ರಾಷ್ಟ್ರ ರಾಜಧಾನಿಯಲ್ಲಿ ವಿರುಷ್ಕಾ ಸುತ್ತಾಟ..

Virushka Couple In Delhi: ಕಳೆದ ವಾರವಷ್ಟೇ ಬೆಂಗಳೂರಿನ ಹೋಟೆಲ್ ಒಂದರಲ್ಲಿ ದೋಸೆ ಸವಿದ ವಿರುಷ್ಕಾ ಜೋಡಿ ಈಗ ದೆಹಲಿಯ ಗಲ್ಲಿ ಗಲ್ಲಿ ತಿರುಗಾಡುತ್ತಿರುವ ಫೋಟೋ ಒಂದನ್ನು ಸ್ವತಃ ಕಿಂಗ್ ಕೊಹ್ಲಿ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Written by - Nandish A.Huded | Edited by - Yashaswini V | Last Updated : May 3, 2023, 02:13 PM IST
  • ಮೊನ್ನೆ ತಾನೆ ನಡೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದ ಜೋಶ್ ನಲ್ಲಿ ಆರ್‌ಸಿ‌ಬಿ ತನ್ನ ಮುಂದಿನ ಪಂದ್ಯಕ್ಕಾಗಿ ದೆಹಲಿಗೆ ಹಾರಿದೆ.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿ‌ಬಿ) ತಂಡದೊಂದಿಗೆ ಪ್ರಯಾಣ ಬೆಳೆಸಿದ ವಿರಾಟ್ ಕೊಹ್ಲಿ
  • ಪಂದ್ಯಕ್ಕೆ ಇನ್ನೂ ಮೂರು ದಿನಗಳು ಬಾಕಿ ಇರುವಾಗ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ದೆಹಲಿಯಲ್ಲಿ ಓಡಾಡುತ್ತಿರುವ ಫೋಟೋ ವೈರಲ್
ರಾಷ್ಟ್ರ ರಾಜಧಾನಿಯಲ್ಲಿ ವಿರುಷ್ಕಾ  ಸುತ್ತಾಟ..  title=
Virushka Couple Photo credit Insta@virat.kohli

Virat Kohli Anushka Sharma Couple: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿ‌ಬಿ) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಓಡಾಡುತ್ತಿರುವ ಫೋಟೋ ಒಂದನ್ನು ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
 
ಮೊನ್ನೆ ತಾನೆ ನಡೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದ ಜೋಶ್ ನಲ್ಲಿ ಆರ್‌ಸಿ‌ಬಿ ತನ್ನ ಮುಂದಿನ ಪಂದ್ಯಕ್ಕಾಗಿ ದೆಹಲಿಗೆ ಹಾರಿದೆ.  ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿ‌ಬಿ) ತಂಡದೊಂದಿಗೆ ಪ್ರಯಾಣ ಬೆಳೆಸಿದ ವಿರಾಟ್ ಕೊಹ್ಲಿ ಪಂದ್ಯಕ್ಕೆ ಇನ್ನೂ ಮೂರು ದಿನಗಳು ಬಾಕಿ ಇರುವಾಗ  ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ದೆಹಲಿಯಲ್ಲಿ ಓಡಾಡುತ್ತಿರುವ ಫೋಟೋ ಇದೀಗ ಸಖತ್ ಟ್ರೆಂಡ್ ಆಗಿದೆ. 

ಕಳೆದ ವಾರವಷ್ಟೇ ಬೆಂಗಳೂರಿನ ಹೋಟೆಲ್ ಒಂದರಲ್ಲಿ ದೋಸೆ ಸವಿದ ವಿರುಷ್ಕಾ ಜೋಡಿ ಈಗ ದೆಹಲಿಯ ಗಲ್ಲಿ ಗಲ್ಲಿ ತಿರುಗಾಡುತ್ತಿರುವ ಫೋಟೋ ಒಂದನ್ನು ಸ್ವತಃ ಕಿಂಗ್ ಕೊಹ್ಲಿ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Virat Kohli (@virat.kohli)

ಇದನ್ನೂ ಓದಿ- Virushka Love Story: ಪ್ರೀತಿ, ಜಗಳ.. ಮದುವೆಗೂ ಮುನ್ನ ಬ್ರೇಕಪ್! ಅನುಷ್ಕಾ - ವಿರಾಟ್‌ ಮತ್ತೆ ಒಂದಾಗಿದ್ದೇ ಅಚ್ಚರಿ!!

ಲಕ್ನೋ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಲಕ್ನೋ ನ ನವೀನ್ ಉಲ್ ಹಕ್ ಹಾಗೂ ಗೌತಮ್ ಗಂಭೀರ್ ನಡುವೆ ನಡೆದ ಗಲಾಟೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ , ಗೌತಮ್ ಗಂಭೀರ್ ಹಾಗೂ ನವೀನ್ ಉಲ್ ಹಕ್ ಗೆ ಬಿಸಿಸಿಐ ದಂಡ ವಿಧಿಸಿತ್ತು. 

ಬಿಸಿಸಿಐ ಆದೇಶದಂತೆ ವಿರಾಟ್ ಕೊಹ್ಲಿ ಹಾಗೂ ಗಂಭೀರ್ ಗೆ ಶೇಕಡಾ ನೂರರಷ್ಟು ದಂಡ ವಿಧಿಸಿದ್ದಾರೆ ಎನ್ನಲಾಗಿದ್ದು ಕೊಹ್ಲಿ ಅವರು ಸುಮಾರು 1.07 ಕೋಟಿ ಹಾಗೂ ಗೌತಮ್ ಗಂಭೀರ್ 25 ಲಕ್ಷ ರೂಪಾಯಿ ಜೊತೆಗೆ ನವೀನ್ ಉಲ್ ಹಕ್ ಸುಮಾರು 1.79 ಲಕ್ಷ ರೂಪಾಯಿ ದಂಡವನ್ನು ಭರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ- ಇದ್ದಕ್ಕಿದ್ದಂತೆ ಶತ್ರುಗಳಾಗಿ ಬದಲಾದ ಕ್ರಿಕೆಟ್ ದಿಗ್ಗಜರು ! ಕ್ರಿಕೆಟ್ ಲೋಕವನ್ನೇ ಬೆಚ್ಚಿ ಬೀಳಿಸಿದ್ದ ನಡೆ

ಈಗ ವಿರಾಟ್ ಕೊಹ್ಲಿ ತಮ್ಮ instagram ನ ಒಂದು ಪೋಸ್ಟ್ ನಿಂದ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News