಿಸಿದ ಘಟನೆ ನಡೆದಿತ್ತು. ಅದು ಸುದ್ದಿ ವಾಹಿನಿಯಲ್ಲಿ ನೇರಪ್ರಸಾರ ಸಹ ಆಗಿತ್ತು. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಈ ರೀತಿ ನೇರ ಪ್ರಸಾರದಲ್ಲಿ ವರದಿಗಾರ್ತಿಯನ್ನು ಚುಂಬಿಸಿರುವ ಬಗ್ಗೆ ನೆಟ್ಟಿಗರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರಾದರೂ, ಅವರಿಬ್ಬರೂ ಸ್ನೇಹಿತರಾಗಿದ್ದು ಹಲವು ಸಂದರ್ಭಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.