ನವದೆಹಲಿ: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ವಿರಾಟ್ ಕೊಹ್ಲಿ ಕೊನೆಯ ಎರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.ಇದಕ್ಕೆ ಕಾರಣ ಜನವರಿ ತಿಂಗಳಲ್ಲಿ ಪತ್ನಿ ಅನುಷ್ಕಾ ಶರ್ಮಾ ಮಗುವಿನ ನಿರೀಕ್ಷೆಯಲ್ಲಿರುವುದರಿಂದಾಗಿ ಅವರು ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ದೂರ ಉಳಿಯಬಹುದು ಎನ್ನಲಾಗಿದೆ.
ಜನಪ್ರಿಯತೆಯಲ್ಲಿ ಧೋನಿ ಸಚಿನ್ ಮತ್ತು ಕೊಹ್ಲಿಯನ್ನು ಮೀರಿಸಿದ್ದಾರೆ-ಸುನಿಲ್ ಗವಾಸ್ಕರ್
ಈ ಬಗ್ಗೆ ವಿರಾಟ್ ಕೊಹ್ಲಿ ಅಧಿಕೃತವಾಗಿ ಇನ್ನು ಏನೂ ತಿಳಿಸಿಲ್ಲ, ಆದರೆ ಡಿಸೆಂಬರ್ 17 ರಿಂದ ಪ್ರಾರಂಭವಾಗುವ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳ ನಂತರ ಕೊಹ್ಲಿ ಪಿತೃತ್ವ ರಜೆ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ. ಕೊಹ್ಲಿ ನಿರ್ಧರಿಸಿದರೆ ರಹಾನೆ ಭಾರತೀಯ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
IPL 2020: ಆರ್ಸಿಬಿಗೆ ಈ ಬಾರಿಯೂ ಕಪ್ ಇಲ್ಲ ಎಂದ ಈ ಇಂಗ್ಲೆಂಡ್ ಆಟಗಾರ..!
ಕುಟುಂಬಕ್ಕೆ ಆದ್ಯತೆ ಇದೆ ಎಂದು ಬಿಸಿಸಿಐ ಯಾವಾಗಲೂ ನಂಬಿದೆ. ಒಂದು ವೇಳೆ, ಪಿತೃತ್ವ ವಿರಾಮವನ್ನು ಪಡೆಯಲು ವಿರಾಟ್ ಕೊಹ್ಲಿ ನಿರ್ಧರಿಸಿದರೆ, ನಂತರ ಅವನು ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಮಾತ್ರ ಲಭ್ಯವಿರುತ್ತಾರೆ 'ಎಂದು ಮೂಲಗಳು ತಿಳಿಸಿವೆ.ಕೊಹ್ಲಿ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ಅವರ ಉಪಸ್ಥಿತಿಯನ್ನು ಬಳಸಿಕೊಳ್ಳಬಹುದು ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ಆಸ್ಟ್ರೇಲಿಯಾ ವಿರುದ್ದ ನಾಲ್ಕು ಟೆಸ್ಟ್ ಪಂದ್ಯಗಳು ಅಡಿಲೇಡ್ (ಹೊನಲು ಬೆಳಕು, ಡಿಸೆಂಬರ್ 17-21), ಮೆಲ್ಬೋರ್ನ್ (ಡಿಸೆಂಬರ್ 26-30), ಸಿಡ್ನಿ (ಜನವರಿ 7-11, 2021) ಮತ್ತು ಬ್ರಿಸ್ಬೇನ್ (ಜನವರಿ 15-19) ನಲ್ಲಿ ನಡೆಯಲಿವೆ.