ನಾಗಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ ತಂಡವು 50 ಓವರ್ ಗಳ 250 ರನ್ ಗಳ ಸವಾಲಿನ ಮೊತ್ತವನ್ನು ಗಳಿಸಿತು.
Virat Kohli scored his 40th ODI century but 4/29 from Pat Cummins has helped Australia bowl out India for 250 in Nagpur. Which side are you backing to win from here?#INDvAUS LIVE ➡️ https://t.co/pNkv2db4Mg pic.twitter.com/Vgq0Z8GmaV
— ICC (@ICC) March 5, 2019
ಭಾರತದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ನಾಯಕ ವಿರಾಟ್ ಕೊಹ್ಲಿ 120 ಎಸೆತಗಳಲ್ಲಿ 116 ರನ್ ಗಳಿಸಿದರು.ಆ ಮೂಲಕ 40 ನೇ ಏಕದಿನ ಶತಕ ಗಳಿಸಿದ ಸಾಧನೆ ಮಾಡಿದರು.ಕೊಹ್ಲಿ ಹೊರತು ಪಡಿಸಿ ವಿಜಯ ಶಂಕರ್ 46 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಅಂತ ಉತ್ತಮ ಪ್ರದರ್ಶನ ನೀಡಲಿಲ್ಲ.
ಇನ್ನೊಂದೆಡೆಗೆ ಪ್ಯಾಟ್ ಕಮಿನಿಸ್ ನಾಲ್ಕು ವಿಕೆಟ್ ಗಳನ್ನು ಪಡೆಯುವ ಮೂಲಕ ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಸದ್ಯ ಐದು ಪಂದ್ಯಗಳ ಸರಣಿಯಲ್ಲಿ ಭಾರತವು 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.