ವಿರಾಟ್ ಕೊಹ್ಲಿ, ಸ್ಮೃತಿ ಮಂಧಾನಾ 2018ರ ವಿಸ್ಡನ್ ವರ್ಷದ ಕ್ರಿಕೆಟಿಗರ ಪ್ರಶಸ್ತಿಗೆ ಆಯ್ಕೆ

ಭಾರತದ ವಿರಾಟ್ ಕೊಹ್ಲಿ ಹಾಗೂ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನಾ ಏಕದಿನ ಹಾಗೂ ಟ್ವೆಂಟಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಿನ್ನಲೆಯಲ್ಲಿ 2018 ರ ವಿಸ್ಡನ್ ಪ್ರಮುಖ ಕ್ರಿಕೆಟ್ ಆಟಗಾರರ ಸ್ಥಾನದಲ್ಲಿ ಅಗ್ರಸ್ತಾನವನ್ನು ಪಡೆದುಕೊಂಡಿದ್ದಾರೆ.

Last Updated : Apr 10, 2019, 04:04 PM IST
ವಿರಾಟ್ ಕೊಹ್ಲಿ, ಸ್ಮೃತಿ ಮಂಧಾನಾ 2018ರ ವಿಸ್ಡನ್ ವರ್ಷದ ಕ್ರಿಕೆಟಿಗರ ಪ್ರಶಸ್ತಿಗೆ ಆಯ್ಕೆ  title=
File Image

ನವದೆಹಲಿ: ಭಾರತದ ವಿರಾಟ್ ಕೊಹ್ಲಿ ಹಾಗೂ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನಾ ಏಕದಿನ ಹಾಗೂ ಟ್ವೆಂಟಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಿನ್ನಲೆಯಲ್ಲಿ 2018 ರ ವಿಸ್ಡನ್ ಪ್ರಮುಖ ಕ್ರಿಕೆಟ್ ಆಟಗಾರರ ಸ್ಥಾನದಲ್ಲಿ ಅಗ್ರಸ್ತಾನವನ್ನು ಪಡೆದುಕೊಂಡಿದ್ದಾರೆ.

ಭಾರತದ ವಿರಾಟ್ ಕೊಹ್ಲಿ ಜೊತೆಗೆ  ಟಮ್ಮಿ ಬ್ಯೂಮಾಂಟ್, ರೋರಿ ಬರ್ನ್ಸ್, ಜೋಸ್ ಬಟ್ಲರ್ ಸ್ಯಾಮ್ ಕರ್ರನ್  ಕೂಡ ಐವರು ಪ್ರಮುಖ ಕ್ರಿಕೆಟ್ ಆಟಗಾರರಲ್ಲಿ ಸ್ಥಾನ ಪಡೆದಿದ್ದಾರೆ.ಈ ಪ್ರಶಸ್ತಿಯನ್ನು 1889 ರಲ್ಲಿ ಅಲ್ಮನಾಕ್  ಎನ್ನುವವರು  ಮೊದಲು ಪರಿಚಯಿಸಿದರು. 

ಐಸಿಸಿ ವರ್ಷದ ಕ್ರಿಕೆಟಿಗ, ಅತ್ಯತ್ತಮ ಐಸಿಸಿ ಏಕದಿನ ಆಟಗಾರ ,ಟೆಸ್ಟ್ ಆಟಗಾರ  ಹಾಗೂ  ವರ್ಷದ ಆಟಗಾರನಿಗೆ ನೀಡುವ  ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಟ್ರೋಫಿಯನ್ನು ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನ್ನುವ ಶ್ರೆಯವನ್ನು ತಮ್ಮದಾಗಿಸಿಕೊಂಡರು.

ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ 2.735 ರನ್ ಗಳನ್ನು ಗಳಿಸುವ ಮೂಲಕ ಸತತವಾಗಿ ಮೂರನೇ ಬಾರಿಗೆ ಪ್ರಮುಖ ಆಟಗಾರರ ಸ್ಥಾನದಲ್ಲಿ ಅಗ್ರಸ್ತಾನವನ್ನು ಪಡೆದಿದ್ದಾರೆ. ಇನ್ನೊಂದೆಡೆಗೆ ಅಫ್ಘಾನಿಸ್ತಾನದ ರಶೀದ್ ಖಾನ್ ವರ್ಷದ ಟ್ವೆಂಟಿ 20 ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದಾರೆ.

Trending News