Virat Kohli: ಶತಕ ತಂದ ಸಂತಸ: ಪತ್ನಿಗೆ ವಿಡಿಯೋ ಕಾಲ್ ಮಾಡಿ ಹೀಗೊಂದು ಪ್ರೇಮಸಂದೇಶ ಕಳುಹಿಸಿದ ಕೊಹ್ಲಿ!

Virat Kohli video calls Anushka after scoring century: ವಿರಾಟ್ ಅವರ ಶತಕ ಸಂಭ್ರಮವನ್ನು ಅನುಷ್ಕಾ ಕೊಂಡಾಡಿದ್ದು, ಪತ್ನಿಯ ಸ್ಪೋಟಕ ಬ್ಯಾಟಿಂಗ್’ನ್ನು ಹೊಗಳಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಸ್ಪೋರಿ ಶೇರ್ ಮಾಡಿರುವ ಅನುಷ್ಕಾ, ಕೊಹ್ಲಿ ಫೋಟೋಗಳನ್ನು ಕೊಲಾಜ್ ಮಾಡಿ “What A Innings” ಎಂದು  ಬರೆದಿದ್ದಾರೆ.

Written by - Bhavishya Shetty | Last Updated : May 19, 2023, 01:26 PM IST
    • ಹೈದರಾಬಾದ್ ವಿರುದ್ಧ ಶತಕ ಬಾರಿಸಿದ ನಂತರ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ
    • ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡುತ್ತಿರುವುದು ಕಂಡುಬಂದಿತ್ತು
    • ಹಲವಾರು ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್
 Virat Kohli: ಶತಕ ತಂದ ಸಂತಸ: ಪತ್ನಿಗೆ ವಿಡಿಯೋ ಕಾಲ್ ಮಾಡಿ ಹೀಗೊಂದು ಪ್ರೇಮಸಂದೇಶ ಕಳುಹಿಸಿದ ಕೊಹ್ಲಿ!  title=
Virat Video Call with Anushka

Virat Kohli video calls Anushka after scoring century: ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶತಕ ಬಾರಿಸಿದ ನಂತರ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಗುರುವಾರ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡುತ್ತಿರುವುದು ಕಂಡುಬಂದಿತ್ತು.

ಇದನ್ನೂ ಓದಿ: “ಮ್ಯಾಂಗೋ ಬಾಯ್ ಎಲ್ಲಿದ್ದೀಯಪ್ಪಾ..!” ಕೊಹ್ಲಿ ಶತಕ ಬಾರಿಸುತ್ತಿದ್ದಂತೆ ವೈರಲ್ ಆದ ಪೋಸ್ಟ್: ಯಾರಿದು Mango Boy?

ವಿರಾಟ್ ಮತ್ತು ಅನುಷ್ಕಾ ವೀಡಿಯೋ ಕಾಲ್‌ ನಲ್ಲಿ ಮಾತನಾಡುತ್ತಿರುವ ಹಲವಾರು ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ವಿರಾಟ್ ಅವರ ಶತಕ ಸಂಭ್ರಮವನ್ನು ಅನುಷ್ಕಾ ಕೊಂಡಾಡಿದ್ದು, ಪತ್ನಿಯ ಸ್ಪೋಟಕ ಬ್ಯಾಟಿಂಗ್’ನ್ನು ಹೊಗಳಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಸ್ಪೋರಿ ಶೇರ್ ಮಾಡಿರುವ ಅನುಷ್ಕಾ, ಕೊಹ್ಲಿ ಫೋಟೋಗಳನ್ನು ಕೊಲಾಜ್ ಮಾಡಿ “What A Innings” ಎಂದು  ಬರೆದಿದ್ದಾರೆ.

 

 

ವಿರಾಟ್-ಫಾಫ್ ಅಬ್ಬರಕ್ಕೆ ಕಮರಿದ ಹೈದರಾಬಾದ್:

ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಅವರ 172 ರನ್‌ ಗಳ ಜೊತೆಯಾಟವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ಕಾರಣವಾಗಿದೆ. ಮೊದಲು ಸನ್‌’ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಮಾಡಿತ್ತು. 20 ಓವರ್ ಅಂತ್ಯಕ್ಕೆ  5 ವಿಕೆಟ್ ಕಳೆದುಕೊಂಡು 186 ರನ್ ಕಲೆ ಹಾಕಿತ್ತು ಹೈದರಾಬಾದ್. ಈ ಗುರಿ ಬೆನ್ನತ್ತಿದ ಆರ್ ಸಿ ಬಿ, 19.2 ಓವರ್ ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಪ್ಲೇ ಆಫ್ ಕನಸು ಜೀವಂತವಾಗಿರಿಸಿತು.

ಈ ಪಂದ್ಯದಲ್ಲಿ ಕೊಹ್ಲಿ 63 ಎಸೆತಗಳಲ್ಲಿ ಶತಕ ಬಾರಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾದರು. ಇನ್ನು ಈ ಶತಕದ ಮೂಲಕ ನಾಲ್ಕು ವರ್ಷಗಳ ಕಾಯುವಿಕೆಯನ್ನು ಕೊಹ್ಲಿ ಕೊನೆಗೊಳಿಸಿದರು.

ಇದು ಪ್ರಸ್ತುತ ನಡೆಯುತ್ತಿರುವ IPL 2023 ರಲ್ಲಿ ಕೊಹ್ಲಿ ಬಾರಿಸಿದ ಮೊದಲ ಶತಕವಾಗಿದೆ. ಲೀಗ್ ಇತಿಹಾಸದಲ್ಲಿ ಹೆಚ್ಚಿನ ಶತಕಗಳ ಬಾರಿಸಿದ ದಾಖಲೆ ಇದುವರೆಗೆ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ (6) ಹೆಸರಲ್ಲಿತ್ತು. ಇದೀಗ ಜಂಟಿಯಾಗಿ ಆ ಸ್ಥಾನವನ್ನು ವಿರಾಟ್ ಮತ್ತು ಗೇಲ್ ತುಂಬಲಿದ್ದಾರೆ.

ಇದು ವಿರಾಟ್ ಅವರ ಐಪಿಎಲ್ ವೃತ್ತಿ ಜೀವನದಲ್ಲಿ ಆರನೇ ಶತಕವಾಗಿದೆ. ಈ ಮೂಲಕ ಐಪಿಎಲ್‌ ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಕ್ರಿಸ್ ಗೇಲ್ ಅವರನ್ನು ಸರಿಗಟ್ಟಿದ್ದಾರೆ.

ಇದನ್ನೂ ಓದಿ: RCB ಪ್ಲೇ-ಆಫ್ ಕನಸಿಗೆ ಟರ್ನಿಂಗ್ ಪಾಯಿಂಟ್ ನೀಡಿದ್ದು ಆ ‘ಬಾಲ್’: ಸ್ಪೋಟಕ ಇನ್ನಿಂಗ್ಸ್ ಶುರುವಾಗಿದ್ದೇ ಅಲ್ಲಿಂದ!

ಈ ಪಂದ್ಯದಲ್ಲಿ ಕೊಹ್ಲಿ ವಿಶ್ವದಾಖಲೆಯನ್ನೂ ಮಾಡಿದ್ದಾರೆ. ಟಿ20 ಕ್ರಿಕೆಟ್‌ ನಲ್ಲಿ ತಂಡದೊಂದಿಗೆ ಆಡುವಾಗ 7500 ರನ್ ಪೂರೈಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಕೊಹ್ಲಿ. ಇಷ್ಟೇ ಅಲ್ಲ, ವಿರಾಟ್ ಐಪಿಎಲ್‌ ನಲ್ಲಿ ಆರನೇ ಬಾರಿಗೆ 500 ಕ್ಕೂ ಹೆಚ್ಚು ವೈಯಕ್ತಿಕ ಸ್ಕೋರ್ ಮಾಡಿದ್ದಾರೆ ಮತ್ತು ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News